ಹಾಸನ: ಚನ್ನರಾಯಪಟ್ಟಣ ತಾಲೂಕು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೂರಲು ಆಸನಗಳು ಮೇಲ್ಚಾವಣಿ ಒದಗಿಸುವ ಬಗ್ಗೆ ವರುಣ್ ಚಕ್ರವರ್ತಿ ಅವರು ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ತಾಲೂಕು ಬಸ್ ನಿಲ್ದಾಣದಲ್ಲಿ ಹಾಸನ ತಿಪಟೂರು ನುಗ್ಗೆಹಳ್ಳಿ ಚಿಕ್ಕಮಗಳೂರು ಧರ್ಮಸ್ಥಳ ಹಾಗೂ ಇನ್ನು ಕೆಲವು ಮಾರ್ಗವಾಗಿ ಸಾಗುವ ಬಸ್ ನಿಲ್ದಾಣದ ಇನ್ನೊಂದು ಭಾಗದಲ್ಲಿ ನಿಲ್ಲಿಸಲಾಗುತ್ತದೆ. ಅಲ್ಲಿ ಪ್ರಯಾಣಿಕರಿಗೆ ಕೂರಲು ಜಾಗ ಆಸನ ಚಾವಣಿಯಾಗಲಿ ಇರುವುದಿಲ್ಲ. ಮಳೆಬಿಸಿನಲ್ಲಿ ನಿಂತು ಕಾಯುವ ಯುವ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅವು ಪ್ರಯಾಣಿಕರಿಗೆ ಈಗ ಕಾಯುವ ಸ್ಥಿತಿ ಉಂಟಾಗಿದೆ. ಈಗ ನಿಲ್ಲಿಸುವ ನಿಲ್ದಾಣದ ಜಾಗದಲ್ಲಿ ಕಸ ಕಡ್ಡಿ ತುಂಬಿತ್ತು.
ಉಪಯೋಗಕ್ಕೆ ಬಾರದ ಜಾಗದಲ್ಲಿ ಉದ್ದಕ್ಕೂ ಮೇಲ್ಚಾವಣಿ ಹಾಗೂ ಪ್ರಯಾಣಿಕರು ಕೂರುವ ಆಸನಗಳನ್ನು ನಿರ್ಮಿಸಿ ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ಒಂದು ಅನುಕೂಲವಾಗುವಂತೆ ವ್ಯವಸ್ಥೆ ಅತಿ ಶೀಘ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಈ ವ್ಯವಸ್ಥೆ ಆಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಮಾನವ ಹಕ್ಕು ಆಯೋಗದ ಹಾಸನ ಜಿಲ್ಲಾಧ್ಯಕ್ಷರು ವರುಣ್ ಚಕ್ರವರ್ತಿ ಮತ್ತು ಮುಖಂಡರಾದ ಮನೋಜ್, ಅಯೂಬ್ ಇನ್ನು ಕೆಲವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ