ಕುಡುಬಿ ರತ್ನ ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಡಾ. ಭರತ್ ಶೆಟ್ಟಿ

Upayuktha
1 minute read
0


ಮಂಗಳೂರು: ಯುವ ಕುಡುಬಿ ಸೇವಾ ಟ್ರಸ್ಟ್ (ರಿ) ಇವರ ಆಶ್ರಯದಲ್ಲಿ ಕುಡುಬಿ ಬಾಂಧವರ ದ್ವಿತೀಯ ವರ್ಷದ ಯುವ ಕುಡುಬಿ ಸೇವಾ ಟ್ರಸ್ಟ್ ಟ್ರೋಫಿ-2024 ಕ್ರಿಕೆಟ್ ಪಂದ್ಯಕೂಟದ ಸಂದರ್ಭ ನಡೆದ ಕುಡುಬಿ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರದ ಶಾಸಕ ಡಾ. ಭರತ್ ಶೆಟ್ಟಿ ಭಾಗವಹಿಸಿದರು.


ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜನಾರ್ದನ ಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಕುಡುಬಿ ಸಮಾಜ ಬಾಂಧವರ ಅಭಿವೃದ್ಧಿಗೆ ಹಾಗೂ ಹಿಂದೂ ಸಮಾಜದ ಏಳಿಗೆಗೆ ಶ್ರಮವಹಿಸಿದ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದ ಹೋರಾಟಗಾರ ನರ್ಸು ಗೌಡ ಅವರಿಗೆ ಯುವ ಕುಡುಬಿ ಸೇವಾ ಟ್ರಸ್ಟ್ ವತಿಯಿಂದ ಕುಡುಬಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.


ತಮ್ಮ ಹಿರಿಯ ವಯಸ್ಸಿನಲ್ಲಿಯೂ ನರ್ಸು ಗೌಡ ಅವರಿಗಿರುವ ಸಮಾಜದ ಮೇಲಿನ ಕಾಳಜಿ ಯುವಪೀಳಿಗೆಗೆ ಮಾದರಿಯಾಗಲಿ ಹಾಗೂ ಯುವ ಕುಡುಬಿ ಸೇವಾ ಟ್ರಸ್ಟ್ ನ ಸಶಕ್ತ ಮನಸ್ಸುಗಳಿಂದ ಅಶಕ್ತರಿಗೊಂದು ಆಸರೆ ಎಂಬ ಧ್ಯೇಯದಡಿಯಲ್ಲಿ ಮುಂದೆಯೂ ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಶಾಸಕರು ಆಶಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top