ಕಂಫರ್ಟ್ ಝೋನ್ ಎಂಬುದು ಪ್ರತಿಯೊಬ್ಬ್ಬರನ್ನು ಆವರಿಸುತ್ತದೆ. ಕಂಫರ್ಟ್ ಝೋನ್ ಎಂಬುದು ಒಂದೊಂದು ಸಾರಿ ಎಷ್ಟರ ಮಟ್ಟಿಗೆ ನಮ್ಮನ್ನು ನಿಯಂತ್ರಿಸುತ್ತದೆ. ಎಂದರೆ ನಾವು ನಮ್ಮ ಜೀವನದಲ್ಲಿ ಸಾಧನೆ ಎಂಬುದು ಇದೆ ಎಂಬುದನ್ನು ಮರೆತು ಬಿಡುತ್ತೇವೆ.
ಇಂಗ್ಲಿಷಿನಲ್ಲಿ ಹೇಳುತ್ತಾರೆ "Comfort zone is like addicted,By this we are seeing that our dreams are slowly dying. "ಇದು ನಮಗೆ ಕಂಫರ್ಟ್ ಜೋನ್ನ ಪರಿಚಯವನ್ನು ಮಾಡಿ ಕೊಡುತ್ತದೆ.
ಒಂದು ಸಾರಿ ನಾವು ಕಂಫರ್ಟ್ ಝೋನ್ಗೆ ಆಂಟಿಕೊಂಡು ಬಿಟ್ಟರೆ ನಾವು ಆರಾಮದಾಯಕ ಜೀವನ ಶೈಲಿಗೆ ಒಗ್ಗಿಕೊಂಡು ಬಿಡುತ್ತೇವೆ. ಇದರಿಂದ ನಾವು ಒಂದೊಂದು ಸಾರಿ calculated risk ತೆಗೆದುಕೊಳ್ಳಲು ಹಿಂಜರಿಯುತ್ತೇವೆ.
ಒಂದು ಸಾರಿ ಕಂಫರ್ಟ್ ಝೋನ್ದ ಗೀಳು ಆಂಟಿಕೊಂಡು ಬಿಟ್ಟರೆ ನಾವು ಡೇಂಜರ್ ಝೋನ್ ಮತ್ತು ಎಲಿಮಿನೇಷನ್ ಝೋನ್ಗೆ ಕಾಲಿಡುವ ಸಂದರ್ಭವೂ ಇರುತ್ತದೆ. ಆದ್ದರಿಂದಲೇ ಸಾಧಕರು ಕಂಫರ್ಟ್ ಝೋನ್ ಕುಣಿಕೆಯಿಂದ ಪಾರಾಗಲು ಯತ್ನಿಸುತ್ತಾರೆ.
ಬೆಳಿಗ್ಗೆ ನಾಲ್ಕು ಗಂಟೆಗೆ ಜಿಮ್ಗೆ ಹೋಗಿ ಫಿಟ್ನ್ನೆಸ್ ಉಳಿಸಿಕೊಳ್ಳುವ ಸಿನಿಮಾ ತಾರೆಯರು, ಚುನಾವಣಾ ಕ್ಯಾಂಪೇನ್ಗೆ ವಯಸ್ಸು, ಶರೀರವನ್ನು ಲೆಕ್ಕಿಸದೆ ಓಡಾಡುವ ರಾಜಕಾರಣಿಗಳು, ಉರಿ ಬಿಸಿಲಿನಲ್ಲಿ ನೆಟ್ನಲ್ಲಿ ಅಭ್ಯಾಸ ಮಾಡುವ ಕ್ರೀಡಾಪಟುಗಳು, ಇವರೆಲ್ಲರೂ ಕಂಫರ್ಟ್ ಜೋನ್ ಬಿಟ್ಟು ಬಂದವರೇ. ಡೇಂಜರ್ ಝೋನ್ ಮತ್ತು ಎಲಿಮಿನೇಷನ್ ಜೋನ್ ತಪ್ಪಿಸಿಕೊಳ್ಳಲು ಕೇವಲ ಸಾಧನೆ ಮಾತ್ರ ಗಣಿಕೆಯಾಗುತ್ತದೆ ಎಂಬುದನ್ನು ಮರೆಯಬಾರದು.
ಕಂಫರ್ಟ್ ಝೋನ್ಗೆ ಅಡಿಕ್ಟ್ ಆಗುವುದರಿಂದ ಕೇವಲ ನಮ್ಮ ಸಾಧನೆಗಳು ಅಷ್ಟೇ ಸಾಯುವುದಿಲ್ಲ, ನಮ್ಮ ವ್ಯಕ್ತಿತ್ವವು ಕೂಡ ಕ್ಷೀಣಿಸುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ನಾವು easy going ಗೆ ಒಗ್ಗಿ ಬಿಟ್ಟರೆ ಜೀವನವೆಂಬುದು ನೀರಸವಾಗಿ ಬಿಡುತ್ತದೆ ಮತ್ತು ಜೀವನವೆಂಬ ಪುಸ್ತಕದಲ್ಲಿ ಸಾಹಸ ಮತ್ತು ಸಾಧನೆ ಎಂಬ ಅಧ್ಯಾಯಗಳು ಇರುವುದಿಲ್ಲ.
ಕೇವಲ ಊಟ, ಟೈಂಪಾಸ್, ಮತ್ತು ನಿದ್ರೆ ಗಳೇ ಜೀವನವಾದರೆ ನಾವು waste body ಆಗಿ ಬಿಟ್ಟಿರುತ್ತೇವೆ. ಈಗಲಾದರೂ ಈ ಕಡೆ ಗಮನ ಹರಿಸೋಣ.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ