ಕಾಪು ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ; ಕೆ ರಘುಪತಿ ಭಟ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ

Upayuktha
0

 



ಉಡುಪಿ: ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಇಂದು (ನ. 08) ಜಯಲಕ್ಷ್ಮಿ ಸಿಲ್ಕ್ಸ್ ಬನ್ನಂಜೆ ಇಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. ಉಡುಪಿಯ ನಿಕಟಪೂರ್ವ ಶಾಸಕರು, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ ರಘುಪತಿ ಭಟ್ ಅವರು ಭಾಗವಹಿಸಿ ನವದುರ್ಗಾ ಲೇಖನ ಯಜ್ಞದ ಕುರಿತು ಸಂಪೂರ್ಣ ವಿವರಣೆ ನೀಡಿ ಈ ಯಜ್ಞದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಬಾಲಾಜಿ, ಜಯಲಕ್ಷ್ಮಿ ಲಕ್ಷ್ಮಿ ಸಿಲ್ಕ್ ಮಾಲಕ  ವೀರೇಂದ್ರ  ಹೆಗ್ಡೆ, ರವೀಂದ್ರ ಹೆಗ್ಡೆ, ಕಾಪು ಪುರಸಭಾ ವಾರ್ಡ್ ಸಮಿತಿ ಪ್ರಧಾನ ಮಹಿಳಾ ಸಂಚಾಲಕಿ ಗೀತಾಂಜಲಿ ಸುವರ್ಣ, ಸಂಚಾಲಕ ಸುವರ್ಧನ್ ನಾಯಕ್, ಯೋಗೀಶ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top