ಬಂಟ್ವಾಳ: ವಕೀಲರ ದಿನಾಚರಣೆ- ಕಾನೂನು ಕಾರ್ಯಾಗಾರ

Upayuktha
0




ಬಂಟ್ವಾಳ: ವಕೀಲರ ಸಂಘ (ರಿ), ಬಂಟ್ವಾಳ ಮತ್ತು ಅಧಿವಕ್ತಾ ಪರಿಷತ್ ಕರ್ನಾಟಕ- ದಕ್ಷಿಣ ಪ್ರಾಂತ, ದಕ್ಷಿಣ ಕನ್ನಡ ಜಿಲ್ಲೆ- ಬಂಟ್ವಾಳ ಘಟಕ ಇವರ ಜಂಟಿ ಅಶ್ರಯದಲ್ಲಿ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆಯ ಪ್ರಯುಕ್ತ ಕಾನೂನು ಕಾರ್ಯಾಗಾರವನ್ನು ಮಂಗಳವಾರ (ಡಿ.3) ಸಂಜೆ ಗಂಟೆ 4.00 ಗೆ ಸರಿಯಾಗಿ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.


ಹಿರಿಯ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ಭಾಗ್ಯಮ್ಮ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಕಳದ ಹಿರಿಯ ನ್ಯಾಯವಾದಿ ಎಂ. ವಿಜಯ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರೊಫೆಶನಲ್ ಎಥಿಕ್ಸ್ ನ ಬಗ್ಗೆ ತಮ್ಮ ಅಪಾರ ಅನುಭವ ಮತ್ತು ಹಿರಿತನದ ಅನುಭವಗಳನ್ನು ಸೇರಿಸಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೃಷ್ಣಮೂರ್ತಿ ಎನ್ ಹಾಗೂ ಅಧಿವಕ್ತಾ ಪರಿಷತ್ ಬಂಟ್ವಾಳದ ಅಧ್ಯಕ್ಷರು ಶ್ರೀಮತಿ ಉಮಾ ಎನ್ ಸೋಮಯಾಜಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಧಿವಕ್ತಾ ಪರಿಷತ್ ನ ಸಮಾಜಿಕ ಕಾರ್ಯದ ಅಂಗವಾಗಿ ವಕೀಲರ ದಿನಾಚರಣೆಯ ಪ್ರಯುಕ್ತ ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಆಶ್ರಮ ಅರ್ಕುಳ, ಪರಂಗಿಪೇಟೆ ಆಶ್ರಮಕ್ಕೆ 32,000/ ಮೌಲ್ಯದ ಫ್ರಿಜ್ ನ್ನು ಆಶ್ರಮದ ಸ್ಥಾಪಕರಾದ ಹರೀಶ್ ಪೆರ್ಗಡೆ ಯವರಿಗೆ ಹಸ್ತಾಂತರಿಸಲಾಯಿತು.


ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಎಂ.ಕೆ ವಿಜಯ್ ಕುಮಾರ್ ಅವರನ್ನು ವಕೀಲರ ಸಂಘ (ರಿ) ಬಂಟ್ವಾಳದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಕೀಲರ ಸಂಘ (ರಿ), ಬಂಟ್ವಾಳದ ಅಧ್ಯಕ್ಷರಾದ ರಿಚರ್ಡ್ ಕೊಸ್ತಾ ಎಂ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿ ಅಭ್ಯಾಗತರನ್ನು ಯುವ ವಕೀಲರು ಅದ ಸ್ವರ್ಣ ಗೌರಿಯವರು ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಅಧಿವಕ್ತಾ ಪರಿಷತ್ ನ ಜಿಲ್ಲೆಯ ಸದಸ್ಯ ವೀರೇಂದ್ರ ಎಂ ಸಿದ್ದಕಟ್ಟೆ ಧನ್ಯವಾದ ಸಲ್ಲಿಸಿದರು. ನಿತಿನ್ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top