ಬೆಂಗಳೂರು: ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಕಳೆದ ಐದು ದಿನಗಳಿಂದ ನಡೆಸುತ್ತಿರುವ "ಹರಿದಾಸ ಸಂಭ್ರಮ" ಕೊನೆಯ ದಿನವಾದ ಭಾನುವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲಿಗೆ "ಹರಿದಾಸರು ಕಂಡ ಶ್ರೀಕೃಷ್ಣ" ಶೀರ್ಷಿಕೆಯಲ್ಲಿ ವಿದ್ವಾನ್ ಶರತ್ ಆರ್. ರಾವ್ ಗಾಯನಕ್ಕೆ ಡಾ|| ವಿನಾಯಕಾಚಾರ್ ವ್ಯಾಖ್ಯಾನ ಮಾಡಿದರು.
ನಂತರ ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿ ಗಾಯನವನ್ನು ವಿದುಷಿ ಸಂಧ್ಯಾ ಶ್ರೀನಾಥ್, ವಿದುಷಿ ಶ್ರೀಮತಿ ಸುಮಲತಾ ಮಂಜುನಾಥ್ ಮತ್ತು ಅವರ ಶಿಷ್ಯ ವೃಂದದವರು ಪ್ರಸ್ತುತ ಪಡಿಸಿದರು. ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಕು|| ಚಂದ್ರಲಾ ಕಟ್ಟೆ, ಮೃದಂಗ ವಾದನದಲ್ಲಿ ಶ್ರೀನಿವಾಸ್ ಅನಂತರಾಮಯ್ಯ ಸಾಥ್ ನೀಡಿದರು ಎಂದು ಸಂಸ್ಥೆಯ ಪದಾಧಿಕಾರಿ ಕಟ್ಟೆ ಸತ್ಯನಾರಾಯಣ ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ