ಬೆಂಗಳೂರು: ಉಡುಪಿ ತಾಲ್ಲೂಕು ಮಂದರ್ತಿ ಹೆಗ್ಗುಂಜೆ ಗ್ರಾಮದ ಉಮೇಶ್ ಕುಂದರ್ ಅವರು ವಿಶೇಷ ಕ್ರೀಡಾಪಟುವಾಗಿ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದು, ಅಂತರರಾಷ್ಟ್ರೀಯ ಅಂಗವಿಕಲ ದಿನದ ಪ್ರಯುಕ್ತ ಡಿಸೆಂಬರ್ 3ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮೇಶ್ ಕುಂದರ್ ಅವರನ್ನು ಸನ್ಮಾನಿಸಿದರು.
1994ರಿಂದ 2009ರ ನಡುವೆ 100 ಮೀಟರ್, 200 ಮೀಟರ್, 400 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಜಾವೆಲಿನ್ ಎಸೆತ ಮೊದಲಾದ ಕ್ರೀಡಾ ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಉಮೇಶ್ ಅವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಲವು ಪದಕಗಳನ್ನು ಗಳಿಸಿದ್ದು, 1999ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಪ್ಯಾರಾ ಏಷ್ಯಾ ಪೆಸಿಫಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಈ ಸಾಧನೆಯನ್ನು ಗಮನಿಸಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಉಮೇಶ್ ಅವರನ್ನು ಸನ್ಮಾನಿಸಿದ್ದರು. 2008ರಲ್ಲಿ ನಡೆದ ಅಂತರರಾಷ್ಟ್ರೀಯ ವಿಕಲಚೇತನರ ಅಥ್ಲೆಟಿಕ್ಸ್‌ನಲ್ಲಿ ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಗಳಿಸಿದ್ದರು.
ಕಿರಿಯ ಕ್ರೀಡಾಪಟುವಾಗಿರುವ ಉಮೇಶ್ ಕುಂದರ್ ಇದೀಗ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿಶೇಷ ಚೇತನರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಉಮೇಶ್ ಅವರ ’ವೈಯಕ್ತಿಕ ಕ್ಷೇತ್ರ’ದಲ್ಲಿನ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಅವರನ್ನು ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಈ ಮೂಲಕ ಉಡುಪಿ ಜಿಲ್ಲೆಗೆ ಅವರು ಕೀರ್ತಿ ತಂದಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ