ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ

Chandrashekhara Kulamarva
0



ಬಳ್ಳಾರಿ: ಅನ್ನಧಾತರ ದೀನ ದಲಿತರ   ಮಠಮಂದಿರಗಳ  ಅಸ್ತಿ,ಜಮೀನುಗಳನ್ನು ಸುಖಾ ಸುಮ್ಮನೆ ಕಬಳಿಸುವ ವಖ್ಫ್ ಬೋರ್ಡ್, ರಾಜ್ಯ ಕಾಂಗ್ರೇಸ್ ಸರಕಾರದ ಈ ನಡೆಯ ವಿರುದ್ಧ ಬೃಹತ್ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.


ದೇಶಕ್ಕೆ ಮಾರಕವಾಗಿರುವ "ವಕ್ಫ್ ಕಾಯ್ದೆ"  ವಿರುದ್ಧದ ಈ ಹೋರಾಟದಲ್ಲಿ  ಎಷ್ಟೇ ಕೆಲಸ ಕಾರ್ಯಗಳ ಒತ್ತಡವಿದ್ದರೂ, ಸ್ವಲ್ಪ ಎಲ್ಲವನ್ನೂ ಬದಿಗೊತ್ತಿ , ಸಣ್ಣಪುಟ್ಟ ವಿಚಾರಗಳನ್ನು ತೊರೆದು,  ನನಗೆ ಯಾರೂ ಕರೆ ಮಾಡಿಲ್ಲ , ಸಂದೇಶ ಬಂದಿಲ್ಲ  ವಿಚಾರಗಳನ್ನು ಬಿಟ್ಟು  ಬಂದು ನಮ್ಮ ಭೂಮಿ ರಕ್ಷಣೆಗಾಗಿ, ಭಾರತಮಾತೆಯ ರಕ್ಷಣೆಗಾಗಿ ಪಕ್ಷಾತೀತವಾಗಿ ಸಮಸ್ತ ರಾಷ್ಟ್ರ ಭಕ್ತರು ಭಾಗವಹಿಸಿ ಯಶಸ್ವಿ ಮಾಡಿದರು.


ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ರವರು, ಚಿತ್ರದುರ್ಗದ ಸಂಸದರು ಗೊವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯರಾದ ಕೆ ಎಸ್ ನವಿನ್ ಅವರು, ಮಾಜಿ ಸಚಿವ ಹಾಗೂ ಗಂಗಾವತಿ ಕ್ಷೇತ್ರದ ಹಾಲಿ ಶಾಸಕರಾದ ಗಾಲಿ ಜನಾರ್ದನರೆಡ್ಡಿ ಅವರು, ಮಾಜಿ ಶಾಸಕರಾದ ಸೋಮಶೇಖರ್ ರೆಡ್ಡಿ ಯವರು, ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಧಿರಾಜ್ ಮುನಿರಾಜ್ ಅವರು,ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಅವರು, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಎಂ ಎಸ್ ಸಿದ್ದಪ್ಪ ಅವರು, ಕಾರ್ಯಕರ್ತರು ಬಂಧುಗಳು ಎಲ್ಲಾರೂ ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
To Top