ದಿಗಂತ್ ವಿ ಎಸ್ ರಾಷ್ಟ್ರಮಟ್ಟದ ಫಿನ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ 50ಮೀ ಬಿ ಫಿನ್ಸ್ ವಿಭಾಗದಲ್ಲಿ ಹೊಸ ಕೂಟ ದಾಖಲೆ, ಅನ್ವಿತ್ ರೈ ಬರಿಕೆ ವೈಯಕ್ತಿಕ ಚಾಂಪಿಯನ್ ಶಿಪ್
ಪುತ್ತೂರು: ಅಂಡರ್ ವಾಟರ್ ಸ್ಪೋರ್ಟ್ಸ್ ಫೆಡರೇಷನ್ ಆಫ್ ಇಂಡಿಯಾ ಇದರ ಆಯೋಜನೆಯಲ್ಲಿ ನ14 ರಿಂದ 17ರ ವರೆಗೆ ಹೊಸದಿಲ್ಲಿಯ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸ್ವಿಮ್ಮಿಂಗ್ ಪೂಲ್ ಸಂಕಿರಣದಲ್ಲಿ ನಡೆದ 'ನಾಲ್ಕನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್' ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮೂರು ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
ಪ್ರಥಮ ವಿಜ್ಞಾನ ವಿಭಾಗದ
ಅನ್ವಿತ್ ರೈ ಬರಿಕೆ ಮೊನೋ - ಫಿನ್ 50ಮೀ, 100ಮೀ ಮತ್ತು 200ಮೀ ವಿಭಾಗದಲ್ಲಿ ಮೂರು ಬಂಗಾರ ಹಾಗೂ 50ಮೀ ಬೈ - ಫಿನ್ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿರುತ್ತಾರೆ.
ದಿಗಂತ್ ವಿ ಎಸ್ 50ಮೀ ಬೈ ಫಿನ್ಸ್ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಹೊಸ ಕೂಟ ದಾಖಲೆಯನ್ನು ಮಾಡಿರುತ್ತಾರೆ. ಜೊತೆಗೆ 200ಮೀ ಫಿನ್ಸ್ ನಲ್ಲಿ ಬೆಳ್ಳಿ ಹಾಗೂ 50ಮೀ ಅಪ್ನಿಯದಲ್ಲಿ ಕಂಚಿನ ಪದಕ ಪಡೆದುಕೊಂಡಿರುತ್ತಾರೆ.
ಅರ್ ಅಮನ್ ರಾಜ್ ಇವರು 100ಮೀ ಮತ್ತು 200ಮೀ ಬೈ - ಫಿನ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು 50 ಮೀ ಬೈ - ಫಿನ್ ಹಾಗೂನ50 ಮೀ ಅಪ್ನಿಯ ದಲ್ಲಿ ಬೆಳ್ಳಿಯ ಪಡೆದುಕೊಂಡಿರುತ್ತಾರೆ.
ಇವರುಗಳಿಗೆ ಪರ್ಲಡ್ಕದ ಬಾಲವನದ ಅಕ್ವೆಟಿಕ್ ಕ್ಲಬ್ ನ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ದೀಕ್ಷಿತ್ ರಾವ್ ಮತ್ತು ರೋಹಿತ್ ಪ್ರಕಾಶ್ ರವರು ತರಬೇತಿ ನೀಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ