ನಿಟ್ಟೆಯಲ್ಲಿ ಎಂಸಿಎ ವಿಭಾಗದ ಎರಡು ದಿನಗಳ 'ಸೆಮಫೋರ್ ಫೆಸ್ಟ್'

Upayuktha
0


ನಿಟ್ಟೆ: 'ಪ್ರಸ್ತುತ ದಿನಗಳಲ್ಲಿ ಪಠ್ಯವನ್ನು ಓದಿ ಜ್ಞಾನ ಗಳಿಸುವುದರೊಂದಿಗೆ ಪ್ರಾಯೋಗಿಕ ಜ್ಞಾನವೂ ಅಗತ್ಯವೆಂಬುದನ್ನು ನಾವು ಅರಿಯಬೇಕು. ಉದ್ಯೋಗದಲ್ಲಿ ಉನ್ನತಿ ಪಡಯಲು ಅಗತ್ಯ ಕೌಶಲ್ಯಗಳನ್ನು ಕರಗತಗೊಳಿಸುವುದು ಅತ್ಯಗತ್ಯ' ಎಂದು ಬೆಂಗಳೂರಿನ ಕಿಪ್ಲೋ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಪ್ರೀತಂ ಪೂವಾನಿ ಅಭಿಪ್ರಾಯಪಟ್ಟರು.


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದ ವಾರ್ಷಿಕ ಎರಡು ದಿನಗಳ ಟೆಕ್ ಉತ್ಸವ  'ಸೆಮಫೋರ್'ನ್ನು ನ.19 ರಂದು ಬೆಳಗ್ಗೆ 9:30ಕ್ಕೆ ಉದ್ಘಾಟಿಸಿ ಅವರು ಮಾತನಾಡಿದರು. 'ಯಾವುದೇ ವೃತ್ತಿಯನ್ನು ಆರಂಭಿಸುವ ಸಂದರ್ಭದಲ್ಲಿ ನಾವು ಸಂಪಾದನೆಯ ಬಗ್ಗೆ ಹೆಚ್ಚಿನ ವ್ಯಾಮೋಹ ಹೊಂದಿರಬಾರದು. ಭವಿಷ್ಯವನ್ನು ಕಟ್ಟಿಕೊಳ್ಳಲು ತಂತ್ರಜ್ಞಾನ ಹಾಗೂ ಆಡಳಿತ ಜ್ಞಾನವೆರಡನ್ನೂ ಹೊಂದುವುದು ಉತ್ತಮ' ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸಲು ಕುತೂಹಲ ಮತ್ತು ನಾವೀನ್ಯತೆಯನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಸೆಮಫೋರ್ ಫೆಸ್ಟ್ ಕಾರ್ಯಕ್ರಮದಡಿಯಲ್ಲಿ ನಡೆಸಲಾಗುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ದಕ್ಷಿಣ ಭಾರತದ ಹಲವು ರಾಜ್ಯಗಳ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.


ಕಾಲೇಜಿನ ಎಂ.ಸಿ.ಎ ವಿಭಾಗದ ಮುಖ್ಯಸ್ಥೆ ಡಾ| ಮಮತಾ ಬಲಿಪ ಸ್ವಾಗತಿಸಿದರು. ಸೆಮಫೋರ್ ಸ್ಟಾಫ್ ಕಾರ್ಡಿನೇಟರ್ ಶರತ್ ಕೆ ಆರ್ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಮಿಶಲ್ ಪ್ರಾಂಶುಪಾಲರನ್ನು ಸಭೆಗೆ ಪರಿಚಯಿಸಿದರು. ಎಸ್ ಎಎಂಸಿಎ ವಿದ್ಯಾರ್ಥಿ ನಾಯಕ ಭೂಷಣ್ ಎ. ಬಂಗೇರ ಅವರು ಹಿಂದಿನ ವರ್ಷದ ಸೆಮಾಫೋರ್ ನ ಯಶಸ್ಸು ಮತ್ತು ಮುಖ್ಯಾಂಶಗಳನ್ನು ವಿವರಿಸಿದರು. ದೀಪಿತ್ ಅವರು ಈ ವರ್ಷದ ಉತ್ಸವದ ದೃಷ್ಟಿಕೋನ ಮತ್ತು ಯೋಜನೆಗಳನ್ನು ಹಂಚಿಕೊಂಡರು. ಸೌಮ್ಯಾ ಕಾರ್ಯದರ್ಶಿ ರಾನಿಕಾ ವಂದಿಸಿದರು. ವಿದ್ಯಾರ್ಥಿಗಳಾದ ವಿಶ್ವರೂಪ ಹಾಗೂ ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.


ಟ್ರೋಫಿ ಅನಾವರಣದೊಂದಿಗೆ ಸಭಾಕಾರ್ಯಕ್ರಮವು ಕೊನೆಗೊಂಡಿತು. ಇದು ಉತ್ಸವದ ವಿವಿಧ ತಾಂತ್ರಿಕ ಕಾರ್ಯಕ್ರಮಗಳಿಗೆ ಸ್ಪರ್ಧಾತ್ಮಕ ಮನೋಭಾವ ಮತ್ತು ಉತ್ಸಾಹವನ್ನು ಸೂಚಿಸುತ್ತದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top