ಸಮಾಜದ ಶಕ್ತಿಯಾಗಿ ನಿಂತ ಮಹಾಯೋಗಿ

Upayuktha
0


ಸುಮಾರು 7-8 ನೇ  ಶತಮಾನದಲ್ಲಿ ನಿರ್ಮಾಣವಾದ ಚೀನಾ ದೇಶದ ಹೂವಾನ್ ಪ್ರಾಂತ್ಯದ ಬೌದ್ಧ ವಿಹಾರದ ಮುಂದೆ ಅಲ್ಲಿನ ರಾಜನು ಒಂದು ಶಿಲಾಶಾಸನವನ್ನ ಬರೆಸುತ್ತಾನೆ ಆತನು ಅದರಲ್ಲಿ ಬರಿಸಿದ ಪ್ರಮುಖ ವಿಷಯವೇನೆಂದರೆ ಯಾರು ಈ ಜನ್ಮದಲ್ಲಿ ಪುಣ್ಯದ ಕಾರ್ಯಗಳನ್ನ ಮಾಡುತ್ತಾರೆಯೋ ಅವರಿಗೆ ಮುಂದಿನ ಜನ್ಮವೇನಾದರೂ ದೊರಕಿದರೆ ಅಂಥವರು ನಿಸ್ಸಂಶಯವಾಗಿ ಭಾರತದಲ್ಲೆ  ಹುಟ್ಟುತ್ತಾರೆ. ಭಾರತವು ಅತಿ ಪವಿತ್ರವಾದ ಭೂಮಿ ಅಲ್ಲಿ ನಾವೇನಾದರೂ ಹುಟ್ಟಬೇಕಾದರೆ ಪುಣ್ಯವನ್ನೇ ಮಾಡಿರಬೇಕು ಏಕೆಂದರೆ ಅಲ್ಲಿನ ಪ್ರತಿ ಮಣ್ಣಿನ ಕಣ ಕಣವು ಮಹಾತ್ಮರ ಪಾದಸ್ಪರ್ಶದಿಂದ ಆಧ್ಯಾತ್ಮದ ಸುಗಂಧವನ್ನು ಪಸರಿಸುತ್ತಿದೆ. ಅಲ್ಲಿನ ಸಂಸ್ಕೃತಿ ಪರಂಪರೆಯ ಶ್ರೇಷ್ಠತೆಯನ್ನು ಮತ್ತೆಲ್ಲಿಯೂ  ಕಾಣಲಾರೆವು  ಎಂದು ಆ ರಾಜನು ಶಾಸನದಲ್ಲಿ ಬರೆಸುತ್ತಾನೆ. ಅವು ಈ  ಮಣ್ಣಿನ ಬಗ್ಗೆ ಆತ ಬರೆಸಿದ ಉತ್ಸಾಹದ ಮಾತುಗಳಲ್ಲ ಅರ್ಥಗರ್ಭಿತವಾದ ಸತ್ಯದ ನುಡಿಗಳು. ತಾಯಿ ಭಾರತೀಯೂ ಸರ್ವ ಕಾಲಕ್ಕೂ ಮಹಾಯೋಗಿಗಳಿಗೆ ಜನ್ಮ ಕೊಡುತ್ತಾ ಬಂದಿದ್ದಾಳೆ ಇಲ್ಲಿ ಯೋಗಿ ಮಹಾತ್ಮರಿಗೆ ಯಾವತ್ತಿಗೂ ಕೊರತೆ ಆಗಿಲ್ಲ. ಜ್ಞಾನದ ಪ್ರವಾಹ ಸದಾಕಾಲ ತುಂಬಿ ಹರಿಯುತ್ತಿರುವ ನಾಡಿದು. 


ನಮ್ಮ ಮಧ್ಯೆ ಅನೇಕ ತಪಸ್ವಿಗಳು ಉದಿಸಿ ಬಂದು ತಮ್ಮ ಜ್ಞಾನ ಭಂಡಾರವನ್ನು ಸಮಾಜಕ್ಕೆ ಉಣಭಡಿಸುತ್ತಿದ್ದಾರೆ  ಅಂತಹ ಯೋಗಿಗಳಲ್ಲಿ ಒಬ್ಬರಾದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮರೆಗುದ್ದಿಯೆಂಬ ಪುಟ್ಟ ಗ್ರಾಮದ ಶ್ರೀ ಅಡಿವಿಸಿದ್ದೇಶ್ವರ ಮಠದ ಯುವಸಂತ, ರೈತ ಸನ್ಯಾಸಿ ಪರಮಪೂಜ್ಯ ಶ್ರೀ ಮ.ನಿ.ಪ್ರ ಗುರುಪಾದ ಮಹಾಸ್ವಾಮಿಜಿಗಳು ಒಬ್ಬರು. ಪೂಜ್ಯರು ರಾಚವ್ವ ಹಾಗೂ ಬಾಳಯ್ಯ  ಎಂಬ ಶರಣ ದಂಪತಿಗಳ ಉದರದಲ್ಲಿ 15/7/1976ರಂದು ಎರಡನೇ ಮಗನಾಗಿ ಜನಿಸಿದರು. ಪೂಜ್ಯರು ಮನೆಯಲ್ಲಿನ ಕಡುಬಡತನವನ್ನ ನೋಡಿ ಬಾಲ್ಯದಲ್ಲಿಯೇ ತಂದೆ ತಾಯಿಗಳ ಕಷ್ಟಗಳನ್ನು ಅರ್ಥಮಾಡಿಕೊಂಡು  ಯಾವತ್ತಿಗೂ ನನಗೆ ಇದು ಬೇಕು ಅದು ಬೇಕು ಎಂದು ಕಾಡಿಸಿ ಬೇಡಿದವರಲ್ಲ. 


ಇರುವುದರಲ್ಲೇ ತೃಪ್ತಿಯನ್ನು ಕಂಡು ಬೆಳೆದವರು ಬಾಲಕರಾದ ಗುರುಪಾದೀಶ್ವರರು ಪೂಜ್ಯ ನಿರುಪಾಧೀಶ ಮಹಾಸ್ವಾಮೀಜಿಗಳ ಪರಮಶಿಷ್ಯರಾದ ಜಮಖಂಡಿ ತಾಲೂಕಿನ ನಾವಲಗಿ ಗ್ರಾಮದ ಶ್ರೀಶೈಲಯ್ಯ ಹಿರೇಮಠ ಎಂಬ ಸದ್ಭಕ್ತರ ಮನೆಯಲ್ಲಿ ಪರಮಪೂಜ್ಯರ ಆಸೆಯಂತೆ ಬಾಲ ಗುರುಪಾದಯೋಗಿಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಸಣ್ಣ ವಯಸ್ಸಿನಲ್ಲೇ ವಾಕ್ಸಿದ್ದಿ ಪುರುಷರಾಗಿ  ಜನಸಾಮಾನ್ಯರ ಕಷ್ಟಗಳನ್ನು ದೂರ ಮಾಡುತ್ತಾ ಅನೇಕರ ಬಾಳಿಗೆ ಬೆಳಕಾದರು. ಸಮಾಜದ ಸಂಜೀವಿನಿ ಈ ನಾಡು  ಕಂಡ ಮಹಾಯೋಗಿ ಶ್ರೀ ಹಾನಗಲ್ಲ ಗುರು ಕುಮಾರೇಶ್ವರರು ಕಟ್ಟಿದ ಶಿವಯೋಗ ಮಂದಿರದಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನ ಪೂರ್ಣಗೊಳಿಸಿ ಹೆಚ್ಚಿನ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ಮೂರು ಸಾವಿರಮಠದಲ್ಲಿ ಸಂಪೂರ್ಣಗೊಳಿಸಿದರು. ಗುರು ಕುಮಾರೇಶನ ಅಣತಿಯಂತೆ ಸಮಾಜದ ಸೇವೆಗಾಗಿ ತಮ್ಮ ಬದುಕನ್ನೇ ಅರ್ಪಿಸಿಕೊಂಡ ಪೂಜ್ಯರು ದುರ್ಬಲ ಜನಾಂಗದ ಶಕ್ತಿಯಾಗಿ ನಿಂತಿದ್ದಾರೆ.    


ಮುಂದುವರೆಯುವುದು....


- ರಾಮಕೃಷ್ಣ ದೇವರು 

ಷಣ್ಮುಖಾರೂಢ  ಮಠ.ವಿಜಯಪುರ 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top