ಮೈಸೂರು: ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ಮಹೋತ್ಸವ ಸಮಾರಂಭ

Upayuktha
0


ಮೈಸೂರು: ಮಾತೃಭಾಷೆಯ ಮಹತ್ವವನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಾಡು ನುಡಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಜೆಎಸ್ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ‌ ಮಂಜುನಾಥ್ ಹೇಳಿದರು.


ಅವರು ಜೆಪಿ ನಗರದ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಹಮ್ಮಿಕೊಂಡಿದ್ದ "69ನೇ ಕನ್ನಡ ಮಹೋತ್ಸವ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ್ದ ಕನ್ನಡ ನಾಡು ಕಾಲಕ್ರಮೇಣ ವಿವಿಧ ಭಾಷಾ ಪ್ರಭಾವಗಳಿಗೆ ಒಳಗಾಗಿ ಹಂಚಿಹೋಗಿತ್ತು. ಅನೇಕ ಹೋರಾಟಗಾರರ, ಸಾಹಿತಿಗಳ ಮತ್ತು ಕನ್ನಡ ಕಟ್ಟಾಳುಗಳ ಅವಿರತ ಪ್ರಯತ್ನದ ಫಲವಾಗಿ ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡಿತು ಎಂದರು.

ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ, ಪರಂಪರೆ, ಇತಿಹಾಸ ಮತ್ತು ರಾಜಮನೆತನಗಳ ಕೊಡುಗೆಯನ್ನು ಅರಿತು ಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.


ಹಿರಿಯ ಪತ್ರಕರ್ತ ರಘುರಾಮ ಮಾತನಾಡಿ, ಕನ್ನಡ ಎಂಬುದು ಕೇವಲ ಲಿಪಿ, ಭಾಷೆ ಮಾತ್ರ ವಾಗದೆ ನಮ್ಮ ಸಮಗ್ರ ಬದುಕಿನ ವಿಕಸನದ ಸಾಂಸ್ಕೃತಿಕ ಬುನಾದಿಯಾಗಿದೆ ಎಂದರು.


ಶಿಕ್ಷಣ ಪಡೆಯುವ ಉದ್ದೇಶದಿಂದ ಭಾಷೆ ಯಾವುದಾದರೂ ನಮ್ಮ ನೆಲದ ನುಡಿಯಾದ ಕನ್ನಡದ ಬಗ್ಗೆ ಅಪಾರವಾದ ಕಾಳಜಿ ಮತ್ತು ಕಳಕಳಿಯನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದರು. ಪ್ರತಿನಿತ್ಯ ಒಂದು ಕನ್ನಡ ಪತ್ರಿಕೆಯನ್ನಾದರೂ ಮಕ್ಕಳು ಓದುವ ಮೂಲಕ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳು ಚುಟುಕು ಕತೆ ಕವನ ಬರೆಯುವ ಹವ್ಯಾಸಕ್ಕೆ ಶಿಕ್ಷಕರು ಬೆಂಬಲ ಕೊಡಬೇಕು. ಗೋಡೆ ಪತ್ರಿಕೆ ಕವಿಗೋಷ್ಠಿ, ಪ್ರಬಂಧ ಸ್ಪರ್ಧೆ ಇತ್ಯಾದಿಗಳನ್ನು ಆಯೋಜಿಸುವ ಮೂಲಕ ಕನ್ನಡ ಸಂಭ್ರಮಾಚರಣೆಗೆ ವೇದಿಕೆ ಕಲ್ಪಿಸಿಕೊಡಬೇಕು ಎಂದು ಸಲಹೆ ನೀಡಿದರು.


ನಾಡಿನ ಹೆಮ್ಮೆಯ ಕವಿಗಳಾದ ದ.ರಾ. ಬೇಂದ್ರೆ, ಕುವೆಂಪು ಇತರರು ಸಾಹಿತ್ಯ ರಚಿಸಿದ ಸಂದರ್ಭವನ್ನು ಉಲ್ಲೇಖಿಸಿದ ಅವರು, ಕನ್ನಡ ಸಂಸ್ಕೃತಿಯನ್ನು ಮಕ್ಕಳಲ್ಲಿ ಬಿತ್ತುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲಿದೆ ಎಂದು ಹೇಳಿದರು.


ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸ್ಮಿತಾ ಉಪ ಪ್ರಾಂಶುಪಾಲೆ ಸುನೀತಾ, ವಿದ್ಯಾರ್ಥಿ ನಾಯಕರಾದ ಹೃತಿಕ್ ತೇಜಸ್ ಸಾನ್ವಿ, ಶ್ರೇಯ ಮತ್ತು ಲೇಖನ ಹಾಜರಿದ್ದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top