ಶೃಂಗೇರಿ ಮಠವೂ ವಕ್ಫ್ ಬೋರ್ಡ್‌ಗೆ ಸೇರಿದ್ದು ಅಂತ ಕರ್ನಾಟಕ ರಾಜ್ಯದ ಉನ್ನತ ಸ್ಥಾನದಲ್ಲಿರುವ ಜನ ಪ್ರತಿನಿಧಿಗಳು ಹೇಳಿದ ಮೇಲೆ ಮಲೆನಾಡಿನ ನಿವಾಸಿಗಳಿಗೂ, ರೈತರಿಗೂ ಇದೊಂದು ಗಂಭೀರ ವಿಚಾರವೇ ಸರಿ.
ಮಳೆ ಜಾಸ್ತಿಯಾದಾಗ, ಮಳೆ ಕಮ್ಮಿಯಾದಾಗ, ಅಡಿಕೆ ರೋಗಗಳು ವ್ಯಾಪಿಸುವಾಗ, ಸಾಮಾಜಿಕವಾಗಿ ಯಾವುದೇ ಸಮಸ್ಯೆಗಳು ಬಂದಾಗ ಮಲೆನಾಡಿಗರಿಗೆ ಹಿಂದು-ಮುಸ್ಲಿಮ್- ಕ್ರಿಶ್ಚಿಯನ್ ಎನ್ನದೇ ಸರ್ವಧರ್ಮ ಮನೋಭಾವದಿಂದ ಧಾರ್ಮಿಕವಾಗಿ ರೈತರ ಪರ ನಿಂತು, ರೈತರ ಹೆಸರಲ್ಲಿ ಪೂಜೆ ಅರ್ಚನೆ ಗಳನ್ನು ಮಾಡಿಸಿ, ಸಮಸ್ಯೆಗಳ ಪ್ರಖರತೆಯನ್ನು ಕಮ್ಮಿ ಮಾಡುತ್ತಿದ್ದ ಶೃಂಗೇರಿ ಮಠವೂ ಈಗ ವಕ್ಫ್‌ಗೆ ಸೇರಿದ್ದು ಎಂದು ಪ್ರಜ್ಞಾವಂತ ರಾಜಕಾರಣಿಗಳೇ ಧ್ವನಿ ಎತ್ತಿ ಮಾತಾಡಿ, ಮಲೆನಾಡ ನೆಲವಾಸಿಗಳ, ಕೃಷಿಕರ ಬದುಕಿನ ಬುಡವನ್ನೇ ಅಲುಗಾಡಿಸುತ್ತಿದ್ದಾರೆ.
ಈ ವಕ್ಪ್ ರಾಕ್ಷಸ ಕಬಂಧ ಹಸ್ತ ಶೃಂಗೇರಿಯ ಮೇಲೆ ನಿಧಾನವಾಗಿ ಕೈ ಇಡುತ್ತಿದೆ.
ಅಡಿಕೆ ಹಾನಿಕಾರಕ ಅಂತ ವಿಶ್ವಸಂಸ್ಥೆಯಲ್ಲಿ ವರದಿ ಬಿಡುಗಡೆಯಾಗಿ ತಲೆ ಮೇಲೆ ತೂಗುಕತ್ತಿ ಆಡುತ್ತಿರುವ ಸಂದರ್ಭದಲ್ಲೇ, ಇಲ್ಲಿ ಮಲೆನಾಡಿಗರ ಶ್ರದ್ಧಾಕೇಂದ್ರದ ಮಠದ ಮೂಲಕ ಪ್ರಾರಂಭಿಸಿ ಹಾನಿಕಾರಕ ವಕ್ಪ್ ರಾಕ್ಷಸ ಕಬಂಧ ಹಸ್ತ ಇಡೀ ಮಲೆನಾಡಿನ ಬುಡಕ್ಕೆ ಬೆಂಕಿ ಹಚ್ಚುವಂತೆ ಕಾಣುತ್ತಿದೆ.
ಶೃಂಗೇರಿ ಶಾರದೆ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಬೇಡಿಕೊಳ್ಳೋಣ,
ಮಲಹಾನಿಕರೇಶ್ವರ ಯಾವುದೇ ಹಾನಿ ಆಗದಂತೆ ರಕ್ಷಿಸಲಿ,
ಶನೀಶ್ವರನ ಅನುಗ್ರಹದಿಂದ ಸಮಸ್ಯೆಗಳೆಲ್ಲ ನಾಶವಾಗಲಿ.
ಋಷ್ಯಶೃಂಗೇಶ್ವರ ಸಕಾಲದಲ್ಲಿ ಮಳೆ ಬೆಳೆಯನ್ನಿತ್ತು ಕರುಣಿಸಲಿ.
ಶೃಂಗೇರಿಯ ಶಕ್ತಿ ಗಣಪತಿ ನಮಗೂ ನಮ್ಮನ್ನಾಳುವವರಿಗೂ ಸ್ವಸ್ತ ಸಮಾಜ ನಿರ್ಮಾಣಕ್ಕೆ ವಿದ್ಯೆ, ಬುದ್ದಿ, ಶಕ್ತಿಯನ್ನು ದಯಪಾಲಿಸಲಿ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
ಶೃಂಗೇರಿ ಮಠದ ಮೇಲೂ ವಕ್ಫ್ 'ವಾಂತಿ'...?