ಕವನ: ವಿಶ್ವ ಹವಿ ಮೇಳಲಿ ನಮ್ಮ ಭಾಷೆ ಕೇಳಲಿ

Upayuktha
0


ನಮ್ಮ ಭಾಷೆಲಿ ಭೇದ ಇದ್ದರೂ ಹವಿಭಾಷೆ

ಹೆಮ್ಮೆಯೇ ಮೇಳಲ್ಲಿ ಕೇಳೆಕ್ಕದ 

ನಮ್ಮವೇ ಗೌರವವ ನೀಡದ್ರೆ ಹೇಂಗಕ್ಕು ?

ತಮ್ಮಣ್ಣ ಹೇಳಿಕ್ಕು ಗೊಂತಕ್ಕದ.


ಕಿಟ್ಟೆಲ್ಲ ° ದೂರಂದ ಬಂದಿಲ್ಲಿ ಕನ್ನಡವ

ಕಟ್ಟಿ ಬೆಳಶಿದ ಕತೆಯ ಕೇಳಿದ್ದಿರೊ ?

ಗಟ್ಟಿ ಮನಸಿನ ಮಾಡಿ ಕಲಿಯೆಕ್ಕು ಹವ್ಯಕವ

ಗಟ್ಟಿಗರೆ ನಾವೆಲ್ಲ ತಿಳ್ಕೊಂಡರೆ ..


ತುಳುವರೂ ಕೊಂಕಣಿಗ ಮಲೆಯಾಳಿ ಅವರದೇ /

ಹಳೆ ಭಾಷೆ ಒಳುಶಿದವು ಬಹು ಚೆಂದಲಿ

ಚಳಿ ಎಂತ ಬೇಡದ್ದು ಹವ್ಯಕಲಿ ಮಾತಾಡ್ಲೆ

ಕಳೆಗಟ್ಟಿ ಕೇಳೆಕ್ಕು ಬೆಂಗ್ಳೂರಿಲಿ .


ಕವಿ ಕಾವ್ಯ ಸಾಹಿತ್ಯ ಬೆಳದೀಗ ಹವ್ಯಕಲಿ

ಕವಿ ಕೂಟ ಇದ್ದಲ್ಲಿ ಬಹು ಚೆಂದವೆ ..

ಹವಿಕರ ಮನೆ ಮಾತು ಲಾಯ್ಕಿದ್ದು ಮಾತಾಡ್ಲೆ

ಹವಿ ಮೇಳ ನಡದಲ್ಲಿ ಸಂತೋಷವೆ..


- ಗುಣಾಜೆ ರಾಮಚಂದ್ರ ಭಟ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top