ಮಲ್ಲೇಶ್ವರಂ: ಆರನೇ ಸಂಗೀತ ಸಮ್ಮೇಳನ ಕಾರ್ಯಕ್ರಮ

Upayuktha
0

 




ಬೆಂಗಳೂರು: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ ನಡೆಸುತ್ತಿರುವ ಆರನೇ ಸಂಗೀತ ಸಮ್ಮೇಳನದ ಕಾರ್ಯಕ್ರಮವನ್ನು ನಗರದ ಮಲ್ಲೇಶ್ವರಂನಲ್ಲಿ ಇರುವ ಶ್ರೀ ರಾಮ ಮಂದಿರದಲ್ಲಿ ಮೂರು ದಿನಗಳ ಕಾಲ  ಹಮ್ಮಿಕೊಳ್ಳಲಾಗಿದೇ.

 


ದಿನಾಂಕ 20 ರಂದು ನಡೆದ ವಿಶೇಷ ಕೊನ್ನಕ್ಕೋಲ್ ಕಾರ್ಯಕ್ರಮವನ್ನು ನಡೆಸಿಕೊಡಲು ಬಂದಿದ್ಧ ವಿದ್ವಾನ್ ಬಿ ಆರ್ ಸೋಮಶೇಖರ್ ಜೋಯಿಸ್ ರವರು ಕೊನ್ನಕ್ಕೋಲ್ ನಲ್ಲಿ ವಿದುಷಿ ಶ್ರೀಮತಿ ಲಕ್ಷ್ಮಿ ನಾಗರಾಜ್ ರವರು ಗಾಯನದಲ್ಲಿ , ವಿದ್ವಾನ್  ಅಚ್ಚುತ್ ರಾವ್ ರವರು ವಯೊಲಿನ್ ನಲ್ಲಿ ಹಾಗು ವಿದುಷಿ ಶ್ರೀಮತಿ ಭಾಗ್ಯಲಕ್ಷ್ಮಿ ಎಂ ಕೃಷ್ಣ ರವರು ಮೋರ್ಸಿಂಗ್ ನಲ್ಲಿ, ವಿದುಷಿ ಲಾಸ್ಯಪ್ರಿಯ ರವರು ತಂಬೂರಿಯಲಿ ಸಹಕರಿಸಿದರು.


 

ಕೊನ್ನಕ್ಕೋಲ್ ಎಂಬುದು ದಕ್ಷಿಣ ಭಾರತೀಯ ಕರ್ನಾಟಕ ಸಂಗೀತದಲ್ಲಿ ತಾಳವಾದ್ಯ ಉಚ್ಚಾರಾಂಶಗಳನ್ನು ಪ್ರದರ್ಶಿಸುವ ಕಲೆಯಾಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಇದೇ ರೀತಿಯ ಪರಿಕಲ್ಪನೆಯನ್ನು ಪದಂತ್ ಎಂದು ಕರೆಯಲಾಗುತ್ತದೆ.



ಕೊನ್ನಕ್ಕೋಲ್ ಕಲೆಯ ಬೆಳವಣಿಗೆಗೆ ಸಾಕಷ್ಟು ಪ್ರಯತ್ನ ಪಡುತಿರುವ ಸಾಕಷ್ಟು ಕಲಾವಿದರಲ್ಲಿ ವಿದ್ವಾನ್ ಬಿ ಆರ್ ಸೋಮಶೇಖರ್ ಜೋಯಿಸ್ ರವರು ಮೊದಲಿಗರು ಎಂದು ಹೇಳಿದರೆ ತಪ್ಪಾಗಲಾರದು.  ಈ ವರ್ಷದ ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟಿನ ಯುವ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ವಿದ್ವಾನ್ ಬಿ ಆರ್ ಸೋಮಶೇಖರ್ ಜೋಯಿಸ್ ರವರು ಆಯ್ಕೆ ಯಾಗಿರುವುದು ಬಹಳ ಸಂತಸವನ್ನು ತಂದಿದೆ.



ದಿನಾಂಕ 20 ರಂದು ನಡೆದ ಕಾರ್ಯಕ್ರಮ ಒಂದು ವಿಶೇಷ ಪ್ರಯತ್ನವಾಗಿತ್ತು. ಗಾಯನದ ಜೊತೆ ಜೊತೆಗೆ ಹೇಗೆ ಕೊನ್ನಕ್ಕೋಲ್ ಉಚ್ಚಾರಾಂಶಗಳನ್ನು ಪ್ರಸ್ತುತ ಪಡಿಸಬಹುದು ಎಂದು ಅದ್ಭುತವಾಗಿ ಕಾರ್ಯಕ್ರಮದ ಮೂಲಕ ನಿರೂಪಿಸಿದ್ಧರೆ. 



ಕಾರ್ಯಕ್ರಮದ ಮೊದಲನೆಯ ಪ್ರಸ್ತುತಿಯಾಗಿ ಕಮಾಸ್ ರಾಗ ಆದಿ ತಾಳ ದಲ್ಲಿ ವಿದ್ವಾನ್ ಮುತ್ತಯ್ಯ ಭಾಗವತರ್ ರವರ ರಚನೆ ಮಾತೆ ಮಾಲಯಧ್ವಜ ಪಾಂಡ್ಯ ಸಂಜಾತೆ ಎನ್ನುವ ಧರು ವರ್ಣವನ್ನು ಪ್ರಸ್ತುತ ಪಡಿಸಿದರು.  ಈ ಪ್ರಸ್ತುತಿಯಲ್ಲಿ ಬರುವ ಸ್ವರಗಳಿಗೆ ತಕ್ಕಂತಹ ಕೊನ್ನಕ್ಕೋಲ್ ಉಚ್ಚಾರಾಂಶಗಳನ್ನು ಬಹಳ ಅಮೋಘವಾಗಿ ಸೋಮಶೇಖರ್ ಜೋಯಿಸ್ ರವರು ಪ್ರಸ್ತುತ ಪಡಿಸಿದರು. 



ಮುಂದೆ ಸರಸ್ವತಿ ನಮೋಸ್ತುತೇ , ಉಮಾಪತೇ ,ಏತಉನ್ನಾರ ಕಲ್ಯಾಣಿ ರಾಗದಲ್ಲಿ ಸಂಯೋಜನೆ ಗೊಂಡಿತ್ತು, ಈ ಸಂಯೋಜನೆಯಲ್ಲಿ ತನಿ ಆವರ್ತನ ದಲ್ಲಿ ತಿಶ್ರ, ಚತುರಶ್ರ, ಖಂಡ ಮುಕ್ತಯಾಯ, ತಿಶ್ರ ಗತಿ ಮೊಹರ ಬಹಳ ಅಮೋಘವಾಗಿ ಮೂಡಿ ಬಂತು. ರಾಮ ಮಂತ್ರವ ಜಪಿಸೋ ಹೇ ಮನುಜ, ರಾಮ ಲಖನ್ ಧನಪಾಯೋ ಭಜನ್ ಕೊನೇಯದಾಗಿ ಧನಶ್ರೀ ತಿಲ್ಲಾನ ಮಂಗಳಂ ನೊಂದಿಗೆ ಕಾರ್ಯಕ್ರಮವನ್ನು ಸಂಪೂರ್ಣ ಗೊಳಿಸಿದರು.



ವಿದುಷಿ ಲಕ್ಷ್ಮಿ ನಾಗರಾಜ್ ರವರ ಅದ್ಬುತ ಗಾಯನ, ವಿದ್ವಾನ್ ಬಿ ಅರ್ ಸೋಮಶೇಖರ್ ಜೋಯಿಸ್ ರವರ ಅಮೋಘ ಕೊನ್ನಕ್ಕೋಲ್, ನೆರೆದಿದ್ಧಾ ಪ್ರೇಷಕರ ಮನ ಸೂರೆಗೊಂಡಿತ್ತು. 



ದಿನಾಂಕ 22ರಂದು ವಿದ್ವಾನ್ ಬಿ ಅರ್ ಸೋಮಶೇಖರ್ ಜೋಯಿಸ್ ರವರ ಅತ್ಯಮೂಲವಾದ ಸಾಧನೆಗೆ ಸ್ವರ ಲಯ ಭಾರತೀ ಎನ್ನುವ ಬಿರುದನ್ನೂ ನೀಡಿ ಗೌರವಿಸಲಾಗುತ್ತಿದೆ.  ಈ ಮೂಲಕ ಸೋಮಶೇಖರ್ ಜೋಯಿಸ್ ರವರ ಶಿಷ್ಯ ವೃಂದ, ಹಿತ್ಯಿಶಿಗಳು, ಬಂದು ಮಿತ್ರರು, ಸಹ ಕಲಾವಿದರು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top