ಕವನ: ಮತ್ತೆ ಮಕ್ಕಳಾಗೋಣವೇ?

Upayuktha
0



ಮತ್ತೆ ಮತ್ತೆ ಮಗುವಾಗಿ ಆಟ 

ಆಡುವ ಆಸೆ 

ಚಿನ್ನಿ ದಾಂಡು, ಬುಗುರಿ ಹಿಡಿದು 

ಹೊರಗೋಡುವ ಆಸೆ,

ಲಗ್ಗ್ಯೋ ಎನ್ನುತ ಚೇಂಡು ಹಿಡಿದು 

ಲಗೋರಿಯಾಟ ಆಡುವಾಸೇ


ಬಗೆ ಬಗೆಯ ಬಣ್ಣದ ಕಾಗದ ತಂದು 

ಗೋಂದುಹಚ್ಚಿ ಸುಂದರ ಗಾಳೀಪಟ 

ಮಾಡಿ ಬಾನೆತ್ತರಕ್ಕೆ ಹಾರಿಸುವಾಸೆ,

ಸಣ್ಣ ಸಣ್ಣ ಡಬ್ಬಿಯಲಿಯ  ಪಟಾಕಿಯ 

ಆಟದ ಪಿಸ್ತೂಲಿನಲಿ ಹಾರೀಸುವಾಸೇ 


ಕಾಗದದ ದೋಣಿ ಮಾಡಿ ನೀರೊಳಗೆ 

ತೇಲಿ ಬಿಡುವ ಆಸೆ, ಗೆಳತಿಯರ ಜೊತೆ 

ಕುಂಟೆ ಬಿಲ್ಲೆ ಆಡುವ ಆಸೆ, ಕಣ್ಣು ಮುಚ್ಚೇ 

ಕಾಡೇ ಗೂಡೇ ಅನ್ನುತ ಕಣ್ಣು ಮುಚ್ಚಾಲೆಯಾಟವ

ಆಡುವ ಆಸೆ, ಚಿಕ್ಕ ಪುಟ್ಟ ಕಲ್ಲು ಪೇರಿಸಿ,

ಸುಂದರ ಮನೆ ಕಟ್ಟುವಾಟ ಆಡುವ ಆಸೆ 


ಬಳಪ ಪಾಟಿ ಕಲ್ಲು ತಂದು 

ಅ ಆ ಇ ಈ ಬರೆಯುವ ಆಸೆ 

ಗೆಳತಿಯರ ಜೊತೆ ಸಣ್ಣ ತಟ್ಟೇಲಿ 

ಅಟ್ಟಏರಿ ನಗು ನಗುತ  

ಊಟ ಮಾಡುವ ಆಸೆ 


ಬರೀ  ಆಸೆ, ಆಸೆಯಷ್ಟೇ

ಬಾರದು ನಾವು ಕಳೆದ ಬಾಲ್ಯ 

ಬಾರದಿರದು ಸಿಹಿ ನೆನಹುಗಳ 

ಸವಿ ಬುತ್ತಿ, ಇದನ್ನೇ ಉಂಡು 

ತೃಪ್ತರಾಗೋಣ, ಅಲ್ಲವೇ 


- ರೇಖಾ ಮುತಾಲಿಕ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)
To Top