ಪರಮಾತ್ಮನ ಶಕ್ತಿಯ ಅರಿವನ್ನು ಮೂಡಿಸುವ ಉಪನಿಷತ್ತುಗಳು: ಡಾ. ವಾಗೀಶ್ವರೀ ಶಿವರಾಮ್

Upayuktha
0


ಕಾರ್ಕಳ: ನಾಮರೂಪಗಳ ಆಚೆಗಿರುವ ಪರಮಾತ್ಮನ ಶಕ್ತಿಯ ಪರಿಚಯವನ್ನು ಮಾಡಿಸಿ ಅಂತಹ ಪರಮಾತ್ಮನೆಡೆಗೆ ಸಾಗಲು ನೆರವಾಗುವ ಇಂದ್ರಿಯಗಳ ನಿಗ್ರಹ, ಪರಿಶ್ರಮದ ಸಾಧನೆಯ ವಿವರಗಳನ್ನು ಶಿಷ್ಯರಿಗೆ ಬೋಧಿಸಿದ ಜ್ಞಾನವೇ ಬೃಹದಾರಣ್ಯಕ ಉಪನಿಷತ್ತು ಆಗಿದೆ ಎಂದು ಸಂಸ್ಕೃತ ವಿದ್ವಾಂಸರು ಹಾಗೂ ನಿವೃತ್ತ ಪ್ರಾಧ್ಯಾಪಕ ವಿದ್ಯಾವಾರಿಧಿ ಡಾ. ವಾಗೀಶ್ವರೀ ಶಿವರಾಮ್ ಅವರು ತಿಳಿಸಿದರು.  


ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ನವಂಬರ್ 16ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ಅವರು ‘ಬೃಹದಾರಣ್ಯಕ ಉಪನಿಷತ್ತು’ ಇದರ ಕುರಿತು ಉಪನ್ಯಾಸ ನೀಡಿದರು.


ನಮ್ಮ ವಿವೇಕದ ಪ್ರಜ್ಞೆಯನ್ನು ಜಾಗ್ರತಗೊಳಿಸಿ ಪಂಚೇಂದ್ರಿಯಗಳಿಗೆ ನಿಲುಕುವ ಭೌತಿಕ ಜ್ಞಾನವನ್ನು ಮೀರಿದ ಇಂದ್ರಿಯಾತೀತ ಜ್ಞಾನವನ್ನು ನೀಡುವ ಉಪನಿಷತ್ತುಗಳು ಜ್ಞಾನದ ಬೆಳಕಿನೆಡೆಗೆ ನಮ್ಮನ್ನು ಕರೆದೊಯ್ಯುತ್ತವೆ. ನಮ್ಮನ್ನು ದುರ್ಬಲಗೊಳಿಸುವ ಅಹಂಕಾರ, ಮಮಕಾರ, ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸಿ ಲೋಕಹಿತದ ಕಾರ್ಯದಲ್ಲಿಯೇ ಆನಂದವನ್ನು ಕಂಡುಕೊಳ್ಳುವ ಬಗ್ಗೆ ಉಪನಿಷತ್ತು ನಮಗೆ ಮಾರ್ಗದರ್ಶನ ನೀಡುತ್ತದೆ ಅಂದರು.


ಡಾ. ನಾ. ಮೊಗಸಾಲೆಯವರು ಸಭಾಧ್ಯಕ್ಷತೆ ವಹಿಸಿದ್ದು ನಿತ್ಯಾನಂದ ಪೈ ಮತ್ತು ಮಿತ್ರಪಭಾ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಗೀತಾ ಮಲ್ಯ ಪ್ರಾರ್ಥಿಸಿ  ಪೂರ್ಣಿಮಾ ಶೆಣೈಯವರು ಅತಿಥಿಗಳನ್ನು ಪರಿಚಯಿಸಿದರು. ಮಾಲತಿ ವಸಂತರಾಜ್ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಜಗದೀಶ್ ಗೋಖಲೆ ವಂದಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top