ಉಡುಪಿ ಶ್ರೀಕೃಷ್ಣ ಮಠದಲ್ಲಿ ಯತಿ ಸಮಾಗಮ

Upayuktha
0 minute read
0

ಉಡುಪಿ: ಪರ್ಯಾಯ ಮಠಾಧೀಶರಾದ ಪರಮ ಪೂಜ್ಯ ಪುತ್ತಿಗೆ ಶ್ರೀಪಾದರ ಆಹ್ವಾನದ ಮೇರೆಗೆ ಪೂಜ್ಯ ಹರಿಹರಪುರ ಮಠಾಧೀಶರಾದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಮತ್ತು ತಿರುಚಿ ಮಹಾಸಂಸ್ಥಾನದ ಮಠಾಧೀಶರಾದ ಪೂಜ್ಯ ಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಉಡುಪಿಗೆ ಆಗಮಿಸಿ ಶ್ರೀಕೃಷ್ಣದರ್ಶನ ಪಡೆದುಕೊಂಡರು.


ಶ್ರೀಮಠದಿಂದ ಸಾಂಪ್ರದಾಯಿಕ ಗೌರವಾದರಗಳೊಂದಿಗೆ ಯತಿದ್ವಯರನ್ನು ಸ್ವಾಗತಿಸಲಾಯಿತು. ಬಳಿಕಪೂಜ್ಯ ಪರ್ಯಾಯ ಶ್ರೀಪಾದರು ಕಿರಿಯ ಶ್ರೀಪಾದರ ಜೊತೆಗೆ ಉಭಯ ಶ್ರೀಗಳವರಿಗೂ ಶ್ರೀಕೃಷ್ಣ ಪ್ರಸಾದವನ್ನು ನೀಡಿದರು.


ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ ಸರ್ವಜನೋಪಯೋಗಿಯಾದ ಕೋಟಿ ಗೀತಾಲೇಖನ ಯಜ್ಞ ಸಾಮಾಜಿಕ ಕ್ರಾಂತಿಯಾಗಿ ಬೆಳೆದುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಉಭಯ ಶ್ರೀಪಾದಂಗಳವರು ಪೂಜಾದಿ ಕಾರ್ಯಗಳನ್ನು ನೆರವೇರಿಸಿ ಭವ್ಯ ಗೀತಾ ಮಂದಿರದ ದರ್ಶನ ಪಡೆದು ಮುಂದೆ ಗೀತಾ ಮಂದಿರದಲ್ಲಿ ನಡೆಯುವ ಗೀತಾ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಸಂತಸಪಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top