ಬೆಟ್ಟದ ನೆಲ್ಲಿಕಾಯಿ ಎಂದರೆ ಜನರು ಒಮ್ಮೆ ಆಕರ್ಷಿತರಾಗುತ್ತಾರೆ. ಇದೇನು ಬೆಟ್ಟದ ನೆಲ್ಲಿಕಾಯಿ ಟೀ ಅಂತಿರಾ? ಶುಗರ್, ಬಿಪಿ, ನಿದ್ರಾಹೀನತೆ, ಗ್ಯಾಸ್ಟಿಕ್, ಮಲಬದ್ಧತೆ, ರಕ್ತ ಶುದ್ಧೀಕರಣ, ಜೀರ್ಣಾಂಗ ವ್ಯವಸ್ಥೆ, ಕೊಲೆಸ್ಟ್ರಾಲ್ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗೆ ರಾಮಬಾಣ ಈ ಬೆಟ್ಟದ ನೆಲ್ಲಿಕಾಯಿ ಟೀ.
200ಮಿಲಿ ಲೀಟರ್ ನೀರಿಗೆ ಅರ್ಧ ಚಮಚ ಬೆಟ್ಟದ ನೆಲ್ಲಿಕಾಯಿ ಪುಡಿ ಮತ್ತು ಸ್ವಲ್ಪ ಸೈಂಧವ ಲವಣ ಸ್ವಲ್ಪ ಪ್ರಮಾಣದ ಜೇನುತುಪ್ಪ ಮಿಶ್ರಣ ಮಾಡಿ ಮೂರು ತಿಂಗಳು ಕಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಎಲ್ಲಾ ದೇಹದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಸೋಮನಾಥ್ ಬೆಂಗಳೂರು ಹಾಗೂ ಅವರ ತಾಯಿ ಪ್ರಮೀಳಾ ಬೆಂಗಳೂರು ಹೇಳುತ್ತಾರೆ.
ಇವರು ನಾಲ್ಕು ತಿಂಗಳು ಬೆಟ್ಟದ ನೆಲ್ಲಿಕಾಯಿ ಬೀಜ ಬೇರ್ಪಡಿಸಿ ಒಣಗಿಸಿ ಇಡಲಾಗುತ್ತದೆ ಅನಂತರ ಅದನ್ನು ಪುಡಿ ಮಾಡಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ. ಹಲವಾರು ಜನರು ಇದರ ಉಪಯೋಗ ತಿಳಿದುಕೊಂಡು ಖರೀದಿಸುತ್ತಿರುವುದು ವಿಶೇಷ.
-ರಕ್ಷಿತಾ ಚಪ್ಪರಿಕೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ