ದುಬೈನಲ್ಲೊಬ್ಬ ಯಶಸ್ವಿ ಹೋಟೆಲ್‌ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ

Upayuktha
0



ಕುಂದಾಪುರದಲ್ಲೊಂದು ಚಿಕ್ಕ ಊರು ವಕ್ವಾಡಿ. ಈ ವಕ್ವಾಡಿ ಅಂದ ತಕ್ಷಣವೇ ನೆನಪಾಗುವುದು ಬಹುದೂರದ ದುಬೈಯಲ್ಲಿ ನೆಲೆಸಿರುವ ಬಹು ಯಶಸ್ವಿ ಯುವ ಹೊಟೇಲು ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿಯವರು. ಇವರು ಬರೇ ಒಬ್ಬ ಯಶಸ್ವಿ ಉದ್ಯಮಿ ಅನ್ನುವುದಕ್ಕಿಂತ ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಅವರಿಗಿರುವ ಪ್ರೀತಿ ಗೌರವ ಆಭಿಮಾನ. ತನ್ನ ದುಡಿಮೆ ಅದೆಷ್ಟೋ ಪಾಲನ್ನು ತನ್ನ ಹುಟ್ಟುಾರಿನ ಹತ್ತು  ಹಲವು ಜನೇೂಪಯೋಗಿ ಕಾರ್ಯಕ್ರಮಗಳಾದ ಶಿಕ್ಷಣ ಆರೇೂಗ್ಯ ವಸತಿ ಅನಾಥಾಶ್ರಮ ದೇವತಾ ಕಾರ್ಯಗಳಿಗೆ ಉದಾರವಾಗಿ ದೇಣಿಗೆ ನೀಡುವ ದಾನ ಶೂರ ಕಣ೯ನೂ ಹೌದು.



ನಮ್ಮೂರ ಯುವ ಯಶಸ್ವಿ ಹೋಟೆಲ್ ಉದ್ಯಮಿ ಪ್ರವೀಣ್ ಶೆಟ್ಟಿಯವರು ಬಹುದೂರದ ಮರಳು ನಾಡಿನಲ್ಲಿ ಗ್ರೂಪ್‌ ಆಫ್ ಫಾರ್ಚೂನ್ ಪ್ರತಿಷ್ಠಿತ  ಏಳುಹೊಟೇಲುಗಳನ್ನು ಸ್ಥಾಪಿಸುವುದರ ಮೂಲಕ ಇಂದು ಈ ಸಂಸ್ಥೆಯ ಅಧ್ಯಕ್ಷರಾಗಿ ಹೊಟೇಲು ಉದ್ಯಮದಲ್ಲಿ ಸರದಾರ ಎನ್ನಿಸಿಕೊಂಡಿದ್ದಾರೆ.ಈ ಯಶಸ್ವಿ ಹೊಟೇಲು ಉದ್ಯಮಿಯ ಯಶೇೂಗಾಥೆಯನ್ನು ಒಮ್ಮೆ ನಾವೆಲ್ಲ ಕಣ್ಣು ತೆರೆದು ನೇೂಡಲೇಬೇಕಾಗಿದೆ.


ಕುಂದಾಪುರದ ಒಂದು ಮಧ್ಯಮ ವಗ೯ದ ಬಂಟ ಕುಟುಂಬದಲ್ಲಿ ಹುಟ್ಟಿದ ಪ್ರವೀಣ್ ಶೆಟ್ಟಿಯವರು ತಮ್ಮ ಹೈಸ್ಕೂಲು ಪದವಿಪೂರ್ವ ಶಿಕ್ಷಣವನ್ನು ಕೇೂಟೇಶ್ವರದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪೂರೈಸಿ ತಮ್ಮ ವಿಜ್ಞಾನ ಪದವಿ ಶಿಕ್ಷಣವನ್ನು ಕುಂದಾಪುರದ ಭಂಡಾರ್ಕರ್ ಸ್ ಕಾಲೇಜಿನಲ್ಲಿ ಮುಗಿಸಿದರು. ಸುಮಾರು  35 ವರುಷಗಳ ಹಿಂದೆ ಅವರು ನೇರವಾಗಿ ಉದ್ಯೇೂಗಕ್ಕಾಗಿ ನೆಗೆದು ಹಾರಿದು ಯುನೈಟೆಡ್ ಅರಬಿಕ್ ಎಮಿರೇಟ್ಸ್ ರಾಷ್ಟ್ರಕ್ಕೆ. ಅದುಕೂಡಾ ದುಬೈ ಅನ್ನುವ ಅತ್ಯಂತ ಪ್ರಸಿದ್ಧಿ ವ್ಯಾಪಾರಿ ಕೇಂದ್ರಕ್ಕೆ. ಮೊದಲಾಗಿ ಬಂದ ಪ್ರವೀಣ್ ಶೆಟ್ಟಿಯವರಿಗೆ ತಾನು ಏನು ಮಾಡಬಹುದು ಅನ್ನುವ ಸ್ವಷ್ಟ ಅನುಭವೂ ಇರಲಿಲ್ಲ. ಅಂತೂ ಕೊನೆಗೂ ಅವರು ಆಯ್ಕೆ ಮಾಡಿಕೊಂಡಿದ್ದು ಹೇೂಟೇಲು ಉದ್ಯಮವನ್ನು.


ಒಬ್ಬ ವಿಜ್ಞಾನದ ಪದವಿಧರರಾಗಿ ದುಬೈಗೆ ಬಂದ ಅವರಿಗೆ ಈ ಹೇೂಟೆಲ್ ಕ್ಷೇತ್ರ ಬಗ್ಗೆಯೂ ಹೆಚ್ಚಾಗಿ ತಿಳಿದಿರಲಿಲ್ಲ. ಹಾಗಾಗಿ ಒಂದು ಹೇೂಟೇಲಿನಲ್ಲಿ ಸೂಪರ್ ವೈಸರ್ ಆಗಿ ಕೇವಲ 25 ಸಾವಿರ ಸಂಬಳಕ್ಕೆ ಸೇರಿಕೊಂಡು ಅತ್ಯಂತ ನಿಷ್ಠೆ ಪ್ರಾಮಾಣಿಕತನದಿಂದ ದುಡಿಯುವುದರೊಂದಿಗೆ ತಾನು ಒಂದು ಸ್ವಂತ ಹೊಟೇಲು ಉದ್ಯಮ ಪ್ರಾರಂಭಿಸ ಬೇಕು ಅನ್ನುವ ದೃಡ ಸಂಕಲ್ಪದೊಂದಿಗೆ 1997ರಲ್ಲಿ ಒಂದು ಸ್ವಂತ  ಹೇೂಟೇಲು ಶುರುಮಾಡಿ ಬಿಟ್ಟರು. ಮತ್ತೆ ಅವರು ಹಿಂದೆ ನೇೂಡಲೇ ಇಲ್ಲ; ದಿನಕ್ಕೆ ಹದಿನೆಂಟು ಗಂಟೆಗಳ ದುಡಿಮೆಯೊಂದಿಗೆ ಅತ್ಯಂತ ಧೈರ್ಯದಿಂದ ಹೊಟೇಲು ಉದ್ಯಮದ ಯಶಸ್ವಿ ಗುಣಗಳನ್ನು ಮೈಗೂಡಿಸಿಕೊಂಡು.


ಇಂದು ದುಬೈಯಲ್ಲಿ ಹೊಟೇಲು ಉದ್ಯಮಿಗಳ ಯಶಸ್ವಿ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರೆಂದರೆ ನಮ್ಮೆಲ್ಲರ ಅಭಿಮಾನದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು. ಇವರು ಹೊಟೇಲು ಉದ್ಯಮಿ ಅನ್ನುವುದಕ್ಕಿಂತಲೂ ಪರೇೂಪಕಾರಿ ಸ್ನೇಹ ಜೀವಿ ಮಾತ್ರವಲ್ಲ ಯುಎಇ ನಲ್ಲಿ ನೆಲೆಸಿರುವ ತನ್ನ ನಾಡಿನ ಜನರ ಸುಖ ಕಷ್ಟಗಳಿಗೆ ಸ್ಪಂದಿಸುವ ಹೃದಯ ಶೀಲ ವ್ಯಕ್ತಿ ಅನ್ನುವುದೇ ಇವರ ಪ್ರಖ್ಯಾತಿಗೆ ತೆರೆದ ಕನ್ನಡಿ. ಕೊರೊನ ಪಿಡುಗು ಸಂದರ್ಭದಲ್ಲಿ ಇವರು ನೀಡಿದ ಸಹಾಯ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ದುಬೈ ಹಾಗೂ ಸುತ್ತ ಮುತ್ತಿಲಿನ ಎಲ್ಲಾ ಕನ್ನಡ ಭಾಷಾ ಸಾಂಸ್ಕೃತಿಕ  ಕಾರ್ಯಕ್ರಮಗಳಿಗೆ ಇವರ ತೆರೆದ ಮನಸ್ಸಿನ ಪ್ರೇೂತ್ಸಾಹವಿರುವುದರಿಂದಲೇ ಇಂದೂ ಅದೆಷ್ಟೊ ಕಾರ್ಯಕ್ರಮಗಳು ದುಬೈ ಮರಳು ನಾಡಿನಲ್ಲಿ ವಿಜೃಂಭಿಸಲು ಸಾಧ್ಯವಾಗಿದೆ. ಇತ್ತೀಚೆಗೆ ದುಬೈಯಲ್ಲಿ ಜರುಗಿದ 69ನೇ ಕನ್ನಡ ರಾಜ್ಯೇೂತ್ಸವ ಸಮಾವೇಶದ ಯಶಸ್ವಿವಿನ ಹಿಂದೆ ಇವರ ಪ್ರಧಾನ ಪಾತ್ರವೂ ಇದೆ. ದುಬೈ ಕನ್ನಡಿಗರ ಆಸ್ತಿ ಹಾಗೂ ಶಕ್ತಿ ಅನ್ನುವ ಹೆಗ್ಗಳಿಕೆಗೆ ಪಾತ್ರ ರಾದವರು ಪ್ರವೀಣ್ ಶೆಟ್ಟಿಯವರು.


ಯು ಎ ಇ ಅನಿವಾಸಿ ಭಾರತೀಯ ವೇದಿಕೆಯ ಅಧ್ಯಕ್ಷರಾಗಿ ಪ್ರಮುಖ ಜವಾಬ್ದಾರಿ ನಿವ೯ಹಿಸುತ್ತಿರುವ ಪ್ರವೀಣ್ ಶೆಟ್ಟಿಯವರು ಕನ್ನಡ ಸಂಘ ಬಂಟರ ಸಂಘ ಹೀಗೆ ಹತ್ತು ಹಲವು ಸಂಘಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು.


ಇವರ ಹೊಟೇಲು ಉದ್ಯಮದಲ್ಲಿ ಸುಮಾರು 2000 ಮಂದಿ ಉದ್ಯೋಗ ಪಡೆದು ಯುಎಇ ರಾಷ್ಟ್ರದಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದರಲ್ಲಿ ಶೇ.70ರಷ್ಟು ಮಂದಿ ಕನ್ನಡಿಗರು ಇದ್ದಾರೆ ಅನ್ನುವುದನ್ನು ಶೆಟ್ಟಿಯವರು ಅತ್ಯಂತ ಅಭಿಮಾನದಿಂದ ನೆನಪಿಸಿಕೊಳ್ಳುತ್ತಾರೆ.


ಇವರ ಸಾಧನೆಗೆ ಸಂದ ಪ್ರಶಸ್ತಿಗಳು ಸಾಕಷ್ಟು ಇವೆ. 2021ರಲ್ಲಿ ಕನಾ೯ಟಕ ರಾಜ್ಯ ರಾಜ್ಯೇೂತ್ಸವ ಪ್ರಶಸ್ತಿ, ಕುವೆಂಪುವಿಶ್ವ ಕನ್ನಡ ಸಮ್ಮೇಳನದಲ್ಲಿ ವಿಶ್ವ ಮಾನವ  ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗಡಿನಾಡು ಸಾಧಕ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.


ಅತ್ಯಂತ ಮಿತಮಾತಿನ ಮೃದು ಸ್ವಭಾವದ ಸ್ನೇಹ ಸ್ವಭಾವದ ಪ್ರವೀಣ್ ಶೆಟ್ಟಿಯವರು ನೆನಪಿಸುವ ಮಾತೆಂದರೆ ಸಾಗಿ ಬಂದ ದಾರಿಯನ್ನು ಮರೆಯ ಬೇಡಿ;  ಬದುಕಿನ ಸುಖ ಕಷ್ಟಗಳ ಬೇರು ಸದಾ ಹೃದಯದಲ್ಲಿ ತುಂಬಿರಲಿ; ಸ್ವಷ್ಟ ಗುರಿ ಪ್ರಾಮಾಣಿಕ ದುಡಿಮೆ ಮತ್ತು ತಾಳ್ಮೆ ಇದು ನಮ್ಮೆಲ್ಲರ ಯಶಸ್ವಿನ ಹಾದಿ ಅನ್ನುವುದು ಮನದಾಳದ ಸಂದೇಶದ ನುಡಿ.


- ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top