ಹುನಗುಂದ: 30 ರಂದು ಸಂಗಮ ಸಾಹಿತ್ಯ ಸಂಭ್ರಮ, ವಿಶೇಷ ಉಪನ್ಯಾಸ, ಪ್ರಶಸ್ತಿ ಪ್ರದಾನ

Upayuktha
0



ಹುನಗುಂದ: ನಗರದ ಸಂಗಮ ಪ್ರತಿಷ್ಠಾನದ ಸಂಗಮ ಸಾಹಿತ್ಯ ಸಂಭ್ರಮ ವಾರ್ಷಿಕ ಕಾರ್ಯಕ್ರಮ ಇದೇ 30 ರಂದು ಶನಿವಾರ ಮಧ್ಯಾಹ್ನ 12ಕ್ಕೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವುದು.


ಹಿರಿಯ ವಕೀಲ ಕೆ.ಎಂ. ಸಾರಂಗಮಠ ಅಧ್ಯಕ್ಷತೆ ವಹಿಸುವರು. ಬಾಗಲಕೋಟೆ ಕವಿ ಹಾಗೂ ವಿಮರ್ಶಕ ಡಾ.ಮೈನುದ್ದೀನ ರೇವಡಿಗಾರ 'ಹಳಗನ್ನಡ ಓದು-ಒಲವು' ವಿಷಯ ಕುರಿತು ಉಪನ್ಯಾಸ ನೀಡುವರು. ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ತಹಶೀಲ್ದಾರ್ ನಿಂಗಪ್ಪ ಬಿರಾದಾರ, ಸಿಡಿಸಿ ಉಪಾಧ್ಯಕ್ಷ ಮಹಾಂತೇಶ ಪರೂತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ಕಸಾಪ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಮುಖ್ಯ ಅತಿಥಿಗಳಾಗಿರುವರು.


ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ಎಂ.ಆರ್. ಇದ್ದಲಗಿ ಮತ್ತು ಶಿವರುದ್ರಪ್ಪ ಮೆಣಸಿನಕಾಯಿ ಅವರಿಗೆ ಸಂಗಮ ಪ್ರಶಸ್ತಿ ಹಾಗೂ ಯುವ ಲೇಖಕ ಪ್ರಶಸ್ತಿ ಕೊಟ್ಟು ಗೌರವಿಸಲಾಗುವುದು ಎಂದು ಸಂಗಮ ಪ್ರತಿಷ್ಠಾನ ಹಾಗೂ ಸಾಹಿತ್ಯ ಸಮಾವೇಶ ಸಂಚಾಲಕ ಎಸ್ಕೆ ಕೊನೆಸಾಗರ ಮತ್ತು ಕನ್ನಡ ಲೇಖಕರ ಪರಿಷತ್ ಅಧ್ಯಕ್ಷ ಡಾ.  ಮುರ್ತುಜಾ ಒಂಟಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top