ಕುಂಬಳೆ: ಸಾಹಿತಿ, ಕವಿ, ವಿ.ಬಿ ಕುಳಮರ್ವ ಅವರ ಮುಕ್ತಕ ಸಂಕಲನಗಳ ಪ್ರಥಮ ಆವೃತ್ತಿ - 'ಕಂದನ ಮುತ್ತು' ಗ್ರಂಥದ ಲೋಕಾರ್ಪಣೆ ನ.17ರಂದು ಕುಂಬ್ಳೆ ಸಮೀಪದ ನಾರಾಯಣಮಂಗಲದಲ್ಲಿರುವ 'ಕುಳಮರ್ವ ಶ್ರೀನಿಧಿ' ಮನೆಯಲ್ಲಿ ಸಾಹಿತ್ಯ ಸಾಧಕರ ಸಮ್ಮುಖದಲ್ಲಿ ನಡೆಯಲಿದೆ.
ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಈ ಸಮಾರಂಭ ಜರಗಲಿದೆ. ಈ ಸಂದರ್ಭದಲ್ಲಿ ಹಿರಿಯ ಗಮಕಿಗಳಿಮದ ಆಯ್ದ ಮುಕ್ತಕಗಳ ವಾಚನ- ವ್ಯಾಖ್ಯಾನ ಮತ್ತು ಹೆಸರಾಂತ ಕವಿಗಳಿಂದ ಕವಿಗೋಷ್ಠಿಯನ್ನೂ ಹಮ್ಮಿಕೊಳ್ಳಲಾಗಿದೆ.
ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ. (ಅಧ್ಯಕ್ಷರು, ಕಸಾಪ ಕೇರಳ ಗಡಿನಾಡ ಘಟಕ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮತಿ ಲಲಿತಾಲಕ್ಷ್ಮೀ ಕುಳಮರ್ವ (ವಿಶ್ರಾಂತ ಜಿಲ್ಲಾ ವಿದ್ಯಾಧಿಕಾರಿಗಳು) ದೀಪ ಪ್ರಜ್ವಲನ ಮಾಡಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಹರಿಕೃಷ್ಣ ಭರಣ್ಯ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.
ಎಣ್ಮಕಜೆ ಗ್ರಾಮಪಂಚಾಯತು ಸದಸ್ಯರಾದ ಶ್ರೀಮತಿ ಆಯಿಶಾ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಬಂಧುಮಿತ್ರರು ಶುಭಾಶಂಸನೆ ನೆರವೇರಿಸಲಿದ್ದಾರೆ.
ಬಳಿಕ ಕಂದನ ಮುತ್ತು ಕೃತಿಯಿಂದಾಯ್ದ ಭಾಗದ ಗಮಕ ಕಾರ್ಯಕ್ರಮ ನಡೆಯಲಿದೆ. ವಾಚನ: ಗಮಕಿ ವಿಶ್ವೇಶ್ವರ ಭಟ್ ಉಂಡೆಮನೆ (ವಿಶ್ರಾಂತ ಪ್ರಾಂಶುಪಾಲರು). ವ್ಯಾಖ್ಯಾನ: ಗಮಕಿ ಪ್ರೊ| ಗಣಪತಿ ಭಟ್ ಕುಳಮರ್ವ (ವಿಶ್ರಾಂತ ಪ್ರಾಂಶುಪಾಲರು).
ವಿರಾಜ್ ಅಡೂರು (ಹಿರಿಯ ಕವಿಗಳು ಮತ್ತು ಪತ್ರಕರ್ತರು) ಕವಿಗೋಷ್ಠಿಯ ಅಧ್ಯಕ್ಷತೆವಹಿಸಲಿದ್ದಾರೆ. ಊರ ಪರವೂರ ಹಿರಿಯ ಕವಿಶ್ರೇಷ್ಠರು ಭಾಗವಹಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ