ಧನುರ್ಮಾಸ ಸಂಗೀತೋತ್ಸವಕ್ಕೆ ಚಾಲನೆ

Chandrashekhara Kulamarva
0


ಬೆಂಗಳೂರು: ಶ್ರೀ ಲಾಲ್ ದಾಸ್ ಭಕ್ತ ಆಂಜನೇಯಸ್ವಾಮಿ ಭಜನಾ ಮಂಡಳಿಯ ವತಿಯಿಂದ ಬಳೇಪೇಟೆಯ ಓಟಿಸಿ ರಸ್ತೆಯಲ್ಲಿರುವ ಶ್ರೀ ಲಾಲ್ ದಾಸ್ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿರುವ ಧನುರ್ಮಾಸ ಸಂಗೀತೋತ್ಸವ ಕಾರ್ಯಕ್ರಮವು ಡಿಸೆಂಬರ್ 16 ರಿಂದ ಜನವರಿ 14ರ ವರೆಗೆ ಒಂದು ತಿಂಗಳ ಕಾಲ ಪ್ರತಿದಿನ ಬೆಳಗ್ಗೆ 6-30ಕ್ಕೆ  ನಾಡಿನ ಹೆಸರಾಂತ ಕಲಾವಿದರುಗಳಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಿದೆ.


ಇಂದು (ಡಿಸೆಂಬರ್ 16) ಕು|| ದೀಪ್ತಿ ಮೋಹನ್ ಇವರ ಸಂಗೀತದಿಂದ ಪ್ರಾರಂಭವಾಯಿತು. ಇವರ ಸಂಗೀತ ಕಾರ್ಯಕ್ರಮಕ್ಕೆ ವಾದ್ಯ ಸಹಕಾರದಲ್ಲಿ ಪಿಟೀಲು ವಾದನದಲ್ಲಿ ಎಂ.ಎನ್. ಸತ್ಯನಾರಾಯಣ ಮತ್ತು ಮೃದಂಗ ವಾದನದಲ್ಲಿ ಶ್ರೀನಿವಾಸ್ ಅನಂತರಾಮಯ್ಯ ಸಾಥ್ ನೀಡಿದರು ಎಂದು ಕಾರ್ಯಕ್ರಮ ಸಂಚಾಲಕ ಖ್ಯಾತ ಮೃದಂಗ ವಾದಕ ಶ್ರೀನಿವಾಸ್ ಅನಂತರಾಮಯ್ಯ ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top