ಹ್ಯೂಸ್ಟನ್: ಅಮೇರಿಕದಲ್ಲಿರುವ ಭಾರತದ ರಾಯಭಾರಿ ಕಚೇರಿಯಿಂದ ರಾಜ್ಯಗಳ ಸಂಸ್ಥಾಪನಾ ದಿನಾಚರಣೆಯನ್ನು ಪುತ್ತಿಗೆ ಮಠದ ಶ್ರೀಕೃಷ್ಣ ಬೃಂದಾವನ ಹ್ಯೂಸ್ಟನ್ ಶಾಖೆಯಲ್ಲಿ ನವೆಂಬರ್ 9ರಂದು ಸಂಭ್ರಮದಿಂದ ಆಚರಿಸಲಾಯಿತು.
ಕರ್ನಾಟಕ, ಪಂಜಾಬ್, ಛತ್ತೀಸ್‌ಗಢ, ಕೇರಳ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ಆಂಧ್ರಪ್ರದೇಶ ಮುಂತಾದ ರಾಜ್ಯಗಳ ಅನಿವಾಸಿಗಳು ಭಾಗವಹಿಸಿದರು.
ಗೌರವಾನ್ವಿತ ಕನ್ಸಲ್ ಜನರಲ್ ಮಂಜುನಾಥ್ ಚನ್ನೀರಪ್ಪ ಹಾಗೂ ಮಠದ ಪ್ರಧಾನ ಅರ್ಚಕರಾದ ರಘುಪತಿ ಭಟ್ ರವರು ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ರಘುಪತಿ ಭಟ್ ರವರು ವೇದಘೋಷಗಳ ಮೂಲಕ ಕಾನ್ಸಲ್ ಜನರಲ್ ರವರಿಗೆ ಗೌರವಾರ್ಪಣೆ ಸಲ್ಲಿಸಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಗೌರವಾನ್ವಿತ ಕಾಂಚನ್ ಜನರಲ್ ರವರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.
ಉಪ ಕ್ಯಾನ್ಸಲ್ ಜನರಲ್ ಪ್ರಶಾಂತ್ ರವರು ಭಾರತದ ಅನೇಕ ರಾಜ್ಯಗಳ ಸಾಧನೆಯ ವಿಚಾರಗಳನ್ನು ಪ್ರಸ್ತುತಪಡಿಸಿದರು ಮತ್ತು ಆನಿವಾಸಿ ಭಾರತೀಯರುಗಳನ್ನು ಸಭೆಗೆ ವಿಶೇಷ ಪರಿಚಯ ಮಾಡಿಸಿದರು.
ಕಲಾಕಾರರುಗಳು ಅವರವರ ರಾಜ್ಯದ ವಿಭಿನ್ನ ಸಂಸ್ಕೃತಿ ಪರಂಪರೆ ಕಲೆ ಮತ್ತು ಅಭಿರುಚಿಗಳನ್ನು ಕಾರ್ಯಕ್ರಮಗಳಲ್ಲಿ ಸುಂದರವಾಗಿ ಅಭಿವ್ಯಕ್ತ ಪಡಿಸಿದರು.
ನಂದ ತಿವಾರಿ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಚಲೇಶ್ ಜಿ ಮತ್ತು ಯಶ್ ಹವಳಿಮನೆ ದೇವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ