ಮಣಿಪಾಲ: ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ- ಭಾರತ ಸರ್ಕಾರ ಮತ್ತು ಕಮ್ಯುನಿಟಿ ರೇಡಿಯೊ ಅಸೋಸಿಯೇಶನ್, ನವದೆಹಲಿ ಸಹಯೋಗದಲ್ಲಿ ನಮ್ಮ ಹಿರಿಯರು ನಮ್ಮ ಗೌರವ ಸರಣಿ ಕಾರ್ಯಕ್ರಮ ಅರ್ಪಿಸುತ್ತಿದೆ.
ಈ ಸರಣಿಯ 1 ನೇ ಸಂಚಿಕೆಯಲ್ಲಿ ಹಿರಿಯ ನಾಗರಿಕರಿಗಾಗಿರುವ ಸಹಾಯವಾಣಿ ಕುರಿತು ಪ್ರಹಸನ ಮತ್ತು ಮಾಹಿತಿ ಪ್ರಸಾರವಾಗಲಿದೆ. ಇದು ಇಂದು (ನ.21) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನಾ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 22 ರಂದು ಮಧ್ಯಾಹ್ನ 2 ಗಂಟೆಗೆ ಇದರ ಮರುಪ್ರಸಾರವಿರುವುದು.
ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ಮತ್ತು ಐಫೋನ್ ನ ಆಪ್ ಗಳ ಮೂಲಕ ರೇಡಿಯೊ ಮಣಿಪಾಲ್ ಕಾರ್ಯಕ್ರಮ ಕೇಳಬಹುದಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ