ಚಿಣ್ಣರ ನೃತ್ಯ ಸಂಹಿತೆ - 2024

Upayuktha
0


ಬೆಂಗಳೂರು: ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯು ಡಿಸೆಂಬರ್ 28, ಶನಿವಾರ ಬೆಳಗ್ಗೆ 10 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ವಿಶೇಷವಾದ ನೃತ್ಯ ಹಬ್ಬ, ಚಿಣ್ಣರ ನೃತ್ಯ ಸಂಹಿತ, ಮಕ್ಕಳಿಂದ ಮಕ್ಕಳಿಗಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆ. 


ವಿದುಷಿ ಶ್ರೀಮತಿ ಸ್ಮಿತಾ ಶ್ರೀಪತಿರವರ ನಿರ್ದೇಶನದಲ್ಲಿ ಅರ್ಥ ನೃತ್ಯ ಕಲಾಮಂದಿರದ ಮಕ್ಕಳು ಭರತನಾಟ್ಯವನ್ನು, ವಿದುಷಿ ಶ್ರೀಮತಿ ಗೌರಿ ಸಾಗರ್ ರವರ ನಿರ್ದೇಶನದಲ್ಲಿ ಶ್ರೀ ಕಂಠೇಶ್ವರ ಕಲಾ ಕೇಂದ್ರದ ಮಕ್ಕಳು ಭರತನಾಟ್ಯವನ್ನು, ವಿದುಷಿ ಶ್ರೀಮತಿ ಭಾನುಪ್ರಿಯಾ ರಾಕೇಶ್ ರವರ ನಿರ್ದೇಶನದಲ್ಲಿ ಅರ್ಕ ಕಲಾ ಕುಟಿರದ ಮಕ್ಕಳು ಭರತನಾಟ್ಯವನ್ನು, ವಿದುಷಿ ಶ್ರೀಮತಿ ಪದ್ಮಜ ಜಯರಾಮ್ ರವರ ನಿರ್ದೇಶನದಲ್ಲಿ ಶ್ರೀ ನಾಟ್ಯ ಕಲಾರ್ಪಣ ನೃತ್ಯ ಕೇಂದ್ರದ ಮಕ್ಕಳು ಭರತನಾಟ್ಯವನ್ನು ಹಾಗೂ ವಿದ್ವಾನ್ ಕಲಾಯೋಗಿ ಕೆ ಪಿ ಸತೀಶ್ ಬಾಬು ರವರ ನಿರ್ದೇಶನದಲ್ಲಿ ನಾಟ್ಯೇಶ್ವರ ನೃತ್ಯ ಶಾಲೆಯ ಮಕ್ಕಳು ಭರತನಾಟ್ಯ ಜಾನಪದ ನೃತ್ಯವನ್ನು ಮಾಡುತ್ತಿದ್ದಾರೆ.


ಮುಖ್ಯ ಅತಿಥಿಗಳಾಗಿ ಶ್ರೀ ಆರ್ ಚಂದ್ರಶೇಖರ್ (ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ನಗರಜಿಲ್ಲೆ) ಹಾಗೂ ನೃತ್ಯ ದಿಶಾ ಟ್ರಸ್ಟ್ ನ ನಿರ್ದೇಶಕರು, ಡಾ. ದರ್ಶಿನಿ ಮಂಜುನಾಥ್ ರವರು ಆಗಮಿಸುತ್ತಿದ್ದಾರೆ ಎಂದು ಪ್ರಣವಾಂಜಲಿ ಸಂಸ್ಥೆಯ ನಿರ್ದೇಶಕಿ ಪವಿತ್ರ ಪ್ರಶಾಂತ್ ತಿಳಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top