ಪಕ್ಷದ ಕಾರ್ಯಕರ್ತರ ಜತೆ ʼದಿ ಸಬರಮತಿ ರಿಪೋರ್ಟ್‌ʼ ಸಿನಿಮಾ ವೀಕ್ಷಿಸಿದ ಸಂಸದ ಕ್ಯಾ. ಚೌಟ

Upayuktha
0


ಮಂಗಳೂರು: ಗೋಧ್ರಾ ರೈಲು ದುರಂತವನ್ನು ಆಧರಿಸಿ ನಿರ್ಮಾಣಗೊಂಡಿರುವ ʼದಿ ಸಬರಮತಿ ರಿಪೋರ್ಟ್‌ʼ ಸಿನಿಮಾವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಬಿಜೆಪಿ ಕಾರ್ಯಕರ್ತರ ಜತೆಗೆ ಇಂದು ನಗರದ ಭಾರತ್ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿದರು.


ʼಸಬರಮತಿ ರಿಪೋರ್ಟ್‌ʼ ಸಿನಿಮಾ ವೀಕ್ಷಣೆ ಬಳಿಕ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಚೌಟ ಅವರು "ನಮ್ಮ ಶತಮಾನದ ಪ್ರಮುಖ ಘಟನೆಯ ಕುರಿತು ತಿಳಿಸುವ ಈ ಸಿನೆಮಾವನ್ನು ವೀಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂ‌ಡ ತಮ್ಮ ಎಕ್ಸ್ ಖಾತೆಯಲ್ಲಿ ಅನಿಸಿಕೆ ಹಂಚಿಕೊಂಡಿದ್ದರು. ಅದರಂತೆ ಸಿನೆಮಾವನ್ನು ನಮ್ಮ ಕಾರ್ಯಕರ್ತರೊಂದಿಗೆ ವೀಕ್ಷಿಸಲು ಬಯಸಿದ್ದೆ. ಅದರಂತೆ ನಮ್ಮ ಪಾರ್ಟಿಯ ಕಾರ್ಯಕರ್ತರ ಜತೆಗೆ ಕುಳಿತುಕೊಂಡು ʼಸಬರಮತಿ ರಿಪೋರ್ಟ್‌ʼ ಸಿನಿಮಾ ವೀಕ್ಷಿಸಿದ್ದು, ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ದೇಶದಲ್ಲಿ ನಡೆದಿದ್ದ ಈ ಮತೀಯ ಸಂಚಿನ ಹಿಂದಿನ ಸತ್ಯ ಸಿನಿಮಾ ರೂಪದಲ್ಲಿ ಹೊರಬಂದಿದೆ ಎಂದರು.


ಕೆಲ ವರ್ಷಗಳ ಹಿಂದೆ ನಡೆದು ಹೋದ ಅಮಾನವೀಯ ಘಟನೆಯ ಹಿಂದಿರುವ ಸತ್ಯ ವಿಚಾರಗಳಿಗೆ ಯಾವ ರೀತಿಯಲ್ಲಿ ರಾಜಕೀಯ ಬಣ್ಣ ಬಳಿಯಲಾಯಿತು ಎನ್ನುವುದನ್ನು 'ದಿ ಸಬರಮತಿ ರಿಪೋರ್ಟ್' ಸಿನಿಮಾದಲ್ಲಿ ಬಹಳ ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ ಎಂದು ಕ್ಯಾ. ಚೌಟ ಹೇಳಿದರು.


ನಕಲಿ ನಿರೂಪಣೆಗಳ ಮೂಲಕ ಸತ್ಯವನ್ನು ಏಕೆ ಮತ್ತು ಹೇಗೆ ಮರೆಮಾಚಲಾಯಿತು ಎಂಬ ಹಲವು ವಿಚಾರಗಳನ್ನು ಈ ಸಿನೆಮಾದಲ್ಲಿ ಅರ್ಥವತ್ತಾಗಿ ವಿವರಿಸಲಾಗಿದೆ. ಒಟ್ಟಾರೆ ದಿ ಸಬರಮತಿ ರಿಪೋರ್ಟ್‌ ಚಿತ್ರವು ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಎಂದು ಸಂಸದರು ಇದೇವೇಳೆ ಅಭಿಪ್ರಾಯಪಟ್ಟರು.


ಕ್ಯಾ. ಚೌಟ ಅವರೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮನಪಾ ಸದಸ್ಯರು, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಗೂ ಯುವ ಸಮುದಾಯ ಚಿತ್ರವನ್ನು ವೀಕ್ಷಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top