ಈಗಿನ ಆಧುನಿಕ ಯುಗದಲ್ಲಿ ಒತ್ತಡವೆಂಬುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಸ್ವಲ್ಪ ಬುದ್ಧಿವಂತಿಕೆ. ಉಪಯೋಗಿಸಿದರೆ ನಾವು ಮಾನಸಿಕ ಮತ್ತು ಕಾರ್ಯ ಒತ್ತಡವನ್ನು ನಿರ್ವಹಿಸಬಹುದು.
ಆರಾಮದಾಯಕ ಬಟ್ಟೆಗಳನ್ನು ಉಪಯೋಗಿಸಿ: ನಮ್ಮ ಬಟ್ಟೆಗಳು ನಮಗೆ ಹೊಂದುವಂತೆ ಇರಬೇಕು. ಅತಿ ಸಡಿಲವಾದ ಮತ್ತು ಅತಿ ಬಿಗಿಯಾದ ಬಟ್ಟೆಗಳು ಇರಿಸು ಮುರಿಸು ಮಾಡುತ್ತವೆ. ಅವು ಕೂಡ ನಮಗೆ ಒತ್ತಡ ಉಂಟು ಮಾಡುತ್ತೇವೆ. ಆರಾಮದಾಯಕ ಬಟ್ಟೆಗಳನ್ನು ಧರಿಸುವುದರಿಂದ ನಾವು ನಮ್ಮ ಒತ್ತಡಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳ ಬಹುದು.
ಧ್ಯಾನ ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು. ಕಾರ್ಯ ಮತ್ತು ಮಾನಸಿಕ ಒತ್ತಡವನ್ನು ಎದುರಿಸ ಬೇಕಾದಾಗ ಸ್ವಲ್ಪ ಹೊತ್ತು ಧ್ಯಾನಸ್ಥನಾಗಿ ಕುಳಿತರೆ ನಮಗೆ ಒಂದು ರೀತಿಯ ನವಿರಾದ ಭಾವನೆ ಮೂಡಿ ಹೊಸ ಚೈತನ್ಯ ಬಂದು ಒತ್ತಡವನ್ನು ನಿರ್ವಹಿಸುವ ಧೈರ್ಯ ಮೂಡುತ್ತದೆ.
ನಿಮ್ಮನ್ನು ಅಪ್ಡೇಟ್ ಮಾಡಿಕೊಳ್ಳಿ. ನಮ್ಮನ್ನು ಹೊಸ ಆಲೋಚನೆಗಳಿಗೆ ಮತ್ತು ಹೊಸ ತಂತ್ರಜ್ಞಾನಕ್ಕೆ ಒಗ್ಗಿಸಿಕೊಳ್ಳುವುದರಿಂದ ಕೆಲಸವವನ್ನು ವೇಗವಾಗಿ ಮುಗಿಸುವ ಐಡಿಯಾಗಳು ದೊರೆತು ನಾವು ಒತ್ತಡವನ್ನು ನಿಯಂತ್ರಿಸಬಹುದು.
ಸೃಜನ ಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸೃಜನ ಶೀಲ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ಬೇಡವಾದ ಯೊಚನೆ ಮಾತು, ಟೆನ್ಷನ್ ದೂರಾಗಿ ಹೊಸ ಉಪಾಯಗಳು ಬರಬಹುದು ಮತ್ತು ಮನಸ್ಸು ಉಲ್ಲಸಿತವಾಗಿರುತ್ತದೆ.
ಇದಕ್ಕೆ ಇಂಗ್ಲಿಷಿನಲ್ಲಿ ಹೇಳುತ್ತಾರೆ. An empty mind is devil's Workshop. ಆದ್ದರಿಂದ ನಾವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡದಿಂದ ಪಾರಾಗಬಹುದು.
ಸಮಯದ ನಿರ್ವಹಣೆ. ಯಾರು ಸಮಯವನ್ನು ಸರಿಯಾಗಿ ಬಳಸಿಕೊಳ್ಳುತ್ತಾರೋ ಅವರು ಯಾವಾಗಲೂ ಯಶಸ್ವಿಯಾಗುತ್ತಾರೆ. ಆದ್ದರಿಂದ ಇದ್ದ ಸಮಯವನ್ನು ಸರಿಯಾಗಿ ವಿಂಗಡಿಸಿ ಬಳಸುವುದರಿಂದ ಟೈಂಪಾಸ್ ಧೋರಣೆ ಮತ್ತು ಒತ್ತಡವನ್ನು ನಿಯಂತ್ರಿಸಿ ಗೆಲುವು ಕಂಡುಕೊಳ್ಳಬಹುದು.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ