ವ್ಯವಹಾರದ ಪ್ರಾಯೋಗಿಕ ಜ್ಞಾನದಿಂದ ಯಶಸ್ಸು: ಗೋಪಾಲಕೃಷ್ಣ ಭಟ್

Upayuktha
0

ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮಾರುಕಟ್ಟೆ ಮೇಳ



ಪುತ್ತೂರು:  ಜನ ನಮ್ಮಲ್ಲಿ ಏನು ಕೇಳುತ್ತಾರೋ ಅದನ್ನು ನಾವು ಕೊಡುವುದು ನಿಜವಾದ ವ್ಯವಹಾರ. ಹಾಗಾಗಿ ಎಳವೆಯಿಂದಲೇ ಮಾರುಕಟ್ಟೆ ವ್ಯವಹಾರದಲ್ಲಿ ಸರಿಯಾದ ಪ್ರಾಯೋಗಿಕ ಜ್ಞಾನ ಸಾಧಿಸಿದರೆ ಯಶಸ್ಸು ಕಟ್ಟಿಟ್ಟದ್ದು ಎಂದು ಪುತ್ತೂರಿನ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಎ. ಹೇಳಿದರು. 


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ  ಶನಿವಾರ ಆಯೋಜಿಸಲಾದ ಮಕ್ಕಳ ಮಾರುಕಟ್ಟೆ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಜೀವನದಲ್ಲಿ ಕೆಲವೊಂದು ಅನಿವಾರ್ಯ ಪರಿಸ್ಥಿತಿಯು ನಮ್ಮನ್ನು ಒಳ್ಳೆಯ ದಾರಿಗೆ ಕೊಂಡೊಯ್ಯುತ್ತದೆ. ಮೂಲವಾದ ಧ್ಯೇಯವಿದ್ದರೆ ಮಾತ್ರ ಸಾಧನೆ ಸಾಧ್ಯ.  ಜಗತ್ತಿನಲ್ಲಿ ಸೃಜನಶೀಲ ವ್ಯಕ್ತಿಗಳಾಗಿ ಮೂಡಿಬರಲು ನಾನಾ ವೇದಿಕೆಗಳು ಅಗತ್ಯ ಎಂದು ಹೇಳಿದರು. 


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ,  ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಮತ್ತು ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


8ನೇ ತರಗತಿಯ ವಂಶಿಕ ರೈ ಸ್ವಾಗತಿಸಿದರು. 7ನೇ ತರಗತಿಯ ಅನ್ವಿತಾ ಎಸ್ ವಂದಿಸಿದರು. 10ನೇ ತರಗತಿಯ ನಿಯತಿ ಭಟ್ ಮತ್ತು ಜಯಲಕ್ಷ್ಮಿ ಕಾರ್ಯಕ್ರಮವನ್ನು ನಿರ್ವಹಿಸಿದರು. 


ಉದ್ಘಾಟನಾ ಕಾರ್ಯಕ್ರಮದ ನಂತರ 6ರಿಂದ 10ನೇತರಗತಿಯವರೆಗಿನ ವಿದ್ಯಾರ್ಥಿಗಳು  ಶಾಲಾ ಆವರಣದ ಶ್ರೀ ಶಂಕರ ಸಭಾಭವನದಲ್ಲಿ ವಿವಿಧ ರೀತಿಯ ಮಳಿಗೆಗಳನ್ನು ತೆರೆದು ವ್ಯವಹಾರದ ಚಾಣಾಕ್ಷತೆಯೊಂದಿಗೆ ಮಕ್ಕಳ  ಮಾರುಕಟ್ಟೆ ಮೇಳವನ್ನು ಯಶಸ್ವಿಗೊಳಿಸಿದರು. ಶಾಲಾ ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಕೇಂದ್ರ  ಬಿಂದುವಾಗಿ ಭಾಗವಹಿಸಿ ಮಾರುಕಟ್ಟೆ ಮೇಳದ ಯಶಸ್ಸಿಗೆ ಕೈಜೋಡಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top