ಮಂಗಳೂರು-ಪುಣೆ ನೇರ ವಿಮಾನ ಪುನರ್ ಆರಂಭಿಸುವಂತೆ ಶಾಸಕ ಕಾಮತ್ ಮನವಿ

Upayuktha
0




ಮಂಗಳೂರು: ಮಹಾರಾಷ್ಟ್ರ ಚುನಾವಣಾ ನಿಮಿತ್ತ ಸದ್ಯ ಪುಣೆಯಲ್ಲಿರುವ ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ.ವೇದವ್ಯಾಸ ಕಾಮತ್ ರವರು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ರವರನ್ನು ಭೇಟಿಯಾಗಿ ಸ್ಥಗಿತಗೊಂಡಿರುವ ಮಂಗಳೂರು-ಪುಣೆ ನೇರ ವಿಮಾನಯಾನ ಪುನರ್ ಆರಂಭಿಸುವಂತೆ ಮನವಿ ಮಾಡಿದರು.


ಮಂಗಳೂರು-ಪುಣೆ ನಡುವೆ ಅನೇಕ ರೀತಿಯಲ್ಲಿ ನೇರ ಸಂಬಂಧಗಳಿದ್ದು ದಿನ ನಿತ್ಯ, ಸಾರ್ವಜನಿಕರು, ಉದ್ಯಮಿಗಳು, ಉದ್ಯೋಗಿಗಳು ಸೇರಿದಂತೆ ಅನೇಕಾರು ಜನರ ಓಡಾಟವಿದೆ. ಹಾಗಾಗಿ ಈ ಹಿಂದಿದ್ದ ನೇರ ವಿಮಾನ ಸೇವೆಯಿಂದ ಅನೇಕ ಪ್ರಯಾಣಿಕರಿಗೆ ಸಹಾಯವಾಗುತ್ತಿದ್ದು ಪ್ರಸ್ತುತ ಈ ಸೇವೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲತೆ ಉಂಟಾಗಿದೆ. ಈ ಬಗ್ಗೆ ಈ ಹಿಂದೆ ಪುಣೆ ಹಾಗೂ ಮಂಗಳೂರಿನ ಉದ್ಯಮಿಗಳು ಮನವಿ ಸಲ್ಲಿಸಿದ್ದು ಅದರಂತೆ ವಿಶೇಷ ಆದ್ಯತೆಯ ಮೇರೆಗೆ ಮನವಿಯನ್ನು ಪರಿಗಣಿಸಿ ವಿಮಾನಯಾನವನ್ನು ಪುನರ್ ಆರಂಭಿಸುವಂತೆ ಶಾಸಕರು ಮನವಿ ಮಾಡಲಾಗಿ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಹೋಟೆಲ್ ಉದ್ಯಮಿಗಳ ಸಂಘದ ಸಂತೋಷ್ ಶೆಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top