ಧರ್ಮಸ್ಥಳ: ಬೆಂಗಳೂರಿನ ಭಕ್ತರಿಂದ ದೇವಸ್ಥಾನದಲ್ಲಿ ಅಲಂಕಾರ ಸೇವೆ

Upayuktha
0


ಉಜಿರೆ: ಧರ್ಮಸ್ಥಳದಲ್ಲಿ ಶುಕ್ರವಾರ ರಾತ್ರಿ ಕಂಚಿಮಾರುಕಟ್ಟೆ ಉತ್ಸವ ನಡೆಯಿತು


ಉಜಿರೆ: ಬೆಂಗಳೂರಿನ ಮಾರುಕಟ್ಟೆ ಹೂವಿನ ವ್ಯಾಪಾರಸ್ಥರು  ಮತ್ತು ಡೆಕೊರೇಟರ‍್ಸ್  ಹೂವು, ಹಣ್ಣು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು, ಅನ್ನಛತ್ರ, ಮೊದಲಾದ ಕಟ್ಟಡಗಳಿಗೆ ಅಲಂಕಾರ ಸೇವೆ ಮಾಡಿದರು.


ಅನಾನಸು, ಸೇಬು, ದ್ರಾಕ್ಷಿ, ತೆಂಗಿನಕಾಯಿ, ಕಲ್ಲಂಗಡಿ, ಕಬ್ಬು ಮೊದಲಾದವುಗಳನ್ನು ತಲಾ 300 ಕೆ.ಜಿ. ಬಳಸಲಾಗಿದೆ.


ಲಿಲಿಯಂ, ಬಿ.ಒ.ಪಿ. ಆರ್ಕಿಡ್, ಗುಲಾಬಿ, ಗ್ಲಾಡಿಯೊ, ಕ್ಯೂಬ್‌ರೋಸ್ ಮೊದಲಾದ ಹೂವುಗಳನ್ನು ಬಳಸಲಾಗಿದೆ.


ಸುಮಾರು 300 ಮಂದಿ ಶ್ರಮವಹಿಸಿ ಅಲಂಕಾರ ಸೇವೆ ಮಾಡಿದ್ದು, ಸುಮಾರು 10 ಲಕ್ಷ ರೂ. ವೆಚ್ಚವಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.


ವಸ್ತುಪ್ರದರ್ಶನ ಮಂಟಪದಲ್ಲಿ ಬೆಂಗಳೂರಿನ ನೃತ್ಯಕುಟೀರ ತಂಡದವರಿಂದ ವಿದುಷಿ ಶ್ರೀಮತಿ ದೀಪಾ ಭಟ್ ನಿರ್ದೇಶನದಲ್ಲಿ ನೃತ್ಯರೂಪಕ ನಡೆಯಿತು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top