ಹಾಲಿವುಡ್‌ನಲ್ಲಿ ಸೂಪರ್ ಮ್ಯಾನ್ ಬ್ಯಾಟ್ ಮ್ಯಾನ್ ಇದ್ದಾರೆಯೋ ಅದೇ ತರಹ ಸ್ಯಾಂಡಲ್‌ವುಡ್‌ನಲ್ಲೂ ಬಘೀರ ಇದ್ದಾನೆ ಎಂದು ಗರ್ವದಿಂದ ಹೇಳಬಹುದು. ಚಿಕ್ಕ ವಯಸ್ಸಿನಿಂದಲೇ ಸೂಪರ್ ಹೀರೋ ಆಗಬೇಕು ಎಂದು ಕನಸು ಹೊತ್ತ ವೇದಾಂತಿಗೆ ತಾಯಿಯ ಪ್ರೇರೇಪಣೆಯಿಂದ ಪೊಲೀಸ್ ಅಧಿಕಾರಿಯಾಗುವನು.
ಸಮಾಜದ ಸುಧಾರಣೆ, ಲೋಪ ದೋಷಗಳನ್ನು ಬಗ್ಗಿ ಬಡೆಯಲು ಮುಂದಾದ ವೇದಾಂತಿಗೆ ಮೇಲಧಿಕಾರಿಗಳ ಒತ್ತಡ, ಅಡೆ- ತಡೆ, ವ್ಯವಸ್ಥೆ ಅವನನ್ನು ಬಘೀರನಾಗಿ ಮಾರ್ಪಾಡು ಮಾಡುತ್ತದೆ.
ಇಲ್ಲಿಂದ ಮುಖವಾಡ ಧರಿಸಿದ ಬಘೀರ ಕತ್ತಲೆಯ ಅಧ್ಯಾಯ ಪ್ರಾರಂಭವಾಗುತ್ತದೆ. ಚಿತ್ರಕಥೆ ತೀರಾ ಸಿಂಪಲ್ ಸ್ಟೋರಿ ಹೊಂದಿದ್ದರು ಕಥೆ ನಿರೂಪಣಾ ಶೈಲಿ ಚೆನ್ನಾಗಿ ಇದೆ.
ನಿರ್ದೇಶಕ ಡಾ. ಸೂರಿ, ಲಕ್ಕಿ ಚಿತ್ರದಲ್ಲಿ ಇವರು ಪರಿಚಯವಾಗಿದ್ದು ಮತ್ತೊಮ್ಮೆ ಡೈರೆಕ್ಟರ್ ಹ್ಯಾಟ್ ಧರಿಸಿ ಮನೆಮಾತಾಗಿದ್ದಾರೆ. ಅವರ ಕೈ ಚಳಕ ಪರದೆ ಉಪಸ್ಥಿತಿ, ಸಿನಿಮಾ ತೆಗದುಕೊಂಡು ಹೋದ ಪರಿ, ಅಧ್ಯಾಯ; ಎಲ್ಲದಕ್ಕೂ ಪ್ರಶಂಸೆ ನೀಡಲೇ ಬೇಕು. ಮೊದಲರ್ಧ ಕಿಚ್ಚಿದು ಕುಣಿಯುವ ಸಿನಿ ಮಂದಿ, ದ್ವಿತೀಯಾರ್ಧದಲ್ಲಿ ಕೊಂಚ ಸಾವಧಾನ ರೀತಿಯಿಂದ ಸಾಗುತ್ತದೆ. ಬೋರ್ ಎನಿಸಿದಾಗ ಸಂಭಾಷಣೆಯಲ್ಲಿ ಕೊಡುವ ಜಲಕ್ ಟಿಕೆಟ್ ಹಣವನ್ನು ವಸೂಲಿ ಮಾಡುತ್ತದೆ.
ನಾಯಕಿ ರುಕ್ಮಿಣಿ ವಸಂತ್ ಎಲ್ಲ ಪಾತ್ರಕ್ಕೂ "ನಾ ಸೈ" ಎಂಬುದು ತೋರಿಸಿದ್ದಾರೆ. ಗುನುಗುವಂತಹ ಹಾಡುಗಳು ಇಲ್ಲವಾದರೂ "ರುಧಿರ ಧರ" ಬಿ ಜಿ ಎಂ ಚಿತ್ರದ ಪ್ರಗತಿಗೆ ಏಣಿಯಾಗಿದೆ.
ಪ್ರಶಾಂತ್ ನೀಲ್ ಬರವಣಿಗೆ ಇರುವುದರಿಂದ ಕತ್ತಲೆ ಸ್ವಲ್ಪ ಜಾಸ್ತಿ ಆವರಿಸಿದೆ. ಅರ್ಧಾಂಶ ಚಿತ್ರಕಥೆ ಮಂಗಳೂರಿನಲ್ಲಿ ಚಿತ್ರಿಕರಿಸಿದ್ದು ಅಲ್ಲಿನ ಸೊಗಡು ಹಾಗು ಭಾಷಾ ವೈಖರಿಯನ್ನು ಸೆರೆಹಿಡಿಯುವಲ್ಲಿ ತಂಡ ಕೊಂಚದ ಮಟ್ಟಿಗೆ ವಿಫಲತೆ ಕಂಡಿದೆ.
ಸಹ ಖಳನಟನ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಯವರ ಕೋಟ್ಯಾನ್ ಪಾತ್ರವನ್ನು ಇನ್ನಷ್ಟು ನುಣುಪಾಗಿಸಬಹುದು ಇತ್ತು ಹಾಗು ನಟನನ್ನು ಇನ್ನು ಸಹ ಬಳಸಬಹುದು ಇತ್ತು ಎಂದೆನಿಸುತ್ತದೆ. ಮೈನ್ ವಿಲ್ಲನಿಗೆ ಪಾತ್ರಕ್ಕೆ ತಕ್ಕ ಆಯ್ಕೆ ಮಾಡಿದ್ದಾರೆ. ಗರುಡ ರಾಮ್ ಅವರ ಆರ್ಭಟ, ಭಯಾನಕ ನೋಟ, ನಟನೆ ಎಲ್ಲವೂ ನೂರಕ್ಕೆ ನೂರು.
ಇನ್ನು ಮುಖ್ಯ ಭೂಮಿಕೆಯಲ್ಲಿ ಕಂಡು ಬರುವ ಹಿರಿಯ ನಟರು ಪ್ರಕಾಶ್ ರೈ, ಅಚ್ಚುತ್ ಕುಮಾರ್, ರಂಗಾಯಣ ರಘು ಕಥೆಗೆ ಇನ್ನಷ್ಟು ಹೊಳಪು ತಂದಿದ್ದಾರೆ.
ಶ್ರೀ ಮುರಳಿ ಅವರ ದೈಹಿಕ ಸಾಮರ್ಥ್ಯ- ದೇಹವನ್ನು ಪಾತ್ರಕ್ಕೆ ತಕ್ಕಂತೆ ಪಳಗಿಸಿಕೊಂಡಿದ್ದಾರೆ. ಚಿತ್ರ ಕಗ್ಗಿ ಅವರ ದೈಹಿಕ ಸಮರ್ಪಣೆ ನಿಜಕ್ಕೂ ಶ್ಲಾಘನೀಯ. ಸಿನಿಮಾದ ಪ್ರಚಾರದ ಕಾರ್ಯದಲ್ಲಿ ತಂಡ ಇನ್ನಷ್ಟು ಒಟ್ಟು ನೀಡಬೇಕು ಇತ್ತು. ದೊಡ್ಡ ಮಟ್ಟಿಗೆ ಪ್ರಚಾರ ಮಾಡಿದ್ದಾರೆ ಚಿತ್ರ ಮತ್ತಷ್ಟು ಯಶಸ್ಸು ಕಾಣುತ್ತಿತ್ತು ಎಂಬುದೂ ನನ್ನ ಆಶಯ.
ಪ್ರಶಾಂತ್ ನೀಲ್ ಅವರ ಕಥೆ ರುಚಿ ತಗ್ಗದ ಸ್ವಾದ ಬರಿತ ಊಟದ ತರಹ, ಕೆಲವೊಂದು ಕಡೆ ಖಡಕ್ ಬ್ಯಾಡಗಿ ಖಾರ, ಇನ್ನೊಂದು ಕಡೆ ಮೈಸೂರ್ ಪಾಕ್‌ನಂತೆ ಸಿಹಿ, ಹಿಟ್ ಸಿನಿಮಾ ಬಾರದೆ ಕಂಗಾಲಾಗಿದ್ದ ಚಂದನವನದ ಅಭಿಮಾನಿಗಳಿಗೆ ಒಂದೊಳ್ಳೆ ಮಿಕ್ಸ್ ಮಸಾಲ ತುಂಬಿರುವ ಆಕ್ಷನ್ ಪ್ಯಾಕ್ ಸಿನಿಮಾ ಮತ್ತೊಮ್ಮೆ ಉಣ ಬಡಿಸಿದ್ದಾರೆ. ಕಥೆ ನಿರೂಪಣೆ ಮಾಡಿದ ಪರಿ ಅತ್ಯುತ್ತಮ. ಕಥೆಗೆ ತಕ್ಕಂತ ಕಲರ್ ಗ್ರೈಡಿಂಗ್ ಆಯ್ಕೆ.
ಬಿ. ಅಜನೀಶ್ ಲೋಕನಾಥ್ ಬಿ ಜಿ ಎಂ ವಿಚಾರದಲ್ಲಿ ಈ ಬಾರಿ ಟಾಲಿವುಡ್ ಅನ್ನು ಮೀರಿಸಿದ್ದಾರೆ. ವಿಧ ವಿಧವಾದ ಬಿ ಜಿ ಎಂ ಇದ್ದು, ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆ ಮಿಕ್ಸ್ ಮಾಡಿ ತಂದಿರುವ ಸಂಗೀತ ಹೊಸ ತರಹದ ಫೀಲ್ ಕೊಡುತ್ತದೆ.
ಇನ್ನು ಕಥೆಯಲ್ಲಿ ನೋಡುವುದಾದರೆ ತನ್ನ ತಂದೆಯನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಂಡು ಇರುವ ವೇದಂತಿಗೆ ಅವರು ಕೂಡ ಲಂಚ ಕೋರರು ಎಂದು ತಿಳಿದು ಸಿಡಿಲು ಬಡಿದಂತೆ ಆಗುತ್ತದೆ. ಸ್ಟೇಷನ್ ನ ಮುಂದೆ ಮಹಿಳೆ ಓರ್ವಳು ಬೆಂಕಿ ಅನಾಹುತ ಘಟನೆಯಿಂದ ಬಘೀರ ಎಂಬ ಪಾತ್ರ ಪರದೆ ಮೇಲೆ ಬರುತ್ತದೆ.
ಸಣ್ಣ ಪುಟ್ಟ ಸಮಸ್ಯೆಗಳಿಗೆ ಒತ್ತು ಕೊಡುತ್ತಿದಂತ ವೇದಾಂತಿಗೆ ಮುಂಬರುವ ತಕರಾರುಗಳು! ಮುಖವಾಡದ ಹಿಂದೆ ಇರುವ ವ್ಯಕ್ತಿ ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಗಳ ಹರಸಾಹಸ, ವಿಲ್ಲನ್ ಮಾಡುವಂತ ಅಕ್ರಮ ಆಮದು ರಫ್ತುಗಳು ಕಥೆಯ ಜೀವಾಳ.
ಪ್ರಕಾಶ್ ರೈ ಅವರ ನಟನೆಗೆ ಸರಿಸಾಟಿಯಿಲ್ಲ. ಮಾಸ್ ಡೈಲಾಗ್ ಯಿಂದ ಹಿಡಿದು ಹಾಸ್ಯದ ತನಕ ಪೂರ್ತಿ ಜವಾಬ್ದಾರಿ ಎಲ್ಲ ಸನ್ನಿವೇಶದಲ್ಲೂ ಚಾಚೂ ತಪ್ಪದೆ ನಿಭಾಯಿಸಿದ್ದಾರೆ.
ಎರಡು ಶೇಡ್ ನಲ್ಲಿಯು ಸಹ ಶ್ರೀ ಮುರಳಿ ಬಹಳ ಉತ್ತಮವಾಗಿ ಕಣ್ಣಿಸುತ್ತಾರೆ. ಉಗ್ರ೦ ಅದ ಬಳಿಕ ಮತ್ತೊಂದು ಕಮ್ ಬ್ಯಾಕ್ ಸಿನಿಮಾ ಎಂದರೆ ತಪ್ಪಾಗದು. ಸ್ಯಾಂಡಲ್‌ವುಡ್‌ನಲ್ಲೂ ಈ ರೀತಿಯ ಒಂದು ಸಿನಿಮಾ ನೋಡಲು ಬಹಳ ಖುಷಿ ಕೊಡುತ್ತದೆ.
ಪುರಾಣದ ಭಗೀರಥ ಗಂಗೆಯನ್ನು ಧರೆ ತರಲು ಹಠ ಹಿಡಿದರೆ, ಕಲಿಯುಗದ ಬಘೀರ ಸತ್ಯಕ್ಕಾಗಿ. ಒಟ್ಟಾರೆ ಸಿನಿಮಾದಲ್ಲಿ ಸತ್ಯ ಮೇವ ಜಯತೆ ಎಂಬ ಘೋಷಕ್ಕೆ ಹಾಗೂ ವಾಸ್ತವ ವ್ಯವಸ್ಥೆಗೆ ಬಘೀರನೆ ಪಂಚಾಯ್ತಿಯೇ ಉತ್ತರ.
ರಕ್ಷಿತ್ ಆರ್. ಪಿ
ಕುವೆಂಪು ವಿಶ್ವ ವಿದ್ಯಾನಿಲಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ