ಆಳ್ವಾಸ್ ವಿರಾಸತ್ ಅಂಗಳದಲ್ಲಿ ಗಮನ ಸೆಳೆದ ಭವಿಷ್ಯ ಹೇಳುವ ಕಂಪ್ಯೂಟರ್ ರೋಬೋಟ್

Upayuktha
0


ಮೂಡುಬಿದಿರೆ: ಐದು ದಿನಗಳ ಕಾಲ ನಡೆದ ಆಳ್ವಾಸ್ ವಿರಾಸತ್‌ ನಲ್ಲಿ ದೇಹದ ಉಷ್ಣಾಂಶದ ಮೇಲೆ ಭವಿಷ್ಯ ತಿಳಿಸುವ ರೋಬೋಟ್ ಜನರನ್ನು ತುಂಬಾ ಆಕರ್ಷಣೆಗೆ ಒಳಗಾಗಿಸಿದೆ.


ಚಿಕ್ಕ ಮಕ್ಕಳಿಂದ ವೃದ್ದರೂ ಕೂಡ ಈ ರೋಬೋಟ್ ಭವಿಷ್ಯ ಕೇಳಲು ಹಾತೊರೆಯುತ್ತಿದ್ದರು, ರೋಬೋಟ್ ಗೆ ಹೆಡ್ಫೋನ್ ಅಳವಡಿಸಲಾಗಿದ್ದು ಅದರಿಂದ ಮಾತನಾಡಬಹುದು. ಜೀವನದ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರ ಆ ರೋಬೋಟ್ ನೀಡುತ್ತಿತ್ತು.


ಕೇಳಿದವರೆಲ್ಲ ಚೆನ್ನಾಗಿದೆ ಎನ್ನುವ ಮೆಚ್ಚುಗೆ ವ್ಯಕ್ತಪಡಿಸಿದರು. ಭವಿಷ್ಯ ಹೇಳುವು ರೋಬೋಟ್ ಮಕ್ಕಳಿಗೆ ಆಟಿಕೆಯ ವಿಷಯವೆಂಬಂತೆ ಅದರೊಂದಿಗೆ ಕಾಲ ಕಳೆಯುತ್ತ ಸಂತೋಷ ಪಡುತ್ತಿದ್ದರು.


ಈ ರೋಬೋಟ್ ಅನ್ನು ದುಬೈನಿಂದ ಖರೀದಿಸಿದ್ದು, ರಾತ್ರಿ ಸಮಯದಲ್ಲಿ ಬೆಳಕಾಗುವ ಮೂಲಕ ಬೆಳಿಗ್ಗೆ ಸೌಂಡ್ ಆಗುವ ಮೂಲಕ ಕೆಲಸ ಮಾಡುತ್ತದೆ ಎಂದು ರೋಬೋಟ್ ಮಾಲೀಕ ಜನಾರ್ದನ ಮಂಜುಳಾ (ಬೆಂಗಳೂರು)ಅವರು ತಿಳಿಸಿದರು.


ಈ ರೋಬೋಟ್ ಇಂದ ಬಂದ ಸಂಪಾದನೆ ಇಂದ ಇವರ ಜೀವನ ನಡೆಯುತ್ತಿದೆ ಎನ್ನುವುದು ವಿಶೇಷ, ಬದುಕಲ್ಲಿ ಈ ಭವಿಷ್ಯ ಹೇಳುವ ಕಂಪ್ಯೂಟರ್ ರೋಬೋಟ್ ಅನ್ನು ವೃತ್ತಿಯಾಗಿಸಿಕೊಂಡಿದ್ದಾರೆ.




- ರಕ್ಷಿತಾ ಚಪ್ಪರಿಕೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top