'ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ' ಅಂದರೆ, ಎಲ್ಲಿ ಮಹಿಳೆಯರನ್ನು ಆರಾಧಿಸುತ್ತೇವೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸ್ತ್ರೀಯರನ್ನು ಶಕ್ತಿ ಸ್ವರೂಪಿಣಿಯಾಗಿ ಆರಾಧಿಸಿದ ದೇಶ ನಮ್ಮದು.
ಮಹಿಳೆಯರು ಜೀವನದ ಪ್ರತಿ ಹಂತದಲ್ಲೂ ತನ್ನ ಪರಿಪೂರ್ಣ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆಕೆಗೆ ಜಗತ್ತಿನಲ್ಲಿ ಅಪೂರ್ವವಾದ ಸ್ಥಾನವಿದೆ. ಅದರಂತೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತವು ಸಂಸ್ಕೃತಿ, ಕಲೆಗಳಿಂದ ಕೂಡಿದೆ. ಅದಕ್ಕೆ ಮುಖ್ಯ ಕಾರಣವೇ ಹೆಣ್ಣು. ಮಹಿಳೆ ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ ಅಕ್ಕರೆ ಮತ್ತು ಭೂಮಿ ತೂಕದ ತಾಳ್ಮೆಯುಳ್ಳ ಮಹಿಳೆ. ಆಕೆ ದೇಶದ ಪ್ರಬಲ ಶಕ್ತಿ ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ. ಆಕೆಯನ್ನು ಹಿಂದಿನಿಂದಲೂ ಅಬಲೆ ಎಂದು ಕಾಣುತ್ತಿದ್ದರು. ನಮಗೆಲ್ಲರಿಗೂ ತಿಳಿದಂತೆ ಪುರಾತನ ಕಾಲದಿಂದಲೂ ಹೆಣ್ಣಿನ ಶೋಷಣೆ ನಡೆಯುತ್ತಲೇ ಇದೆ. ರಾಮಾಯಣದಲ್ಲಿ ಸೀತಾಮಾತೆ, ಮಹಾಭಾರತದಲ್ಲಿ ದೌಪದಿ ಇವರೆಲ್ಲ ಹೆಣ್ಣು ಎನ್ನುವ ಒಂದೇ ಒಂದು ಕಾರಣಕ್ಕೆ ಶೋಷಣೆಯಾಗಿರುವುದು. ಇವರಿಗೆಲ್ಲಾ ಪವಿತ್ರ ಸ್ಥಾನವನ್ನು ಹೊಂದಿದ್ದರೂ ಕಷ್ಟಕ್ಕೆ ತುತ್ತಾದರು. ಪುರುಷ ಪ್ರಧಾನ ಸಮಾಜವೇ ಇವರ ಈ ಸ್ಥಿತಿಗೆ ಮುಖ್ಯ ಕಾರಣ. ಈಗಿನ ಕಾಲದಲ್ಲಿಯೂ ಹೆಣ್ಣಿನ ಶೋಷಣೆ ನಡೆಯುತ್ತಿದೆ. ಕೆಲವೊಂದು ಕ್ಷೇತ್ರದಲ್ಲಿ ಆಕೆಗೆ ಮಾತ್ರ ಗೌರವವಿದೆಯಷ್ಟೇ.
ಆದರೆ, ಮಹಿಳೆ ಅದನ್ನೆಲ್ಲ ಹಿಮ್ಮೆಟ್ಟಿ ತಾನು ಅಬಲೆ ಅಲ್ಲ ಸಬಲೆ ಎಂದು ನಿರೂಪಿಸುತ್ತ ಸದೃಢ ಹೆಜ್ಜೆಯಿಟ್ಟು ಸಾಗುತ್ತಿದ್ದಾರೆ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಯ ಹಾದಿಯಲ್ಲಿ ಮಿಂಚುತ್ತಿರುವುದಕ್ಕೆ ಹಲವಾರು ನಿದರ್ಶನಗಳಿವೆ. ಶೋಷಣೆಯ ವಿರುದ್ಧ ಹೋರಾಡಿ ಪರಿಹಾರವನ್ನು ತಾನೇ ಕಂಡುಕೊಳ್ಳುತ್ತಿದ್ದಾಳೆ. ಪ್ರತಿ ಹೆಣ್ಣು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿವಾರಿಸಿಕೊಳ್ಳಬೇಕಾದರೆ ಆಕೆ ಶಿಕ್ಷಿತಳಾಗಬೇಕು. ಯಾವುದೇ ವಿಧದ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರದ ವಿರುದ್ಧ ದನಿ ಎತ್ತುವುದು ಮತ್ತು ನ್ಯಾಯ ಪಡೆಯುವುದು ಪ್ರತಿಯೊಬ್ಬ ಹೆಣ್ಣು ಮಕ್ಕಳ ಹಕ್ಕು.
-ನಮಿತಾ
ಎಸ್.ಡಿ.ಎಂ ಕಾಲೇಜು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ