ಅಮೃತ ಉಣಿಸಿದಾಕೆಯ ತಿರಸ್ಕರಿಸುವ ಮಕ್ಕಳು

Upayuktha
0


"ಅಮ್ಮ" ಆಹಾ ಇದೊಂದು ಶಕ್ತಿ ಹಾಗೂ ಪಾವಿತ್ರ್ಯವುಳ್ಳಂತಹ ಶಬ್ಧ. ಒಂಬತ್ತು ತಿಂಗಳು ಅದೆಷ್ಟೋ ನೋವುಗಳ ಸಹಿಸಿ ಅಂಧಕಾರದ ಪ್ರಪಂಚದಿಂದ ಬೆಳಕಿನತ್ತ ನಮ್ಮನ್ನು ತಂದ ದೇವತೆ. ‌ಮೊದಲ ತೊದಲು ನುಡಿಯಾಗಿ, 'ಅ' ಎಂದರೆ ಅಮ್ಮ ಎಂದು ಕಲಿಸಿದ ಗುರುವಾಗಿ, ಬೆಳೆಯುತ್ತಾ ಹೋದಂತೆ ಜೀವನದ ಮೊದಲ ಸ್ನೇಹಿತೆಯಾಗಿ ಜೊತೆಗಿದ್ದ ಜೀವ. ತಾನು ಹಸಿವಿನಿಂದ ಇದ್ದರು ತನ್ನ  ಮಕ್ಕಳ ಹಸಿವು ನೀಗಿಸುವ ನಿಸ್ವಾರ್ಥ ಗುಣದವಳು. ಹುಟ್ಟಿನಿಂದ ಸಾಯುವವರೆಗೂ ಬದಲಾಗದ ಪ್ರೀತಿ ಎಂದರೆ ಅದು ತಾಯಿ ಪ್ರೀತಿ ಮಾತ್ರ.


ಆದರೆ ಈಗಿನ ಪ್ರಾಪಂಚಿಕ ಜೀವನದಲ್ಲಿ ವಯಸ್ಸಾದ ತಂದೆ- ತಾಯಿಯನ್ನು ನೋಡಿಕೊಳ್ಳುವವರ ಸಂಖ್ಯೆ ತೀರಾ ಕೆಳಮಟ್ಟದಲ್ಲಿದೆ ಎಂದರೆ ತಪ್ಪಾಗಲಾರದು. ತುಳು ಭಾಷೆಯಲ್ಲಿ ಒಂದು ಮಾತಿದೆ "ಪತ್ತ್ ಜೋಕುಲೆನ ಅಪ್ಪೆ ಸಾದಿಟ್ ಬೂರ್ದ್ ಸೈಪಲ್ ಗೆ" ಎಂದು. ಇಂದು ಈ ಮಾತನ್ನು ಅದೆಷ್ಟೋ ಮಂದ ಬುದ್ಧಿಯ ಮಕ್ಕಳು ನಿಜವಾಗಿಸಿದ್ದಾರೆ.


ಸಣ್ಣವರಿದ್ದಾಗ ಆ ತಾಯಿ ತನ್ನ ಮಗುವಿಗೆ ಹುಲ್ಲು ಕಡ್ಡಿಯಷ್ಟು ನೋವನ್ನು ಬಯಸುವುದಿಲ್ಲ. ಬಾ‌ಲ್ಯದಲ್ಲಿರುವಾಗ ತಾವು ಕೇಳಿದ ತಿಂಡಿ -ತಿನಿಸುಗಳನ್ನು‍‌‌‍ ಸಾಲವೋ ಅಥವಾ ಇನ್ನೇನೋ ಮಾಡಿ ತಂದು ಕೊಡುತ್ತಿದ್ದ ತಾಯಿ ಇಂದು ಒಂದು ತುತ್ತು ಊಟಕ್ಕಾಗಿ ಮಗನನ್ನೇ ಬೇಡಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ. ನೀನು ಅನಿಷ್ಟ, ದರಿದ್ರ, ನೀನು ಮನೆಯಲ್ಲಿದ್ದರೆ ನನ್ನ ಹೆಂಡತಿ ಮಕ್ಕಳಿಗೆ ಒಳಿತಾಗುವುದಿಲ್ಲ ಎಂದು ಹೇಳುವ ಮಗ, ಆತ ಇಂದು ಒಂದು ಜೀವನ ನಡೆಸುತ್ತಿದ್ದಾನೆ ಎಂದರೆ ಅದಕ್ಕೆ ಆ ತಾಯಿಯೇ ಕಾರಣ ಎಂಬುದನ್ನು ಮರೆತು ಬಿಟ್ಟನಲ್ಲ..?


ಆಸ್ತಿಯ ವಿಚಾರವಾಗಿ ಮನೆಯಲ್ಲಿ ಮಕ್ಕಳಿಬ್ಬರ ನಡುವೆಯೇ ವಾಗ್ವಾದ ನಡೆಯುತ್ತಿರುತ್ತದೆ ಆ ಸಂದರ್ಭದಲ್ಲಿ ತಾಯಿ ಕೇಳುತ್ತಾಳೆ "ಮಗಾ" ನನ್ನನ್ನು ಯಾರು ನೋಡಿಕೊಳ್ಳುತ್ತೀರಾ ಎಂದು. ತಾಯಿಯ ಆ ಕಿರು ಮಾತಿಗೆ ನಡೆಯುತ್ತಿದ್ದ ಆ ವಾಗ್ವಾದವು ಒಮ್ಮೆಲೇ ನಿಶ್ಶಬ್ದಕ್ಕೆ ಜಾರುತ್ತದೆ. ಹಾಗಾದರೆ ಆಸ್ತಿಯ ಮುಂದೆ ತಾಯಿಯ ಪ್ರೀತಿ ಮರೀಚಿಕೆ ಆಗಿ ಹೋಯಿತೇ....?


ಎಂತಹ ವಿಪರ್ಯಾಸ ಎಂದರೆ ಒಂದು ಪಶುವಿಗೆ ನೀನು ಆ ಪಶುವಿನಂತೆ ಇರಬೇಕೆಂದು ಯಾರು ಹೇಳಿಕೊಡಬೇಕಾಗಿಲ್ಲ, ಒಂದು ಪಕ್ಷಿಗೆ ನೀನು ಆ ಪಕ್ಷಿಯಂತೆ ಹಾರಾಡಬೇಕೆಂದು ಯಾರು ತಿಳಿಹೇಳಬೇಕಾಗಿಲ್ಲ. ಆದರೆ ಒಬ್ಬ ಮನುಷ್ಯನಿಗೆ ನೀನು ಅವರಂತೆ ಬದುಕಬೇಕು, ಅವರಂತೆಯೇ ಜೀವಿಸಬೇಕು ಎಂಬುದನ್ನು ಯಾರೋ ಇನ್ನೊಬ್ಬರಿಂದ ಹೇಳಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ. ಹಾಗಾದರೆ ಮನುಷ್ಯ ಒಂದು ಸಣ್ಣ ಹುಳುವಿಗಿಂತ ಕಡೆಯಾಗಿ ಹೋದನೆ...?


ಅಮ್ಮ ಎಂದರೆ ಅಮೃತ ಉಣಿಸಿ ಪೋಷಿಸಲಷ್ಟೇ ಸೀಮಿತವಲ್ಲ, ಆಕೆ ಸದಾ ಮಕ್ಕಳ ಸಂರಕ್ಷಣೆಯ ಹೊಣೆ ಹೊತ್ತ ಮಡಿಲಿನ ಒಡಲು, ಅಂತಿಮವಾಗಿ ಆಕೆ ನೀಡಿದಷ್ಟು ಪ್ರೀತಿ ಕೊಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಬದಲಾಗಿ ಆಕೆ ನಮ್ಮನ್ನು ತೊರೆದು ಹೋಗುವ ಮುಂಚೆ ಸಂತಸದಿಂದ ನೋಡಿಕೊಳ್ಳುವ.




-ಧನ್ಯಶ್ರೀ ಕೆ, ಪೆರ್ಲಂಪಾಡಿ

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top