ನಾಲ್ಕು ದಶಕಗಳ ಹಿಂದೆ ಮೈಸೂರಿನ ಲ್ಯಾನ್ಸ್‌ಡೌನ್ ಕಟ್ಟಡದ ಎದುರಿನ ಉದ್ದನೆಯ ಉದ್ಯಾನದಲ್ಲಿ ಪ್ರತಿಮೆಯೊಂದರ ಅನಾವರಣವತ್ತು. ನಾನು ಶ್ರೀಧರ್, ಜೋಸೆಫಿನ್, ಬ್ರದರ್ ಎಲ್ಲರೂ ಹೊತ್ತಿಗೆ ಮುಂಚೆಯೇ ಹಾಜರಿದ್ದೆವು. ಜರ್ನಲಿಸಂ ಪೊಫೆಸರ್ ನಾಡಿಗರು ಕೋಟು ಧರಿಸಿ ತಮ್ಮ ಸ್ಕೂಟರ್‌ನಲ್ಲಿ ಬಂದಿದ್ದರು. ಸನಿಹದಲ್ಲಿ ಪ್ರೊ. ಖಾದ್ರಿ ಮತ್ತು ಸಾಧ್ವಿ ಸಂಪಾದಕ ಹಿರಿಯ ಪತ್ರಕರ್ತ ಆಗರಂ ರಂಗಯ್ಯನವರ ಮುಂದಾಳತ್ವದಲ್ಲಿ ನಗರ ಪತ್ರಕರ್ತರೆಲ್ಲರೂ ಹಾಜರಿದ್ದರು. ಕಾರಣ ಆ ಹೊತ್ತು ಅಲ್ಲಿ ಮೈಸೂರು ಸಂಸ್ಥಾನದ ಪತ್ರಿಕೋದ್ಯಮದ ತಾತಯ್ಯ ಆವರ ಸ್ಟಾಚ್ಯೂ ಅನಾವರಣ.
ನನಗೆ ಆವರ ಬಗ್ಗೇನೂ ಗೊತ್ತಿರಲಿಲ್ಲ. ಇವತ್ತೂ ಮಹಾ ಗೊತ್ತೆಂದು ಹೇಳುವ ಧೈರ್ಯವಿಲ್ಲ. ಅವರ ಕನ್ನಡ ಪತ್ರಿಕೋದ್ಯಮದ ಕೊಡುಗೆ ಬಗ್ಗೆ ಖಾದ್ರಿಯವರು ಹೇಳಿದ್ದಷ್ಟೆ ಗೊತ್ತಿತ್ತು. ನನಗೇನೋ “ನಾನೂ ಇವರಂತೆ ಕನ್ನಡ ಜರ್ನಲಿಸ್ಟ್ ಆಗಬೇಕು, ಜೊತೆಗೆ ಜಗತ್ತೆಲ್ಲಾ ಸುತ್ತಬೇಕು” ಎಂಬ ತುಡಿತವಂತೂ ಬಂದಿತ್ತು.
1956 ರಲ್ಲಿ ಮುಂಬಯಿ-ಹೈದರಾದಾದ್, ಮದರಾಸಿನ ಕನ್ನಡ ಪ್ರದೇಶಗಳೆಲ್ಲ ಮೈಸೂರಿನೊಡಗೂಡಿ ರಾಜ್ಯ ವಿಶಾಲವಾಯಿತು. 1974 ರಲ್ಲಿ ಆರಸರ ಆಳ್ವಿಕೆಯಲ್ಲಿ ಕರ್ನಾಟಕವಾಗಿ ಹೆಸರಾಯಿತು. ಕನ್ನಡ ಪತ್ರಿಕೋದ್ಯಮವಿಂದು ವಿಸ್ತಾರಗೊಂಡಿದೆ. ಆಕಾಶವಾಣಿಗೆ ದೂರದರ್ಶನವೂ ಸೇರಿ ಬೆಳೆದಿದೆ. ಈಗ ಜಾಗತೀಕರಣವನ್ನು ಸ್ವಾಗತಿಸಿ ಜಗದಗಲದ ಮಾಧ್ಯಮಗಳೆಲ್ಲಾ ಕಣ್ಣಮುಂದೆ ಮಿಂಚತೊಡಗಿವೆ. ಆಂದಿದ್ದುದು ಹೊಸ ಪ್ರಜಾಪಭುತ್ತದ ಕನಸಿನ ಬೆಂಬಲದ ಪತ್ರಿಕೋದ್ಯಮ, ಇಂದು ನಿರೂಪಿಸಿ ಕೊಂಡಿರುವುದು. ಫ್ರೀ ಇಕಾನಮಿಯ ಪ್ರಭಾವದೊಡಗೂಡಿ ಬಾಹ್ಕಾಕಾಶದಿಂದಲೇ ಅಪ್ಪಳಿಸುತ್ತಿರುವ. ಭರ್ಜರಿ ಹಣದಾಟದ ಮೀಡಿಯಾವೆಂದರೂ ತಪ್ಪಿಲ್ಲ. ಸಣ್ಣ ಪತ್ರಿಕೆಗಳು, ಸ್ಥಳೀಯ ಉಪಕ್ರಮದ ಟಿ.ವಿ.ಗಳ ಪ್ರಸಾರ ನಲುಗುವಂತಾಗಿದೆ.
ಆದರೆ, ಸ್ವಾತಂತ್ರ್ಯ ಚಳವಳಿಗೆ, ಸ್ವತಂತ್ರ ಪತ್ರಿಕೋದ್ಯಮದ ಬೆಳವಣಿಗೆಗೆ ಹೋರಾಡುತ್ತಲೇ ಬಂದುದು ಕನ್ನಡ ಪತ್ರಿಕೋದ್ಯಮದ ಹಿನ್ನೆಲೆಗಿದೆ. ಮೈಸೂರಿನಲ್ಲಿ ಜನಪರ ಕಳಕಳಿಯೊಂದಿಗೆ ಅದಕ್ಕೆ ಭದ್ರ ನೆಲೆಗಟ್ಟನ್ನು ಹಾಕಿದವರೇ ಕನ್ನಡ ಪತ್ರಿಕೋದ್ಯಮದ ವೃದ್ಧ ಪಿತಾಮಹ ಎಂ. ವೆಂಕಟ ಕೃಷ್ಣಯ್ಯನವರು. ಇತರೆಲ್ಲಾ ತಮ್ಮ ಸಾರ್ವಜನಿಕ ಚಟುವಟಿಕೆಗಳೊಂದಿಗೆ ಪತ್ರಿಕೆಗಳನ್ನೂ ಸದುದ್ದೇಶಕ್ಕೆ ಬಳಸಿಕೊಂಡ ಸಮಾಜಮುಖಿ ಪತ್ರಕರ್ತ ಅವರಾಗಿದ್ದರು. ಸ್ವಯಮಾಡಳಿತ ಕಲ್ಪನೆಯನ್ನು ಪೋಷಿಸಿ, ಬೆಳೆಸುವಂತಹ ಪತ್ರಿಕೋದ್ಯಮ ಅವರದಾಗಿತ್ತು. ತಮ್ಮ ಚಟುವಟಿಕೆಗಳೆಲ್ಲದರಲ್ಲೂ ಅಳವಡಿತಗೊಂಡಿದ್ದ ಕಳಕಳಿಯ ಪತ್ರಿಕೋದ್ಯಮ ಅವರ ನಂಬಿಕೆಯಾಗಿತ್ತು. ಕನ್ನಡದೊಂದಿಗೆ ಬ್ರಿಟಿಷರ ಇಂಗ್ಲೀಷ್ ಭಾಷೆಯನ್ನು ಬಳಸಿ ಆವರಿಗೆ ತಿರುಮಂತ್ರ ಹಾಕುವ ಜಾಣತನವೂ ಅವರಿಗಿತ್ತು. ಸಮರ್ಥ ಆಡಳಿತದಿಂದ ಮಹಿಳೆಯರಿಗೆ ಉತ್ತೇಜನ ಹಾಗೂ ದಲಿತರ ಸಪುಷ್ಟೀಕರಣದ ವರೆಗಿನ ತಮ್ಮ ಸಾರ್ವಜನಿಕ ಕಾರ್ಯೋದ್ದೇಶಗಳಿಗೆಲ್ಲಾ ಲೇಖನಿಯನ್ನು ಅಳುಕಿಲ್ಲದೆ ಬಳಸುವ ಧೈರ್ಯ, ಸಾಮರ್ಥ್ಯ ಅವರಲ್ಲಿತ್ತು.
ನೇರನುಡಿಯ ಸರಳಭಾಷೆ- ಮೊನಚು ಬರವಣಿಗೆ ಅವರಿಗೆ ಕರಗತವಾಗಿತ್ತು. ಅವರದೊಂದು ವರ್ಣನೆ ಹೀಗಿದೆ "ಇಂಟೆಲೆಕ್ಟ್, ವೆರಿ ಎಫೀಶಿಯೆಂಟ್, ಸೀಸನ್ಸ್ ಸ್ಕಾಲರ್ ಎಬೌವ್ ಆಲ್ ಆನೆಸ್ಟ್ ಮ್ಯಾನ್ ಹೂ ಮೆಂಟೈನ್ಡ್ ಡಿಸಿಪ್ಲಿನ್ ಆಂಡ್ ಪ್ರಾಕ್ಟೀಸ್ಟ್ ಟ್ರುತ್ ಇನ್ ಮ್ಯಾಟರ್ಸ್ ಆಫ್ ಪಬ್ಲಿಕ್”. ಅಂದರೆ, ಪತ್ರಿಕೋದ್ಯಮಕ್ಕೆ ಅವರದು ಕಿರೀಟ ವ್ಯಕ್ತಿತ್ವ ಎಂದೇ ಗುರುತಿಸಿದೆ. ಆಗಿನ ದಿವಾನರಾಗಿದ್ದ ರಂಗಾಚಾರ್ಯಲು ಆವರ ಸಾರ್ವಜನಿಕ ಸ್ನೇಹೀ ಜನತಾಂತ್ರಿಕ ತೀರ್ಮಾನಗಳಂತಹ ಒಳ್ಳೆಯ ಕಾರ್ಯಕ್ಕೆ ಬೆಂಬಲ ಇತ್ತರೂ, ಅಗತ್ಯ ಬಿದ್ದಾಗ ಆಡಳಿತದ ಟೀಕಾಕಾರರಾಗಿರುತ್ತಿದ್ದರು. ತಾತಯ್ಯ ಮೊದಲು ಪ್ರಾರಂಭಿಸಿದ್ದು ಹಿತಬೋಧಿನಿ (1883). 1885 ರಲ್ಲಿ ವಾರಪತ್ರಿಕೆ ವೃತ್ತಾಂತ ಚಿಂತಾಮಣಿ-ದಿವಾನ್‌ರ ಸುಧಾರಣಾ ಪ್ರಯತ್ನಗಳನ್ನು ಬೆಂಬಲಿಸುವುದಕ್ಕಾಗಿಯೇ ಶುರು ಹಚ್ಚಿದರು. ಆಬಳಿಕ, ಹಲವು ಕನ್ನಡ-ಇಂಗ್ಲೀಷು ಪ್ರಕಟಣೆಗಳನ್ನು ನಡೆಸಿದರು. ಸಂಪದಭ್ಯುದಯ, ಸಾಧ್ವಿ (ಇವತ್ತಿಗೂ ಹೆಸರಾಗಿದೆ) ಪೌರ-ಸಾಮಾಜಿಕ ಪತ್ರಿಕೆಗಳು ಬಂದವು, ಅಲ್ಲದೆ, ಇಂಗ್ಲೀಷಿನಲ್ಲಿ ಮೈಸೂರ್, ಪ್ರಾಕ್ಟೀಶನರ್, ವೆಲ್ತ್ ಆಫ್ ಮೈಸೂರು, ಮೈಸೂರು ಹೆರಾಲ್ಡ್ ಮತ್ತು ನೇಚರ್ ಕ್ಯೂರ್ ಎಂದೂ ಪ್ರಕಟಗೊಂಡವು.
ಆ ಕಾಲದಲ್ಲಿ ಅವರ ಪ್ರಕಟಣೆಗಳು ಆತ್ಯುತ್ತಮ ಬರವಣಿಗೆ ಹಾಗೂ ಮುದ್ರಣಕ್ಕೆ ಹೆಸರಾಗಿದ್ದವು. ಅವರು ಪ್ರಬಲ ರಾಷ್ಟ್ರೀಯವಾದಿಯಾಗಿದ್ದರು. ಬ್ರಿಟಿಷ್ ಜನವಿರೋಧಿ ನಡಾವಳಿಗಳನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದರು. ಅಧಿಕೃತ ನಿಲುವು ನಿರ್ಧಾರಗಳನ್ನು ಎದುರಿಸಲು ಹಿಂಜರಿಯುತ್ತಿರಲಿಲ್ಲವಂತೆ. ಸೆಡಿಶಿಯಸ್ ರೈಟಿಂಗ್‌ಗಾಗಿ ತಿಲಕ್ ಅವರ ಬಂಧನವಾದಾಗ (1897) ನಿರ್ದಾಕ್ಷಿಣ್ಯವಾಗಿ ವಿರೋಧಿಸಿ ಬರೆದರು. ಹಾಗೆಯೇ, ರಾಜಕೀಯೇತರ ವಿಚಾರಗಳಲ್ಲಿಯೂ ಅವರ ಬರವಣಿಗೆಗಳು ರಾಷ್ಟ್ರೀಯತೆ ಹಾಗೂ ಸಮಾಜಪರ ಆಗಿರುತ್ತಿತ್ತು. ಸಾಮಾಜಿಕವಾಗಿ ಆಭ್ಯುದಯ ವಿಷಯಗಳಾದ ಮಹಿಳಾ ಶಿಕ್ಷಣದ ಪರ ಬರೆದುದಲ್ಲದೆ, ಮೈಸೂರಿನಲ್ಲಿ ಮಹಾರಾಣೀಸ್ ಕಾಲೇಜು ಪ್ರಾರಂಭಕ್ಕೂ ಒತ್ತಡ ತಂದವರಲ್ಲಿ ಸೇರಿದ್ದರು. ಕಾರ್ಮಿಕರ ಪರವಾಗಿಯೂ ಲೇಖನಿಯನ್ನು ಒಳಸಿ ಹಿತಸಾಧಿಸಲು ನಿಂತಿದ್ದರು. ಅವರ ಬರವಣಿಗೆಗಳಲ್ಲಿ ದಲಿತರನ್ನು ಉತ್ತೇಜಿಸಿ, ಬೆಂಬಲ ನೀಡಿ ಸಮಾಜದ ಅವಿಭಾಜ್ಯ ಅಂಗವಾಗಿಸುವ ಪ್ರಯತ್ನಗಳೂ ಇದ್ದವಂತೆ.
(ಮಹಾತ್ಮಾ ಗಾಂಧೀಜಿ ಪತ್ರಿಕೆಗಳನ್ನು ಸ್ಥಾಪಿಸಿಕೊಂಡು ಮುನ್ನಡೆಸಿದವರು. 20ನೇ ಶತಮಾನದ ಆರಂಭದಲ್ಲಿ ದ. ಆಫ್ರಿಕಾದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿದಾಗ ಅಲ್ಲಿ ಕರಿಯರ ವಿರುದ್ಧದ ಇಂಗ್ಲೀಷ್ ಸರಕಾರದ ನಿಲುವನ್ನು ಖಂಡಿಸಲೆಂದೇ ಇಂಡಿಯನ್ ಒಪೀನಿಯನ್ ಶುರು ಮಾಡಿದ್ದರು. ಆ ಬಳಿಕ ಭಾರತಕ್ಕೆ ಬಂದು ಮತ್ತೆ 5 ಪತ್ರಿಕೆಗಳನ್ನು ಹುಟ್ಟುಹಾಕಿ ಸ್ವಾತ೦ತ್ರ್ಯ ಚಳವಳಿಗೆ ಬೆ೦ಬಲ ನೀಡುವುದರೊಂದಿಗೆ ಮಹಿಳಾ ಸಬಲೀಕರಣ, ಖಾದಿ- ಗ್ರಾಮೋದ್ಯೋಗ ಬೆಂಬಲಿಸುವ ಲೇಖನಗಳನ್ನು ಬರೆಯುತ್ತಿದ್ದರು. ಹಾಗೂ ಹರಿಜನ ಎ೦ಬ ಪತ್ರಿಕೆಯನ್ನು ನಡೆಸುತ್ತಿದ್ದರು- ಎಂದಿಲ್ಲಿ ನೆನಪಿಸಿಕೊಳ್ಳ ಬಯಸುತ್ತೇನೆ.)
ಪತ್ರಿಕೋದ್ಯಮವನ್ನು ಸಾರ್ವಜನಿಕ ಜೀವನದ ಗುರಿಸಾಧನೆಗೆ ಪ್ರಬಲ ಪ್ರವೃತ್ತಿಯೆಂದು ಸಮರ್ಪಣಾಭಾವದಿಂದ ತಾತಯ್ಯ ನಡೆಸಿಕೊಂಡು ಬಂದರು. ಹಾಗೂ ಕನ್ನಡ ಪತ್ರಿಕೋದ್ಯಮಕ್ಕೆ ಕಿರೀಟಪ್ರಾಯರಾಗಿ ಜೀವನ ಮುಡಿಪಿಟ್ಟಿದ್ದರು, ಜೊತೆಗೆ, ಎಳೆಯ ಉತ್ತಮ ಪತ್ರಕರ್ತರನ್ನು ಪ್ರೋತ್ಸಾಹಿಸುತ್ತಾ ಮುನ್ನಡೆದರು. ಬದುಕಿನ ಕೊನೆಯ ದಿನಗಳಲ್ಲಿ ಬಹುತೇಕ ಸಮಯವನ್ನು ಪತ್ರಿಕೋದ್ಯಮಕ್ಕೇ ಮೀಸಲಿಡುತ್ತಾ ಬಂದರು. 1908ರಲ್ಲಿ ಮೈಸೂರು ಕೋರ್ಟಿನಿಂದ ಜರ್ನಲಿಸಂನ ಸ್ವಾತಂತ್ರ್ಯವನ್ನು ಹತೋಟಿಸುವ ರೆಗ್ಯಲೇಶನ್ ಕಾನೂನು ಬಂದಾಗ ಪ್ರತಿಭಟಿಸಿದರು. ಸರ್ಕಾರದ ಮೇಲೆ ಹರಿಹಾಯ್ದರು. ಭಾರತದ ಸ್ವಾತಂತ್ರ್ಯ ಚಳವಳಿಗೆ ಟೀಕೆಗಳು ಬಂದಾಗ ಅವರ ನೇತೃತ್ವದಲ್ಲಿ ಪತ್ರಕರ್ತರೆಲ್ಲಾ ಲೇಖನಿಯನ್ನೇ ಆಯುಧವಾಗಿಸಿ ಸೆಟೆದು ನಿಂತರು.
ಮುಂದೆ, ಅವರು ಮೈಸೂರಿನಲ್ಲಿ ಜರ್ನಲಿಸ೦ನ್ನು ಕಾಲೇಜಿನಲ್ಲಿ ಪಠ್ಯವಿಷಯವಾಗಿ ಕಲಿಸಿ ಕೊಡಬೇಕೆಂಬ ಚಿಂತನೆ ನಡೆಸಿ ಒತ್ತಾಯಿಸಿದರು. 2000 ರೂ. ಕೊಡುಗೆಯನ್ನು ಅದಕ್ಕಾಗಿ ತೆಗೆದಿಟ್ಟಿದ್ದರು. 1951 ರಲ್ಲಿ ಭಾರತದಲ್ಲೇ ಪ್ರಥಮವಾಗಿ ಜರ್ನಲಿಸಂ ಡಿಗ್ರಿ ಮೈಸೂರಿನಲ್ಲಿ ಪ್ರಾರಂಭವೇ ಆಗಿಬಿಟ್ಟತು. ಮೈಸೂರು ಅದಾಗಲೇ ದಕ್ಷಿಣ ಭಾರತದ ಶಿಕ್ಷಣ ಕಾಶಿ ಎಂದು ಹೆಸರಾಗಿತ್ತು. ಅವರ ನಿಸ್ವಾರ್ಥ ಬೆಂಬಲ ಕನ್ನಡ ಪತ್ರಿಕೋದ್ಯಮಕ್ಕೆ ಆಗ ದೊರಕಿದ್ದರಿಂದಲೇ ಅದು ಬೆಳೆಯುತ್ತಾ ಮುಂದರಿಯಿತು.
ಇವೆಲ್ಲ ಕೊಡುಗೆಗಳನ್ನು, ಆದೂ 19ನೆಯ ಶತಮಾನದಲ್ಲಿಯೇ ತೊಡಗಿಸಿಕೊಂಡು ಮುನ್ನಡೆಸಿದ ಚಿಟುವಟಿಕೆಗಳಿಂದು ಗುರುತಿಸಲಾಗಿದೆ. ತಾತಯ್ಯನವರ ಸಮಾಜಪರ ಕಳಕಳಿಗಳೊಂದಿಗೆ ಪತ್ರಿಕೋದ್ಯಮದ ವಿಷಯಗಳ ಆಯ್ಕೆ ಪರಿಣಾಮಕಾರೀ ಶೈಲಿ, ಬರವಣಿಗೆಳನ್ನು ಅಳವಡಿಸಿಕೊಂಡಂತೆ ಮುಂದಿನ ಜನಾಂಗಕ್ಕೆ ಅಭ್ಯುದಯ ಪತ್ರಿಕೋದ್ಯಮ ಪಟ್ಟಿಯಡಿಯಲ್ಲಿ ಒಂದು ಸಮಗ್ರ ಪುಸ್ತಕ ಪ್ರಕಾಶಿತವಾಗಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆಯೆಂದೇ ನನಗನಿಸುತ್ತದೆ. ದೇಶಕ್ಕೇ ಆದೊಂದು ಕೊಡುಗೆಯಾದೀತು.
ತಾತಯ್ಯನವರ 'ಉತ್ತೇಜನದಂತೆ ಮುಂದೆ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಪ್ರಾರಂಭವಾದ ಪತ್ರಿಕೋದ್ಯಮ ಬಿ.ಎ.ಯಲ್ಲಿ 1970 ದಶಕದಾರಂಭದಲ್ಲಿ ಅತಿಹೆಚ್ಚು ಅ೦ಕಗಳನ್ನು ಗಳಿಸಿ ತಾತಯ್ಯ ನೆನಪಿನ ವಿಶೇಷ ಮೆಡಲ್ ಪಡೆಯುವ ಅದೃಷ್ಟ ನನ್ನದಾಗಿತ್ತು. ಈ ವರ್ಷ ಸೆಪ್ಟೆ೦ಬರ್ 8 ರಂದು ಅವರ 175ನೇ ಹುಟ್ಟುಹಬ್ಬದಾಚರಣೆಯಲ್ಲಿ ಆಹ್ವಾನಿತನಾಗಿ ಅವರನ್ನು ನೆನಪಿಸಿಕೊಳ್ಳುವ ಪುಣ್ಯವೂ ನನಗೆ ಬಂದಿತ್ತು ಎಂದು ಹರ್ಷಿಸಿ, ತಾತಯ್ಯನವರ ಪತ್ರಿಕೋದ್ಯಮ ಪುಸ್ತಕ ಬೇಗನೆ ಬರುವಂತಾಗಲೆಂದು ಹಾರೈಸುತ್ತೇನೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ