ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ

Upayuktha
0


ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಾಮರ್ಸ್, ಇನ್‌ಸ್ಟಿಟ್ಯೂಟ್ ಆಫ್ ಪೋರ್ಟ್ ಶಿಪ್ಪಿಂಗ್ &ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್, ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್, ಮತ್ತು ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಟೂರಿಸಂ 2024 ರ ನವೆಂಬರ್ 1 ರಂದು ಪಾಂಡೇಶ್ವರದ ಸಿಟಿ ಕ್ಯಾಂಪಸ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. 


ಧ್ವಜಾರೋಹಣ ಸಮಾರಂಭದ ನೇತೃತ್ವವನ್ನು ಐಎಂಸಿ ಡೀನ್ ಡಾ. ವೆಂಕಟೇಶ್ ಅಮೀನ್, ಐಪಿಎಸ್ಎಲ್ಎಂ ಡೀನ್ ಡಾ. ಸೋನಿಯಾ ನೊರೊನ್ಹಾ, ಐಎಚ್ಎಂ ಡೀನ್ ಪ್ರೊ. ಪ್ರಶಾಂತ್ ಪ್ರಭು, ಮತ್ತು ಐಇ ಡೀನ್ ಡಾ. ಪದ್ಮನಾಭ ಸಿ. ಎಚ್. ವಹಿಸಿದ್ದರು. 


ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಆಂಡ್ ಇನ್ಫಾರ್ಮಶನ್ ಸೈನ್ಸ್, ಬಿಸಿಎ ವಿಭಾಗದಮುಖ್ಯಸ್ಥರಾದ ಡಾ.ಶ್ರೀಧರ ಆಚಾರ್ಯ ಅವರು ಕರ್ನಾಟಕ ಮತ್ತು ಕನ್ನಡ ಭಾಷೆಯ ಇತಿಹಾಸ ಮತ್ತು ಬೆಳವಣಿಗೆ ಹಾಗೂ ಕನ್ನಡ ಸಾಹಿತ್ಯ ಮತ್ತು ಕಾವ್ಯದ ಕೊಡುಗೆಗಳ ಬಗ್ಗೆ ಮಾತನಾಡಿದರು. ಶ್ರೀ ಮಹೇಶ್ ಅವರು ಹಾಡಿನ ಮೂಲಕ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಎತ್ತಿ ತೋರಿಸಿದರು. ಪ್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು.


ಡಾ.ಪದ್ಮನಾಭ ಸಿ.ಎಚ್ ಸ್ವಾಗತಿಸಿ, ಪ್ರೊ.ಸ್ವಾತಿ ವಂದಿಸಿದರು, ಪ್ರೊ.ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top