ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುಪೂಜಾ ಮಹೋತ್ಸವ

Chandrashekhara Kulamarva
0


ದೇಲಂಪಾಡಿ: ಪುತ್ತಿಗೆ ಪಂಚಾಯತಿನ ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂ ಪ್ರತಿಯಂತೆ ಜರಗುವ ಧನುಪೂಜೆ ಮಹೋತ್ಸವ ಸೋಮವಾರ ಆರಂಭಗೊಂಡಿತು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಆರಂಭಗೊಂಡ ಧನುಪೂಜಾ ಮಹೋತ್ಸವದಂಗವಾಗಿ ಬೆಳಗ್ಗೆ ವೇದಘೋಷ, ರುದ್ರಪಾರಾಯಣ ಜರಗಿತು. ಬಳಿಕ ಮಹಾಪೂಜೆ ಜರಗಿತು.


ಜಿಲ್ಲೆಯ ಪ್ರಧಾನ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ದೇಲಂಪಾಡಿ ಕ್ಷೇತ್ರಕ್ಕೆ ನೆರೆಯ ಕರ್ನಾಟಕ ಗಡಿ ಭಾಗಗಳಿಂದ ಭಕ್ತ ಜನ‌ ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ಧನುಪೂಜಾ ಮಹೋತ್ಸವವನ್ನು ನಾಡಿನ ಉತ್ಸವ ಪ್ರತೀತಿಯಲ್ಲಿ ಕೊಂಡಾಡುವ ಈ ಕ್ಷೇತ್ರಕ್ಕೆ ಬಂದಂತಹ ಅತಿಥಿಗಳ ಸತ್ಕಾರ ಹಾಗೂ ಸೇವಾ ಕೈಂಕರ್ಯ ಇಲ್ಲಿಗೆ ಭೇಟಿ ನೀಡಿದ ಪ್ರತಿಯೊಬ್ಬರ ಪ್ರಶಂಸನೆಗೆ ಪಾತ್ರವಾಗಿದೆ. ಒಂದು ತಿಂಗಳ ಪರ್ಯಂತ ಜರಗುವ ಧನುಪೂಜಾ ಮಹೋತ್ಸವ ಜನವರಿ 14ರಂದು ಸಮಾಪ್ತಿಗೊಳ್ಳಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top