ಸುರತ್ಕಲ್: ಎನ್‌ಸಿಸಿ ವತಿಯಿಂದ 12 ದಿನಗಳ ಅಡ್ವಾನ್ಸ್ ಲೀಡರ್‌ಶಿಪ್ ಕ್ಯಾಂಪ್ ಶಿಬಿರವನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ), ಸುರತ್ಕಲ್‌ನಲ್ಲಿ ಡಿ.9ರಿಂದ 20ರ ವರೆಗೆ ನಡೆಸಲಾಯಿತು.
ಈ ಶಿಬಿರದಲ್ಲಿ, ನಾಯಕತ್ವದ ಅಭಿವೃದ್ಧಿ, ಆತ್ಮವಿಶ್ವಾಸ ವರ್ಧನೆ ಮತ್ತು ವೈಯಕ್ತಿಕ ಬೆಳವಣಿಗೆ ಕೇಂದ್ರಿತ ಪರಿವರ್ತನೀಯ ಅನುಭವಕ್ಕಾಗಿ 100 ವಿದ್ಯಾರ್ಥಿನಿಯರು ಸೇರಿದಂತೆ 300 ಎನ್‌ಸಿಸಿ ಕೆಡೆಟ್‌ಗಳು ಈ ಶಿಬಿರದಲ್ಲಿ ಪಾಲ್ಗೊಂಡರು. ಶಿಬಿರಾರ್ಥಿಗಳು ತಮಿಳುನಾಡು, ಕರ್ನಾಟಕ, ಗೋವಾ ಮತ್ತು ಕೇರಳದವರಾಗಿದ್ದಾರೆ.
ಈ ಶಿಬಿರವನ್ನು ಡೈರೆಕ್ಟರ್ ಜನರಲ್ ಎನ್‌ಸಿಸಿ (ಡಿಜಿ ಎನ್‌ಸಿಸಿ), ಎನ್‌ಸಿಸಿ ಡೈರೆಕ್ಟರೇಟ್ ಕರ್ನಾಟಕ ಮತ್ತು ಗೋವಾ ಮತ್ತು ಗ್ರೂಪ್ ಹೆಡ್‌ಕ್ವಾರ್ಟರ್ಸ್ (ಜಿಪಿ ಹೆಚ್‌ಕ್ಯು) ಮಂಗಳೂರು ವತಿಯಿಂದ ಆಯೋಜಿಸಲಾಗಿದೆ. ಶಿಬಿರವು ವ್ಯಕ್ತಿತ್ವ ವಿಕಸನ ಹೆಚ್ಚಿಸಲು ಮತ್ತು ಕೆಡೆಟ್‌ಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ರೂಪಿಸಲಾದ ವೈವಿಧ್ಯಮಯ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಒಳಗೊಂಡಿದೆ.
ಡಿಸೆಂಬರ್ 09 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ NCC ಜಿಪಿ ಎಚ್‌ಕ್ಯೂ ಮಂಗಳೂರಿನ ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ ಅವರು ಸ್ಪೂರ್ತಿದಾಯಕ ಮಾತುಗಳನ್ನಾಡಿ ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ನಾಯಕತ್ವ, ಶಿಸ್ತು ಮತ್ತು ಪಾತ್ರದ ಮಹತ್ವವನ್ನು ಒತ್ತಿ ಹೇಳಿದರು.
ಶಿಬಿರದ ಕಮಾಂಡೆಂಟ್ ಕರ್ನಲ್ ಎ ಕೌಶಿಕ್ ಮಾತನಾಡಿ, ಶಿಬಿರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ನಮ್ಮ ದೇಶದ ಆತ್ಮವಿಶ್ವಾಸವುಳ್ಳ ಮತ್ತು ಜವಾಬ್ದಾರಿಯುತ ಭವಿಷ್ಯದ ನಾಯಕರಾಗಿ ಕಲಿಯಲು ಮತ್ತು ಬೆಳೆಯಲು ಈ ಅವಕಾಶಗಳನ್ನು ಪಡೆದುಕೊಳ್ಳಿ ಎಂದು ಕೆಡೆಟ್‌ಗಳಿಗೆ ಕರೆ ನೀಡಿದರು.
ಕೆಡೆಟ್‌ಗಳು ಕ್ಯಾಂಪ್ ಕಮಾಂಡೆಂಟ್, ಕರ್ನಲ್ ಅನಿಲೇಶ್ ಕೌಶಿಕ್ ಮತ್ತು ವಿವಿಧ NITK ಅಧ್ಯಾಪಕರು ನಡೆಸಿದ ವಾಲ್ ಕ್ಲೈಂಬಿಂಗ್, ಅಡಚಣೆ ನಿವಾರಣಾ ತರಬೇತಿ ಮತ್ತು ನಾಯಕತ್ವ, ಉದ್ಯಮಶೀಲತೆ, ವ್ಯಕ್ತಿತ್ವ ಅಭಿವೃದ್ಧಿ, ಸಾರ್ವಜನಿಕ ಭಾಷಣ ಮತ್ತು ಟೀಮ್‌ವರ್ಕ್ ಕುರಿತು ವಿಶೇಷ ಉಪನ್ಯಾಸಗಳಲ್ಲಿ ಭಾಗವಹಿಸಿದರು. ಅಲ್ಲದೆ ಸೌಹಾರ್ದತೆ, ಸಾಂಘಿಕ ಕೆಲಸ ಮತ್ತು ಪ್ರತಿಭಾ ಪ್ರದರ್ಶನಕ್ಕೆ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು.
ಶಿಬಿರದ ಭಾಗವಾಗಿ, ಕೆಡೆಟ್‌ಗಳು ಜೈವಿಕ ಅನಿಲ ಸ್ಥಾವರ (500 ಕೆಜಿ ಜೈವಿಕ ತ್ಯಾಜ್ಯ ಮರುಬಳಕೆ ಪೈಲಟ್ ಯೋಜನೆ) ಮತ್ತು NITK SEARCH ಸೇರಿದಂತೆ ಎನ್‌ಐಟಿಕೆಯ ಅತ್ಯಾಧುನಿಕ ಸೌಲಭ್ಯಗಳಿಗೆ ಭೇಟಿ ನೀಡಿದರು.
ಜೈವಿಕ ಅನಿಲ ಘಟಕವು ಪ್ರತಿದಿನ 500 ಕೆಜಿ ಆಹಾರ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಂಸ್ಕರಿಸುತ್ತದೆ, ನವೀಕರಿಸಬಹುದಾದ ಶಕ್ತಿ ಮತ್ತು ಸಾವಯವ ಗೊಬ್ಬರವನ್ನು ಉತ್ಪಾದಿಸುತ್ತದೆ, ಹೀಗಾಗಿ NITK ಕ್ಯಾಂಪಸ್‌ನಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗಳನ್ನು ಪರಿಹರಿಸುತ್ತದೆ. NITK SEARCH, ಅದರ ಚಲನಶೀಲ ನಿಯಂತ್ರಣ ಮತ್ತು ಕಮಾಂಡ್ ಸೆಂಟರ್ ಅನ್ನು ಹೊಂದಿದ್ದು, ಇದು ದಕ್ಷಿಣ ಕನ್ನಡದ ಕರಾವಳಿ ಪ್ರದೇಶಗಳಿಗೆ ಹೈಟೆಕ್ ತ್ವರಿತ ಸ್ಪಂದನ ಕೇಂದ್ರವಾಗಿದೆ.
ದೇಶಾದ್ಯಂತದ ಮಾಜಿ ಕೆಡೆಟ್‌ಗಳನ್ನು ಒಳಗೊಂಡ ಎಕ್ಸ್‌ಚೇಂಜ್ ಪಾರ್ಟಿಸಿಪೆಂಟ್ಸ್ ಅಸೋಸಿಯೇಷನ್ (EXPA) ವತಿಯಿಂದ ವಿಶೇಷ ಅಧಿವೇಶನ ಸಹ ನಡೆಸಲಾಯಿತು. ಅವರು ಹಾಲಿ ಕೆಡೆಟ್‌ಗಳೊಂದಿಗೆ ತಮ್ಮ ಜ್ಞಾನ ಮತ್ತು ಅನುಭವಗಳನ್ನು ಹಂಚಿಕೊಂಡರು.
ಶಿಬಿರವು ಎನ್‌ಸಿಸಿಯ ಎಲ್ಲಾ ಗುಣಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದ್ದು ಎಲ್ಲಾ ಕೆಡೆಟ್‌ಗಳು ಶಿಬಿರದ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ವೈಯಕ್ತಿಕ ಬೆಳವಣಿಗೆಗೆ ಈ ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.
ಈ ಶಿಬಿರವು ಕೆಡೆಟ್‌ಗಳಿಗೆ ಕೇವಲ ತರಬೇತಿ ನೀಡಿದ್ದಲ್ಲದೇ, ನಮ್ಮ ಸಮಾಜ ಮತ್ತು ರಾಷ್ಟ್ರಕ್ಕೆ ಅರ್ಥಪೂರ್ಣ ಕೊಡುಗೆಯನ್ನು ನೀಡಲು ಯುವ ಮನಸ್ಸುಗಳನ್ನು ಆಯಾ ಕ್ಷೇತ್ರಗಳಲ್ಲಿ ಭವಿಷ್ಯದ ನಾಯಕರನ್ನಾಗಿ ಪರಿಣಾಮಕಾರಿಯಾಗಿ ಬೆಳೆಸಲು ಪೂರಕವಾಗಿತ್ತು.
ಶಿಬಿರದ ಕಮಾಂಡೆಂಟ್: ಕರ್ನಲ್ ಅನಿಲೇಶ್ ಕೌಶಿಕ್, ಕಮಾಂಡಿಂಗ್ ಆಫೀಸರ್, 2 ಕರ್ನಾಟಕ ಎಂಜಿನಿಯರ್ ಕಾನ್ವಾಯ್ ಎನ್‌ಸಿಸಿ, ಸುರತ್ಕಲ್; ಡೆಪ್ಯುಟಿ ಕ್ಯಾಂಪ್ ಕಮಾಂಡೆಂಟ್: ಲೆಫ್ಟಿನೆಂಟ್ ಕರ್ನಲ್ ಪಿ ಎಸ್ ಚೌಹಾಣ್, ಕಮಾಂಡಿಂಗ್ ಆಫೀಸರ್, 4 ಕರ್ನಾಟಕ ಎಂಜಿನಿಯರ್ ಕಾನ್ವಾಯ್ ಎನ್‌ಸಿಸಿ, ಮಣಿಪಾಲ; ಕ್ಯಾಂಪ್ ಅಡ್ಜಟಂಟ್: ಕ್ಯಾಪ್ಟನ್ ಪಿ. ಸ್ಯಾಮ್ ಜಾನ್ಸನ್, ANO, 2 ಕರ್ನಾಟಕ ಇಂಜಿನಿಯರ್ ಕಾನ್ವಾಯ್ ಎನ್‌ಸಿಸಿ, NITK ಸುರತ್ಕಲ್.- ಶಿಬಿರದ ಸಂಯೋಜಕರಾಗಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ