ಕೆಪಿಟಿ ಮಂಗಳೂರು: ಎನ್‌ಸಿಸಿ ಕೆಡೆಟ್‌ಗಳಿಗೆ ಪದೋನ್ನತಿ, ಶ್ರೇಣಿ ಪ್ರದಾನ

Upayuktha
0


ಮಂಗಳೂರು: ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಎನ್‌ಸಿಸಿ ಘಟಕದ ಕೆಡೆಟ್‌ಗಳಿಗೆ ಪದೋನ್ನತಿ- ಶ್ರೇಣಿ ಪ್ರದಾನ ಸಮಾರಂಭವು ಪ್ರಾಂಶುಪಾಲ ಹರೀಶ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನ.6ರಂದು ಜರುಗಿತು. ಕಾಲೇಜಿನ ಎನ್‌ಸಿಸಿ ಘಟಕದಲ್ಲಿ ಒಟ್ಟು 52 ಕೆಡೆಟ್‌ಗಳು ದಾಖಲುಗೊಂಡಿದ್ದು 18 ಕರ್ನಾಟಕ ಬೆಟಾಲಿಯನ್ ಮಂಗಳೂರು ಗ್ರೂಪ್ ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. 


ಎನ್‌ಸಿಸಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ, ಜೂನಿಯರ್ ಅಂಡರ್ ಆಫೀಸರ್ ಆಶಿಶ್ ಆರ್ ನಾಯಕ್ ಇವರಿಗೆ ಸೀನಿಯರ್ ಅಂಡರ್ ಆಫೀಸರ್ ಆಗಿ, ಸರ್ಜೆಂಟ್ ಸುಶಾನ್ ಇವರಿಗೆ ಜೂನಿಯರ್ ಅಂಡರ್ ಆಫೀಸರ್ ಆಗಿ, ಲ್ಯಾನ್ಸ್ ಕಾರ್ಪೋರಲ್ ಗೌರವ ದೇವಾಡಿಗ ಇವರಿಗೆ ಕಂಪನಿ ಕ್ವಾರ್ಟರ್ ಮಾಸ್ಟರ್ ಸರ್ಜೆಂಟ್ ಆಗಿ, ಕೆಡೆಟ್ ನಂದಿನಿ ಮತ್ತು ಕೆಡೆಟ್ ಪ್ರತೀಕ್ಷ ಇವರಿಗೆ ಸರ್ಜೆಂಟ್ ಆಗಿ, ಕೆಡೆಟ್ ಅಭಿಷೇಕ್ ಎನ್ ಕೆ ಇವರಿಗೆ ಕಾರ್ಪೊರಲ್ ಆಗಿ, ಕೆಡೆಟ್ ಅನ್ವಿತಾ, ಕೆಡೆಟ್ ಕವನ, ಕೆಡೆಟ್ ಮಹೇಶ್ ಪಿ, ಕೆಡೆಟ್ ಪ್ರಾಚಿ ಸುವರ್ಣ, ಕೆಡೆಟ್ ಪ್ರೀತಂ ಪಿ ಅಂಚನ್ ಇವರಿಗೆ ಲ್ಯಾನ್ಸ್ ಕಾರ್ಪೋರಲ್ ಶ್ರೇಣಿಗೆ ಪದೋನ್ನತಿ ನೀಡಲಾಯಿತು.


ಸಂಸ್ಥೆಯ ಎನ್‌ಸಿಸಿ ಘಟಕದಲ್ಲಿ ಎರಡು ವರ್ಷಗಳ ಕಾಲ ಬೋಧಕರಾಗಿ ಕಾರ್ಯನಿರ್ವಹಿಸಿದ ನಿವೃತ್ತ ಸೇನಾ ಯೋಧ ಎನ್. ಬಿ ಪಾಟೀಲ್ ಇವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top