ನಾದಜ್ಯೋತಿ ಕಾರ್ತಿಕ ಸಂಗೀತ ಸಂಭ್ರಮ

Upayuktha
0


ಬೆಂಗಳೂರು: ನಾಡಿನ ಪ್ರಸಿದ್ಧ ಸಂಗೀತ ಸಂಸ್ಥೆಯಾದ ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮ ಮಂದಿರದಲ್ಲಿ ನವೆಂಬರ್ 20 ರಿಂದ 24ರ ವರೆಗೆ ಕಾರ್ತೀಕ ಸಂಗೀತ ಸಂಭ್ರಮ, ಶ್ರೀ ಕನಕದಾಸರ ಜಯಂತಿ, ಕನ್ನಡ ರಾಜ್ಯೋತ್ಸವ ಮತ್ತು ಹರಿದಾಸ ಸಂಭ್ರಮ-2024ರ ಪ್ರಯುಕ್ತ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ ;


ನವೆಂಬರ್ 20, ಬುಧವಾರ : 6 ಗಂಟೆಗೆ ಉದ್ಘಾಟನೆ ನಂತರ "ಸುಗಮ ಸಂಗೀತ" ಶ್ರಾವ್ಯ ಆಚಾರ್ಯ (ಗಾಯನ),  ಪ್ರಮೋದ್ ಶ್ಯಾಮ್ (ಹಾರ್ಮೋನಿಯಂ), ಸುದತ್ತಾ ಎಲ್.ಎಸ್. (ತಬಲಾ). ಸಂಜೆ 6-00ಕ್ಕೆ.


ನವೆಂಬರ್ 21, ಗುರುವಾರ : ಶಶಾಂಕ್ ವಿ. ಚಿನ್ನ (ಕೊಳಲು), ಟಿ. ನಿಶಾಂತ್ (ಪಿಟೀಲು), ಕೃಷ್ಣ ವೇದಾಂತ (ಮೃದಂಗ). ಸಂಜೆ 6-00ಕ್ಕೆ.


ನವೆಂಬರ್ 22, ಶುಕ್ರವಾರ : ಶೈಲಜಾ ಶ್ರೀನಾಥ್ (ವೀಣಾ ವಾದನ), ಪ್ರವೀಣ್ ಹರಿಹರನ್ (ಮೃದಂಗ), ಸತೀಶ್ ಗೌತಮ್ (ಘಟ). ಸಂಜೆ 6-00ಕ್ಕೆ 


ನವೆಂಬರ್ 23, ಶನಿವಾರ : 'ನಾದಜ್ಯೋತಿ ಪುರಸ್ಕೃತ' ಡಾ|| ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ (ಗಾಯನ), ಎಸ್.ಪಿ. ಅನಂತಪದ್ಮನಾಭ (ಪಿಟೀಲು), ಫಣೀಂದ್ರ ಭಾಸ್ಕರ್ (ಮೃದಂಗ), ಶ್ರೀನಿಧಿ ಕೌಂಡಿನ್ಯ (ಘಟ). ಸಂಜೆ 6-00ಕ್ಕೆ 


ನವೆಂಬರ್ 24, ಭಾನುವಾರ: ಸಂಜೆ 5-00ಕ್ಕೆ ಹರಿದಾಸ ರೂಪಕ : "ಹರಿದಾಸರು ಕಂಡ ಶ್ರೀಕೃಷ್ಣ" ಡಾ|| ವಿನಾಯಕ ಆಚಾರ್ಯ (ನಿರೂಪಣೆ), ರಾವ್ ಆರ್. ಶರತ್ (ಗಾಯನ), ನಾಗರಾಜ್ ಮಂಡ್ಯಂ (ಪಿಟೀಲು), ಅಪ್ರಮೇಯ ಭಾರಧ್ವಾಜ್ (ಮೃದಂಗ). ನಂತರ ಸಂಧ್ಯಾ ಶ್ರೀನಾಥ್ ಮತ್ತು ವೃಂದದವರಿಂದ ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿ ಗಾಯನ. ಚಂದ್ರಲಾ ಕಟ್ಟೆ (ಪಿಟೀಲು), ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ).


ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ಪದಾಧಿಕಾರಿ ಕಟ್ಟೆ ಸತ್ಯನಾರಾಯಣ ವಿನಂತಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top