ಕಣ್ಮನ ತಣಿಸಿದ ನೃತ್ಯ ಪ್ರದರ್ಶನ

Upayuktha
0



ಬೆಂಗಳೂರು: ನಾಟ್ಯೇಶ್ವರ ನೃತ್ಯ ಶಾಲೆಯ ಗುರುಗಳಾದ ಕಲಾಯೋಗಿ ಶ್ರೀ ಕೆ.ಪಿ.ಸತೀಶ್ ಬಾಬುರವರ ಮಾರ್ಗದರ್ಶನದಲ್ಲಿ ನೃತ್ಯ ಶಾಲೆಯ  24ನೇ ಹಿರಿಯ ವಿದ್ಯಾರ್ಥಿನಿ ಕು|| ಅದಿತಿ ಎಸ್. ಖಾಸ್ನೀಸ್ ರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಡಿಸೆಂಬರ್ 14, ಭಾನುವಾರ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ಯಶಸ್ವಿಯಾಗಿ ಮೂಡಿಬಂದಿತು. 


ವಾದ್ಯವೃಂದದಲ್ಲಿ ಗುರುಗಳಾದ ಕಲಾಯೋಗಿ .ಕೆ.ಪಿ.ಸತೀಶ್ ಬಾಬು, ಶಿಷ್ಯೆಯರಾದ ಭುವನ ಪ್ರಕಾಶ್, ಕು|| ಶ್ರೇಯಾ ಅಂದೇವಾಡಿಕರ್ (ನಾಟ್ಟುವಾಂಗ), ವಸುಧಾ ಬಾಲಕೃಷ್ಣ, (ಹಾಡುಗಾರಿಕೆ ), ಪಿ. ಜನಾರ್ದನ (ಮೃದಂಗ), ಆರ್. ಪಿ. ಪ್ರಶಾಂತ್ (ವೀಣೆ), ಗಣೇಶ್ ಕೆ.ಎಸ್. (ಕೊಳಲು), ಡಾ॥ ಅರುಣ್ (ರಿದಂ ಪ್ಯಾಡ್),  ವಾಣಿ ಸತೀಶ್ ಬಾಬು (ನಿರೂಪಣೆ ). 


ಪಾರಂಪರಿಕ ನೃತ್ಯಬಂದಗಳಾದ ತೋಡಯ ಮಂಗಳ, ಗುರುಶ್ಲೋಕ, ನರಸಿಂಹ ಕೌತ್ವಂ, ಅರ್ಧನಾರೀಶ್ವರ ಸೃತಿ, ಪದವರ್ಣ, ದೇವರನಾಮ, ಅಷ್ಟಪದಿ ಹಾಗೂ ಕೊನೆಯಲ್ಲಿ ಪಂಚರತ್ನ ತಿಲ್ಲಾನ, ಮಂಗಳದೊಂದಿಗೆ ಸಂಪನ್ನವಾಯಿತು. 


ಅತಿಥಿಗಳಾಗಿ ಮಾಜಿ ಬಿಬಿಎಂಪಿ ಸದಸ್ಯರಾದ  ಶ್ರೀನಿವಾಸ ಬಿದರಿ ಹಾಗೂ ಮಂಜುಳಾ ಜಗದೀಶ್ (ಸಪ್ತಸ್ವರ ನೃತ್ಯಾಲಯ) ಆಗಮಿಸಿದ್ದರು.  ಕಾರ್ಯಕ್ರಮವನ್ನು ಪೋಷಕರಾದ  ಶ್ರೀಧರ್ ಖಾಸ್ನೀಸ್  ಮತ್ತು  ವಿಭಾ ಖಾಸ್ನೀಸ್ ಬಹಳ ವ್ಯವಸ್ಥಿತವಾಗಿ ನಿರ್ವಹಿಸಿದ್ದರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top