ಗೋವಿಂದದಾಸ ಕಾಲೇಜಿನಲ್ಲಿ ಕವಿತೆಗಳ ಪ್ರತಿಧ್ವನಿ ಕಾರ್ಯಕ್ರಮ

Upayuktha
0



ಸುರತ್ಕಲ್‌: ಸಾಹಿತ್ಯವು ಭಾಷೆಗಳ ಎಲ್ಲೆಯನ್ನು ಮೀರಿದ ಶ್ರೀಮಂತ ಪರಂಪರೆಯನ್ನು ಹೊಂದಿದ್ದು ಮನಸ್ಸಿನ ಭಾವನೆಗಳು ಹೊರಹೊಮ್ಮಲು ಕವಿತೆಗಳು ವೇದಿಕೆಯಾಗುತ್ತದೆ. ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸಾಹಿತ್ಯಾಭಿರುಚಿಯನ್ನು ಉತ್ತೇಜಿಸಲು ಕವಿತೆಗಳ ಪ್ರತಿಧ್ವನಿ ಕಾರ್ಯಕ್ರಮವು ಪ್ರೇರಣೆ ನೀಡುತ್ತದೆ ಎಂದು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದದಾಸಕಾಲೇಜು, ಸುರತ್ಕಲ್‌ನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ನುಡಿದರು.


ಅವರು ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಸಾಹಿತ್ಯ ಸಂಘ, ಭಾಷಾ ವಿಭಾಗಗಳು ಮತ್ತು ಕಲಾಬ್ಧಿಗಳ ಸಹಯೋಗದಲ್ಲಿ ನಡೆದ ಕವಿತೆಗಳ ಪ್ರತಿಧ್ವನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಉಪ ಪ್ರಾಂಶುಪಾಲ ಪ್ರೊ.ನೀಲಪ್ಪ ವಿ.,ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ., ಐಶೆ ಸಂಯೋಜಕ ಪ್ರೊ.ವಾಮನ ಕಾಮತ್, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಡಾ.ಸೌಮ್ಯ ಪ್ರವೀಣ್ ಕೆ., ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥೆಗೀತಾ ಕೆ., ವಾಣಿಜ್ಯ ವಿಭಾಗದ ಡೀನ್ ಮತ್ತು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ.ಗಣೇಶ ಆಚಾರ್ಯ ಬಿ., ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್‌ ಜೆ.ಎಸ್., ಸಾಹಿತ್ಯ ಸಂಘದ ಸಂಯೋಜಕ ಕುಮಾರ್ ಮಾದರ್, ಹಿಂದಿ ವಿಭಾಗದ ಮುಖ್ಯಸ್ಥೆ ಜ್ಯೋತಿ ಕಾಮತ್, ಸಂಸ್ಕೃತ ವಿಭಾಗದ ಮುಖ್ಯಸ್ಥ ನಟರಾಜಜೋಷಿ, ಉಪನ್ಯಾಸಕರಾದ ಧನ್ಯಕುಮಾರ್ ವೆಂಕಣ್ಣವರ್, ಶರ್ಮಿತಾಯು., ರಮಿತಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್‌ಎಂ.ಡಿ.,ಕ್ಯಾ. ಡಾ. ಸುಧಾಯು ಕಲಾಬ್ಧಿ ಸಂಯೋಜಕ ವಿನೋದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು,


ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಂತೋಷ್ ಆಳ್ವ ಸ್ವಾಗತಿಸಿದರು. ಅಕ್ಷತಾ ವಿ. ಕಾರ್ಯಕ್ರಮ ನಿರೂಪಿಸಿದರು. ಕಿಟ್ಟು ಕೆ. ವಂದಿಸಿದರು.

ವಿದ್ಯಾರ್ಥಿಗಳು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ರಚಿಸಿದ ಸ್ವರಚಿತ ಕವನಗಳನ್ನು ವಾಚಿಸಿದರು. ಪಿ. ಲಂಕೇಶ್‌ ಅವರ ಅವ್ವ ಕವನವನ್ನು ವಿದ್ಯಾರ್ಥಿಗಳು ರಂಗ ರೂಪಕವಾಗಿ ಪ್ರಸ್ತುತ ಪಡಿಸಿದರು. ಸಿದ್ದಲಿಂಗಯ್ಯರ ಏಕಲವ್ಯ ನಾಟಕದ ಆಯ್ದ ಭಾಗವನ್ನು ವಾಚಿಸಲಾಯಿತು. ಕನ್ನಡ ಪಠ್ಯದಲ್ಲಿ ಬರುವ ಕವನಗಳನ್ನು ಹಾಗೂ ಕೀರ್ತನೆಗಳನ್ನು ವಿದ್ಯಾರ್ಥಿಗಳು ಹಾಡಿದರು. ಪಂಪ ಭಾರತದ ಆಯ್ದ ಪಠ್ಯಭಾಗವನ್ನು ವಿದ್ಯಾರ್ಥಿಗಳು ಗಮಕ ರೂಪದಲ್ಲಿ ಪ್ರಸ್ತುತ ಪಡಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top