ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಉತ್ತರ: ಡಿಪಿಎಸ್ ಹಬ್ಬ 2024- 2025

Chandrashekhara Kulamarva
0




ಬೆಂಗಳೂರು: ಭಾರತೀಯ ಸಾಂಸ್ಕೃತಿಕ ವೈಭವವನ್ನು ಸಾರುವ ಹಬ್ಬದ ಕಾರ್ಯಕ್ರಮವನ್ನು  ಡೆಲ್ಲಿ ಪಬ್ಲಿಕ್ ಶಾಲೆ ಉತ್ತರದಲ್ಲಿ ಆಚರಿಸಲಾಯಿತು. ಕೆ ಕೆ  ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥ ರೆಹಮಾನ್ ಖಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 



ಆಡಳಿತ ಮಂಡಳಿಯ ಹಲವಾರು ಗಣ್ಯ ಅತಿಥಿಗಳು  ಭಾಗವಹಿಸಿದ್ದರು. ಕರ್ನಾಟಕದ ಜಾನಪದ ನೃತ್ಯ ತಂಡದವರ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಭಾರತವನ್ನು ವಿಶಿಷ್ಟವಾಗಿ ಪ್ರತಿನಿಧಿಸುತ್ತಾ,  ಕರ್ನಾಟಕ ಮಾತ್ರವಲ್ಲದೆ ಕೇರಳ, ರಾಜಸ್ಥಾನ್, ತಮಿಳುನಾಡು, ಗುಜರಾತ್, ಕಾಶ್ಮೀರ ಮುಂತಾದ ರಾಜ್ಯಗಳ ಉಡುಗೆ ತೊಡುಗೆ ತೊಟ್ಟು ಪಥಸಂಚಲನ  ನಡೆಸಿದರು. 



ಭಾರತೀಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪೆವಿಲಿಯನ್ ಗಳನ್ನು ನಿರ್ಮಿಸಲಾಗಿತ್ತು. ಹಬ್ಬದ  ಅಂಗವಾಗಿ   ವಿದ್ಯಾರ್ಥಿಗಳು ಹಲವಾರು ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು. ಕರ್ನಾಟಕ, ಕೇರಳ, ಪಂಜಾಬ್ ಮುಂತಾದ ರಾಜ್ಯಗಳ ಜಾನಪದ ನೃತ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ವೈವಿಧ್ಯತೆಯಿಂದ ಕೂಡಿರುವ ಭಾರತದ ವಿಶಿಷ್ಟತೆಯನ್ನು ಪ್ರತಿಬಿಂಬಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಸುಮಾರು 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವ ಹಿಸಿದ್ದರು.



ಚಿಣ್ಣರಿಗಾಗಿ ಅವರ ಕಾಲ್ಪನಿಕ ಪಾತ್ರಗಳ ಮಾಯಾಲೋಕವನ್ನೆ ಸೃಷ್ಟಿಸಲಾಗಿತ್ತು. ಈ ಹಬ್ಬದಲ್ಲಿ ಭಾಗವಹಿಸಿದ ಎಲ್ಲರಿಗೂ ಇದು ಭಾರತೀಯ ಸಂಸ್ಕೃತಿಯ ಪರಂಪರೆ, ಜ್ಞಾನ, ಕಲೆ ಹಾಗೂ ಸಂಭ್ರಮದ ತಾಣವಾಗಿತ್ತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top