ರಂಗಭೂಮಿಯತ್ತ ಆಕರ್ಷಣೆ ಬರಬೇಕಾಗಿದೆ: ಬಿ. ಆರ್. ವೆಂಕಟರಮಣ ಐತಾಳ್

Upayuktha
0


ಕಾರ್ಕಳ: “ರಂಗ ತರಬೇತಿ ಶಿಬಿರವು ನಿಮ್ಮೊಳಗಿನ ಕಿಡಿಯನ್ನು ಹೊತ್ತಿಸಿದೆ ಇನ್ನು ಮುಂದೆ ಅದನ್ನು ನೀವು ಬೆಳೆಸಿಕೊಂಡು ಹೋಗಬೇಕು. ಸಮಾರೋಪ ಸಮಾರಂಭವು ರಂಗ ತರಬೇತಿ ಕಲಿಕೆಯ ಕೊನೆಯಲ್ಲಿ ಇದು ಆರಂಭ” ಎಂದು ಯಕ್ಷರಂಗಾಯಣ, ಕಾರ್ಕಳ ಇದರ ನಿರ್ದೇಶಕ ಬಿ ಆರ್ ವೆಂಕಟರಮಣ ಐತಾಳ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ ಇಲ್ಲಿಯ ಐಕ್ಯೂಎಸಿ ಹಾಗೂ ಲಲಿತಕಲಾ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ರಂಗಭೂಮಿ ತರಬೇತಿ ಶಿಬಿರದ ಸಮಾರೋಪ ಹಾಗೂ ತುಳು ಲಿಪಿ ಮತ್ತು ರಂಗ ತರಬೇತಿ ಶಿಬಿರದ ಪ್ರಮಾಣ ಪತ್ರ ವಿತರಣ ಸಮಾರಂಭದಲ್ಲಿ ಅವರು ಮಾತನಾಡಿದರು.


ವಿದ್ಯಾರ್ಥಿಗಳ ರಂಗ ಪ್ರಸ್ತುತಿಯನ್ನು ವಿಮರ್ಶಿಸುತ್ತಾ, ಜೀವ ಜೀವನವಾಗಿ ಹೇಗಿರಬೇಕೆಂದು, ಜೀವನದ ನೀತಿ ಪಾಠಗಳು, ನವರಸಗಳನ್ನು ತಂದು, ಸಮಕಾಲೀನ ವಿಷಯಗಳನ್ನು ಬೆರೆಸಿ ಒಂದು ಪೂರ್ಣತ್ವವನ್ನು ಹೊಂದಿದೆ. ರಂಗ ಕಲೆಯನ್ನು ನಿಂತ ನೀರಾಗಲು ಬಿಡಬೇಡಿ ಹರಿಯುವ ನದಿ ಸಮುದ್ರವನ್ನು ಸೇರುವ ಹಾಗೆ ದೊಡ್ಡ ಕಲಾವಿದರು ಈ ವೇದಿಕೆಯಿಂದ ಹುಟ್ಟಲಿ ಎಂದು ಕಾರ್ಕಳದ ಹೆಸರಾಂತ ವಾಸ್ತುಶಿಲ್ಪಿ, ವಾಸ್ತು ತಜ್ಞ, ಯಕ್ಷಗಾನ ಮತ್ತು ನಾಟಕ ಕಲಾವಿದರಾದ ಶ್ರೀ ಪ್ರಮಲ್ ಕುಮಾರ್ ಅವರು ಹೇಳಿದರು. 


ರಂಗ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಚಂದ್ರನಾಥ ಬಜಗೋಳಿ ಇವರು “ರಂಗ ತರಬೇತಿಯಿಂದ ಜೀವನ ಪರ್ಯಾಂತ ತಲೆ ಎತ್ತಿ ಬದುಕಬಹುದು, ಹಾಗೆಯೇ ನಮ್ಮನ್ನು ನಾವೇ ತಿದ್ದಿಕೊಳ್ಳುವುದಕ್ಕೆ ರಂಗಭೂಮಿ ಸಹಕಾರಿ” ಎಂದರು.


ಮುಖ್ಯ ಅತಿಥಿಗಳಾದ ಬಿ ಆರ್ ವೆಂಕಟರಮಣ ಐತಾಳ್ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ ವಹಿಸಿದರು. ಐಕ್ಯೂಎಸಿಯ ಸಹ ಸಂಚಾಲಕಿ ಸಂಧ್ಯಾ ಭಂಡಾರಿ, ಲಲಿತಾ ಕಲಾಸಂಘದ ಸಂಚಾಲಕಿ ಮೈತ್ರಿ ಬಿ, ಕಾಲೇಜಿನ ಪ್ರಾಧ್ಯಾಪಕರಾದ ಸುನೀತಾ ಲಿಜಿ ಪಿರೇರ, ಚೇತನ, ಚಂದ್ರಕಾAತ್ ಎಸ್, ಸುಬ್ರಹ್ಮಣ್ಯ ಕೆ ಸಿ, ಡಾ. ಜಯಭಾರತಿ ಮತ್ತಿತರರು ಉಪಸ್ಥಿತರಿದ್ದರು. 


ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸಂಗೀತ ಸ್ವಾಗತಿಸಿ, ರಕ್ಷಿತಾ ವಂದಿಸಿ, ಶಶಾಂಕ್ ಕಾರ್ಯಕ್ರಮ ನಿರೂಪಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top