ಶ್ರೀ ಗಣೇಶ ನೃತ್ಯಾಲಯ ವಿದ್ಯಾರ್ಥಿಗಳಿಂದ ರಂಗಾಭಿವಂದನೆ- ಕಲಾಚಾತುರಿ ಕಾರ್ಯಕ್ರಮ

Chandrashekhara Kulamarva
0





ಬೆಂಗಳೂರು: ನಗರದ ಮಲ್ಲೇಶ್ವರಂ ಸೇವಾ ಸದನದಲ್ಲಿ ಅರಿಶಿನಕುಂಟೆಯ ಶ್ರೀ ಗಣೇಶ ನೃತ್ಯಾಲಯ ರಂಗಾಭಿವಂದನೆ ಕಲಾಚಾತುರಿ ಕಾರ್ಯಕ್ರಮ ಸೊಗಸಾಗಿ ಮೂಡಿ ಬಂತು  ನೃತ್ಯ ಗುರುಗಳಾದ ವಿದ್ವಾನ್ ಎಂ ಡಿ ಗಣೇಶ ಮತ್ತು ವಿದುಷಿ ಭಾವನ ಗಣೇಶ ರವರ  ವಿದ್ಯಾರ್ಥಿಗಳಾದ ಕು ಐಶ್ವರ್ಯ, ಮಾನವಿ, ತನ್ಮಯಿ  ಮತ್ತು ಸಿಂಚನ ಭಾವಪೂರ್ಣವಾಗಿ ನೃತ್ಯ ಪ್ರಸ್ತುತಿ ಪಡಿಸಿ  ಜನಮನ ಸೂರೆಗೊಂಡರು.


 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡುತ್ತಾ, ಪೋಷಕರು ತಮ್ಮ ಮಕ್ಕಳ ಪ್ರತಿಭೆಗಳು ಹೊರಹೊಮ್ಮಲು ಇಂತಹ ಶ್ರೇಷ್ಠ ನೃತ್ಯ ಗುರುಗಳ ಬಳಿ ಅಭ್ಯಸಿಸಲು ಕಳುಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕೆಂದು ತಿಳಿಸಿದರು. ನೃತ್ಯಕುಟೀರದ ಕಲಾತ್ಮಕ ನಿರ್ದೇಶಕಿ ಕಲಾ ಯೋಗಿ ಪುರಸ್ಕೃತೆ ವಿದುಷಿ ದೀಪಾ ಭಟ್ ಮತ್ತು ವಿದ್ವಾನ್ ಮಂಜುನಾಥ ಪುತ್ತೂರು ಭಾಗವಹಿಸಿದ್ದರು. 


ಎಸ್ ನಂಜುಂಡ ರಾವ್ ಸೊಗಸಾದ ನಿರೂಪಣೆಯಲ್ಲಿ ವಿದ್ವಾನ್ ಬಾಲಸುಬ್ರಮಣ್ಯ ಶರ್ಮ ಗಾಯನದಲ್ಲಿ, ವಿದ್ವಾನ್ ನಾರಾಯಣಸ್ವಾಮಿ ಮೃದಂಗದಲ್ಲಿ ಹಾಗೂ ವಿದ್ವಾನ್ ಮಹೇಶ ಸ್ವಾಮಿ ಕೊಳಲಿನಲ್ಲಿ ಹಾಗೂ ನಟವಾಂಗದಲ್ಲಿ ವಿದುಷಿ ಭಾವನಾ ಗಣೇಶ್ ತಿಸ್ರ ಏಕ ಅಲರಿಪು, ಆದಿ ತಾಳ ತೋಡಿ ರಾಗದ ರೂಪಮು ಜ್ಜುಚಿ ವರ್ಣಂ, ಮಿಶ್ರ ಚಾಪು ತಾಳದ ರಾಗ ಮಾಲೀಕ ರಾಗದ  ಶಬ್ದಂ, ಆದಿತಾಳ ಕಲ್ಯಾಣಿ ರಾಗದ ಶೃಂಗಪುರಾದೀಶ್ವರಿ ಶಾರದಾ ಕೃತಿ, ಆದಿತಾಳ ಅಭೇರಿ ರಾಗದ ಅಕ್ಕಮಹಾದೇವಿ ವಚನ ಮತ್ತು ಕೊನೆಯಲ್ಲಿ ಆದಿತಾಳದ ನಟ ಭೈರವಿ ರಾಗದ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
To Top