ಮಂಗಳೂರು: ಕೂಟ ಮಹಾಜಗತ್ತು ಲೆಕ್ಕಪತ್ರ ನಿರ್ವಹಣೆ ಕಾರ್ಯಾಗಾರ

Upayuktha
0


ಮಂಗಳೂರು: ಸಂಘಟನೆ ಸದೃಢವಾಗಬೇಕಾದರೆ ಲೆಕ್ಕ ಪತ್ರ ವ್ಯವಸ್ಥೆ, ಪಾರದರ್ಶಕತೆ ಅತೀ ಮುಖ್ಯವಾಗಿರಬೇಕು. ವ್ಯವಸ್ಥೆ ಬಲಿಷ್ಠವಾಗಬೇಕು ಸಂಘಟನೆಯನ್ನು ವ್ಯವಸ್ಥಿತವಾಗಿ ಮುಂದುವರೆಸಿ ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವುದು ಮುಖ್ಯ. ಸಂಘಟನೆಗಳ ಮಧ್ಯೆ ಪರಸ್ಪರ ಸಂವಹನ ಬೇಕು ಎಂದು ಗುರು ನರಸಿಂಹ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎಸ್ ಕಾರಂತ್ ಅಭಿಪ್ರಾಯಪಟ್ಟರು.


ಅವರು ಕೂಟ ಮಹಾ ಜಗತ್ತು ಕೇಂದ್ರ ಸಂಸ್ಥೆಯವರು ಮಂಗಳೂರು ಅಂಗಸಂಸ್ಥೆಯ ಆತಿಥ್ಯದಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಲೆಕ್ಕಪತ್ರ ನಿರ್ವಹಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಪ್ರಧಾನ ಕಾರ್ಯದರ್ಶಿ ಸುರೇಶ್ ತುಂಗಾರವರು ಪ್ರಾಸ್ತಾವಿಕವಾಗಿ ಮಾತಾಡುತ್ತಾ, ಕೂಟ ಮಹಾಜಗತ್ತು ಕೂಟ ಬಾಂಧವರ ಪ್ರಬಲ ಸಂಘಟನೆಯಾಗಿದ್ದು ಪ್ರಸ್ತುತ 37 ಅಂಗಸಂಸ್ಥೆಗಳನ್ನು ಹೊಂದಿದ್ದು, ಇದೀಗ ಎಲ್ಲಾ ಅಂಗಸಂಸ್ಥೆಗಳ ಲೆಕ್ಕಪತ್ರ ನಿರ್ವಹಣೆಯು ಏಕರೀತಿಯಲ್ಲಿ ಇರಬೇಕಾದ ಅನಿವಾರ್ಯತೆಯ ಸದುದ್ದೇಶದಿಂದ ಈ ವ್ಯವಸ್ಥೆಯನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರುವ ಸಲುವಾಗಿ ಪ್ರತಿಯೊಂದು ಅಂಗಸಂಸ್ಥೆಯ ಆರ್ಥಿಕ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವ ಪದಾಧಿಕಾರಿಗಳಿಗೆ ಈ ರೀತಿಯಲ್ಲಿ ತರಬೇತಿ ನೀಡುವ ಕಾರ್ಯಾಗಾರಗಳನ್ನು ವಲಯಮಟ್ಟದಲ್ಲಿ ಹಂತ ಹಂತವಾಗಿ ನಡೆಸಲಾಗುವುದು ಎಂದು ತಿಳಿಸಿದರು.


ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ  ಸಂಸ್ಥೆಯ ಉಪಾಧ್ಯಕ್ಷ ಸಿಎ ಚಂದ್ರಶೇಖರ ಐತಾಳರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಒಟ್ಟು ಲೆಕ್ಕಪತ್ರದ ಕೇಂದ್ರೀಕೃತ ವ್ಯವಸ್ಥೆಯ ಬಗ್ಗೆ ಸವಿವರವಾದ ಮಾಹಿತಿ- ಮಾರ್ಗದರ್ಶನ ನೀಡಿದರು.


ಮುಖ್ಯ ಅತಿಥಿಯಾಗಿ ವಿದ್ವಾನ್ ಶ್ರೀಧರ ಹೊಳ್ಳ, ನ್ಯಾಯವಾದಿ ಹಾಗೂ ಸಾಲಿಗ್ರಾಮ ದೇವಳದ ಟ್ರಸ್ಟಿ ಸದಾಶಿವ ಐತಾಳ್, ಶ್ರೀಧರ ರಾವ್ ಮೀಯಪದವು, ಕೋಶಾಧಿಕಾರಿ ಗೋಪಾಲಕೃಷ್ಣ ಮಯ್ಯ,ಜೊತೆ ಕಾರ್ಯದರ್ಶಿಗಳಾದ ಕುಮಾರ ಹೊಳ್ಳ ಹೆಚ್ ಕೆ, ಭಾರತಿ ಶ್ರೀಧರ್ ತುಂಬೆ, ಸಂಘಟನಾ ಕಾರ್ಯದರ್ಶಿ ಬಿ ಭಾಸ್ಕರ ಭಟ್ ಪೊಳಲಿ, ಪದ್ಮನಾಭ ಮಯ್ಯ, ಗಣೇಶ್, ಮಹಿಳಾ ಪದಾಧಿಕಾರಿಗಳಾದ ಲಲಿತಾ ಉಪಾಧ್ಯಾಯ, ಪ್ರಭಾ ರಾವ್ ಮೊದಲಾದವರು ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಅಡಿಗ ಧನ್ಯವಾದ ನೀಡಿದರು. ದ.ಕ  ವಲಯದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top