ಹೋದರೆ ಹೋಗು ನನಗೇನು
ಕಾದಿಹ ಹೊಸಬನು ತಾನು
ಮೋದದಿ ನೋಡಿದ ದಿನ ವೆಲ್ಲ
ಓಡಿದೆ ಈಗದು ಇಲ್ಲಿಲ್ಲ.
ಗೋಡೆಯಲೇತಕೆ ಈಗಿರುವೆ
ನೋಡಲು ವ್ಯರ್ಥವು ನಿನ್ನ ಬಗೆ
ಬಾಡಿದ ಹೂವಿನ ತೆರ ನೀನು
ಓಡುತ ಬಂದನು ಹೊಸಬನು ತಾನು
ಮಗನಿಗೆ ಪುಸ್ತಕ ಮುಖ ಹೊದಿಕೆ
ಸೊಗದಲಿ ಬಳಸುವೆ ಮಾಡಲಿಕೆ
ನಗುತಲಿ ಕಡಲೆಯ ಕಟ್ಟುವೆಡೆ
ಸಿಗು ನೀ ಸಾಕೆನಗಾ ಪರಿಗೆ
ಕೆಲಸವು ಮುಗಿದರೆ ಹಾಗೇನೆ
ಒಲವದು ಹಳಸಿದ ತೆರ ತಾನೆ
ನಲುವಿನ ಪರದೆಯ ಹಾಕುವರು
ಕೆಲವರು ಇರುವರು ಇಂಥವರು
- ಡಾ ಸುರೇಶ ನೆಗಳಗುಳಿ, ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ