ಪ್ರಧಾನಿ ಮೋದಿ ಅವರ ಸಹೋದರರಿಂದ ಉಡುಪಿ ಶ್ರೀಕೃಷ್ಣನ ದರ್ಶನ

Upayuktha
0



ಉಡುಪಿ: ಪೂಜ್ಯ ಪರ್ಯಾಯ ಶ್ರೀಪಾದರ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹಿರಿಯ ಅಣ್ಣನವರಾದ ಸೋಮು ಭಾಯ್ ಮೋದಿಯವರು ತಮ್ಮ ಪತ್ನಿ ಶ್ರೀಮತಿ ಚಂದ್ರಿಕಾ ಬಾಯ್ ಮೋದಿಯವರೊಂದಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದೇವರ ದರ್ಶನ ಪಡೆದುಕೊಂಡರು.


ಪ್ರಸಿದ್ಧ ನೇತ್ರ ತಜ್ಞ ಮತ್ತು ಅವರ ಆತ್ಮೀಯ ಮಿತ್ರರಾದ ಡಾ. ಶ್ರೀಕೃಷ್ಣಪ್ರಸಾದ್ ಜೊತೆಗೆ ಆಗಮಿಸಿದ ಮೋದಿಯ ಅಣ್ಣನವರು ಬಳಿಕ ಭೋಜನ ಶಾಲೆಯ ಮುಖ್ಯಪ್ರಾಣನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಾಲು ದೀಪಗಳನ್ನು ಬೆಳಗಿಸಿದರು.


ಗೀತಾಮಂದಿರದ ಮುಂದೆ ಕಾರ್ತಿಕ ಮಾಸದ ವಿಶೇಷ ಸಂಕೀರ್ತನೆ ನಡೆಯುತ್ತಿದ್ದನ್ನು ಗಮನಿಸಿ ಸಂತಸ ಪಟ್ಟರು.


ನಂತರ ಪೂಜ್ಯ ಪರ್ಯಾಯ ಶ್ರೀಪಾದರನ್ನು ಕಿರಿಯ ಶ್ರೀಪಾದರ ಜೊತೆಗೆ ಗೀತಾಮಂದಿರದಲ್ಲಿ ಭೇಟಿಯಾಗಿ  ವಿಶೇಷ ಆಶೀರ್ವಾದವನ್ನು ಪಡೆದುಕೊಂಡರು.


ಪೂಜ್ಯ ಪರ್ಯಾಯ ಶ್ರೀಪಾದರ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ವಿಶೇಷ ಆಸಕ್ತಿಯನ್ನು ತಳೆದ ಸೋಮು ಮೋದಿಯವರು  ಪೂಜ್ಯ ಕಿರಿಯ ಶ್ರೀಪಾದರ ಸಮ್ಮುಖದಲ್ಲಿ ಪೂಜ್ಯ ಶ್ರೀಪಾದರಿಂದ ಗೀತಾಲೇಖನ ಯಜ್ಞದ ದೀಕ್ಷೆಯನ್ನು ಪಡೆದುಕೊಂಡರು.


ಇದೇ ಸಂದರ್ಭದಲ್ಲಿ ತಮ್ಮ ನರೇಂದ್ರ ಮೋದಿಯವರು ಶ್ರೀಗಳ ಗೀತಾ ಲೇಖನ ಯಜ್ಞದ ಬಗ್ಗೆ ಶ್ಲಾಘಿಸಿ ಬರೆದ ಪತ್ರವನ್ನು ಗಮನಿಸಲು ಮರೆಯಲಿಲ್ಲ.


ಪೂಜ್ಯ ಶ್ರೀಪಾದರ ಜೊತೆ ಸುಮಾರು ಹೊತ್ತು ಕಳೆದ ಸೋಮುರವರು ಸನ್ಮಾನ್ಯ ಮೋದಿಜೀಯವರಿಗೆ ದೇಶವನ್ನು ಮುನ್ನಡೆಸಲು ತಮ್ಮಂತಹ ಸಾಧು ಸಂತರಿಂದ ಬಂದ ಆಶೀರ್ವಾದದ ಬಲವನ್ನು ಕೊಂಡಾಡಿದರು. ಮಾತ್ರವಲ್ಲ ವಿದೇಶಗಳಲ್ಲಿ ಪೂಜ್ಯರು ಸ್ಥಾಪಿಸಿದ್ದ ಶ್ರೀ ಕೃಷ್ಣ ಮಂದಿರಗಳ ಬಗ್ಗೆ ಕೇಳಿ ತಿಳಿದುಕೊಂಡರು.


ಇವರ ಜೊತೆಗೆ ಆಗಮಿಸಿದ್ದ ಸ್ನೇಹಿತರಾದ ಗೋವಿಂದ ಭಾಯ್ ರವರು ಶ್ರೀಗಳಿಂದ ಆಶೀರ್ವಾದವನ್ನು ಪಡೆದುಕೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top