ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ ಮುಕ್ಕದಲ್ಲಿ ನವೆಂಬರ್ 5, 2024ರಂದು ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಅಗರಿ ಸಂಸ್ಮರಣಾ ವೇದಿಕೆ ಅಧ್ಯಕ್ಷರು ಹಾಗೂ ಅಗರಿ ಎಂಟರ್ಪ್ರೈಸಸ್ ಮಾಲೀಕರಾದ ಶ್ರೀ ಅಗರಿ ರಾಘವೇಂದ್ರ ರಾವ್ ಮಾತನಾಡಿ, ಕಲಿಯುವ ಅವಕಾಶ ಇರುವುದು ವಿದ್ಯಾರ್ಥಿಗಳಿಗೆ ಮಾತ್ರ ಅ ಕಾರ್ಯ ಕಾಲೇಜಿನಲ್ಲಿ ಸಾಧ್ಯ. ಇಂದು ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಅರ್ಥಪೂರ್ಣವಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿರುವುದು ತುಂಬಾ ಸಂತಸವಾಗುತ್ತಿದೆ. ಪುಸ್ತಕಗಳನ್ನು ಓದುವ ಮಕ್ಕಳಲ್ಲಿ ಉತ್ತಮ ಮೌಲ್ಯವನ್ನು ಬೆಳೆಸುವ ಕಾರ್ಯ ಈ ಕಾಲೇಜಿನಲ್ಲಿ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದು ಶ್ಲಾಘಸಿದರು.
ಇನ್ನೊರ್ವ ಅತಿಥಿ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀ. ಶ್ರೀನಾಥ್ ಎಂ. ಪಿ. ಮಾತನಾಡಿ, ಪ್ರಪಂಚದ ಎಲ್ಲೆಲ್ಲಿ ಕನ್ನಡಿಗರಿದ್ದೆವೋ ಅಲ್ಲೆಲ್ಲಾ ಜಾತ್ರೆಯ ಸ್ವರೂಪದಲ್ಲಿ ನಾವು ರಾಜ್ಯೋತ್ಸವ ಆಚರಿಸುತ್ತೇವೆ. ಮಾತೃ ಭಾಷೆ ಬೇರೆಬೇರೆಯಾಗಿದ್ದರೂ ನಾವೆಲ್ಲರೂ ಕನ್ನಡಿಗರು ಎಂಬ ನಮ್ಮೆಲರಲ್ಲೂ ಇದೆ ಎಂದು ಸಂತಸ ವ್ಯಕ್ತಪಡಿಸಿದರು. ಇಂದಿನ ವಿದ್ಯಾರ್ಥಿಗಳು ಮುಂದಿನ ಸಾಹಿತಿಗಳು ಕನ್ನಡದ ಸಾಹಿತ್ಯ ತೇರನ್ನು ಎಳೆಯುವವರು ಈ ವಿದ್ಯಾರ್ಥಿಗಳು ಎಂದು ಶುಭ ಹಾರೈಸಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಮಾನ್ಯ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆ ಉಳಿಸಿಕೊಳ್ಳಬೇಕಾದ್ದದ್ದು ಕನ್ನಡಿಗರಾದ ನಮ್ಮ ಕರ್ತವ್ಯ. ನಮ್ಮ ರಾಜ್ಯ, ದೇಶದಿಂದ ಹೊರ ಹೋದಾಗ ನಮ್ಮ ಭಾಷೆಯ ಮಹತ್ವ ಅರಿಯಬಹುದು. ಅಪರಿಚಿತರು ನೀವು ಕನ್ನಡಿಗರೇ ಎಂದು ಗುರುತಿಸಿ ಮಾತನಾಡುವ ಪರಿಚಯ ಒಂದು ಉತ್ತಮ ಅನುಭವ. ಇಂದು ಬೆಂಗಳೂರಿನ ಅಂಗಡಿಗಳಲ್ಲೂ ಅನ್ಯಭಾಷಿಕರು ಕನ್ನಡ ಕಲಿತು ಸಂವಹನ ನಡೆಸುತ್ತಿರುವ ಪರಿವರ್ತನೆ ಸ್ವಾಗತಾರ್ಹ ಎಂದರು.
ಎಸ್ ಯು ಐ ಇ ಟಿ ಡೀನ್ ಡಾ. ರಾಮಕೃಷ್ಣ ಎನ್. ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನಿಲ್ ಕುಮಾರ್, ಶ್ರೀನಿವಾಸ ವಿಶ್ವವಿದ್ಯಾಲಯದ ಅಭಿವೃದ್ಧಿಕುಲಸಚಿವರಾದಡಾ. ಅಜಯ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಪ್ರೊ. ಶ್ರೀನಾಥ್ ರಾವ್ ಕೆ. ಸ್ವಾಗತಿಸಿದರು. ವೃಷಭೇಂದ್ರ ಸ್ವಾಮಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


